ಮೋದಿಯವರೇ ಚುನಾವಣೆ ಟೈಮಲ್ಲಿ ಬಿಟ್ರೆ ಬೇರೆ ಟೈಮಲ್ಲಿ ಕರ್ನಾಟಕ ನೆನಪಾಗಲ್ವಾ ನಿಮಗೆ? ಸಿ.ಎಂ ಪ್ರಶ್ನೆ

Pm Modi : ಮೋದಿಯವರೇ ಚುನಾವಣೆ ಟೈಮಲ್ಲಿ ಬಿಟ್ರೆ ಬೇರೆ ಟೈಮಲ್ಲಿ ಕರ್ನಾಟಕ ನೆನಪಾಗಲ್ವಾ ನಿಮಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾರವಾಗಿ ಪ್ರಶ್ನಿಸಿದರು.   

Written by - Zee Kannada News Desk | Last Updated : Apr 14, 2024, 10:15 PM IST
  • ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಜತೆಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರು 25 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.
  • ನೀವು ನಮ್ಮ ರಾಜ್ಯದ ಜನತೆಗೆ ಏನಾದ್ರೂ ಮಾಡಿದ್ರೆ ಬನ್ನಿ ತೋರ್ಸಿ ಸ್ವಾಮಿ ಎಂದು ಸವಾಲು ಹಾಕಿದರು.
  • ವಿದೇಶದಿಂದ ಕಪ್ಪು ಹಣ ತಂದು ಭಾರತೀಯರ ಖಾತೆಗೆ 15 ಲಕ್ಷ ಹಾಕ್ತೀನಿ ಅಂದ್ರಲ್ಲಾ 15 ರೂಪಾಯಿನಾದ್ರೂ ಹಾಕಿದ್ರಾ ಎಂದು ಪ್ರಶ್ನಿಸಿದರು.
ಮೋದಿಯವರೇ ಚುನಾವಣೆ ಟೈಮಲ್ಲಿ ಬಿಟ್ರೆ ಬೇರೆ ಟೈಮಲ್ಲಿ ಕರ್ನಾಟಕ ನೆನಪಾಗಲ್ವಾ ನಿಮಗೆ? ಸಿ.ಎಂ ಪ್ರಶ್ನೆ title=

ಮೋದಿಯವರೇ ಚುನಾವಣೆ ಟೈಮಲ್ಲಿ ಬಿಟ್ರೆ ಬೇರೆ ಟೈಮಲ್ಲಿ ಕರ್ನಾಟಕ ನೆನಪಾಗಲ್ವಾ ನಿಮಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾರವಾಗಿ ಪ್ರಶ್ನಿಸಿದರು. 

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಎನ್.ಆರ್.ಮೊಹಲ್ಲಾದಲ್ಲಿ ನಡೆದ 'ಪ್ರಜಾಧ್ವನಿ-2' ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. 

ರಾಜ್ಯಕ್ಕೆ ಪ್ರವಾಹ ಬಂದಾಗಲೂ ಬರಲಿಲ್ಲ, ಬರಗಾಲ ಬಂದಾಗಲೂ ಬರಲಿಲ್ಲ. ಚುನಾವಣೆ ಬಂತು ಓಡಿ ಬಂದ್ರಿ. ಸುಳ್ಳು ಹೇಳಿ ಹೋದ್ರಿ. ಯಾವ‌ ಮುಖ ಹೊತ್ತುಕೊಂಡು ರಾಜ್ಯಕ್ಕೆ ಬಂದ್ರಿ? ಇಷ್ಟೊಂದು ಸುಳ್ಳು ಹೇಳೋಕೇ ಬಂದ್ರಾ ಇಲ್ಲಿಗೆ ಎಂದು ಪ್ರಶ್ನಿಸಿದರು. 

ಬಾಂಡ್ ಗಳ ಮೂಲಕ ಸಂಗ್ರಹಿಸಿದ 7600 ಕೋಟಿಗೆ ನೀವು ತೆರಿಗೆ ಕಟ್ಟಿಲ್ಲ? ಇದು ಕ್ರೈಂ ಅಲ್ವೇ? ಈ ಕ್ರೈಂನ ಹೊಣೆ ಹೊರುವವರು ಯಾರು? ಉತ್ತರ ಕೊಡಿ ಮೋದಿಯವರೇ ಎಂದು ಸಿ.ಎಂ.ಆಗ್ರಹಿಸಿದರು.

ನಮ್ಮ ರಾಜ್ಯದ ಜನ ಬರಗಾಲದಲ್ಲಿ ಬೆಂದಿದ್ದಾರೆ. ನಮ್ಮ ರೈತರು ಕಷ್ಟದಲ್ಲಿದ್ದಾರೆ. ನಮ್ಮ ಪಾಲಿನ ಹಣ ಕೊಡಿ ಎಂದು ಕೇಳಿಕೊಂಡಿದ್ದೆವು. ನಾನೇ ಬಂದು ನಿಮ್ಮನ್ನು ಮತ್ತು ಅಮಿತ್ ಶಾ ಇಬ್ಬರನ್ನೂ ಭೇಟಿ ಮಾಡಿ ಮನವಿ ಕೊಟ್ಟಿದ್ದೆನ್ನೆಲ್ಲಾ, ಇವತ್ತಿನವರೆಗೂ ಒಂದೇ ಒಂದು ರೂಪಾಯಿಯನ್ನೂ ರಾಜ್ಯಕ್ಜೆ ಕೊಡಲಿಲ್ಲವಲ್ಲಾ? ಯಾವ ಮುಖ ಹೊತ್ತುಕೊಂಡು ರಾಜ್ಯಕ್ಕೆ ಬಂದು ಮತ ಕೇಳ್ತಾ ಇದೀರಿ ಎಂದು ಖಾರವಾಗಿ ಪ್ರಶ್ನಿಸಿದರು. 

ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸ್ವತಂತ್ರ ಭಾರತದಲ್ಲಿ ಮೋದಿಯಷ್ಟು ಸುಳ್ಳು ಹೇಳುವ  ಪ್ರಧಾನಿ ಯಾರೂ ಬಂದಿಲ್ಲ. ಅಪರೂಪಕ್ಕಾದರೂ ಸತ್ಯ ಹೇಳಿ ಎಂದು ವ್ಯಂಗ್ಯವಾಡಿದರು. 

40% ಸರ್ಕಾರ ಅಂತ ಗುತ್ತಿಗೆದಾರರಿಂದಲೇ ಕರೆಸಿಕೊಂಡ ಏಕೈಕ  ಸರ್ಕಾರ ನಿಮ್ಮ ಬಿಜೆಪಿ ಸರ್ಕಾರ. ಈಗ ನಾವು ನಾಗಮೋಹನ್ ದಾಸ್ ನೇತೃತ್ವದಲ್ಲಿ ಇರುವ ತನಿಖಾ ಆಯೋಗ ರಚನೆಯಾಗಿದೆ. ನಮ್ಮ ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ತೋರಿಸಿ, ದಾಖಲೆ ತಂದು ಒಪ್ಪಿಸಿ ಎಂದು ಸವಾಲು ಹಾಕಿದರು. 

ಹತ್ತತ್ತು ವರ್ಷ ಪ್ರಧಾನಿ ಆಗಿ ಈ ದೇಶದ ರೈತರು, ಕಾರ್ಮಿಕರು, ಮಹಿಳೆಯರು, ಬಡವರ ಪರವಾಗಿ ಒಂದೇ ಒಂದು ಕಾರ್ಯಕ್ರಮ ಮಾಡಿದ್ದರೆ ತೋರಿಸಿ. ವಿದೇಶದಿಂದ ಕಪ್ಪು ಹಣ ತಂದು ಭಾರತೀಯರ ಖಾತೆಗೆ 15 ಲಕ್ಷ ಹಾಕ್ತೀನಿ ಅಂದ್ರಲ್ಲಾ 15 ರೂಪಾಯಿನಾದ್ರೂ ಹಾಕಿದ್ರಾ ಎಂದು ಪ್ರಶ್ನಿಸಿದರು. 

ಅಚ್ಛೇ ದಿನ್ ಆಯೆಗಾ ಅಂದ್ರಲ್ಲಾ ಮೋದಿಜಿ, ಎಲ್ಲಿದೆ ತೋರ್ಸಿ ಅಚ್ಚೆ ದಿನ್ ? 

  • ಡೀಸೆಲ್ ಬೆಲೆ ಕಡಿಮೆ ಆಗಿದೆಯಾ?
  • ಪೆಟ್ರೋಲ್ ಬೆಲೆ ಕಡಿಮೆ ಆಗಿದೆಯಾ? 
  • ಗ್ಯಾಸ್ ಬೆಲೆ ಕಡಿಮೆ ಆಗಿದೆಯಾ? 
  • ಗೊಬ್ಬರದ ಬೆಲೆ ಕಡಿಮೆ ಆಗಿದೆಯಾ? 
  • ಬೇಳೆಕಾಳು ಬೆಲೆ ಕಡಿಮೆ ಆಗಿದೆಯಾ? 
  • ಅಡುಗೆ ಎಣ್ಣೆ ಬೆಲೆ ಕಡಿಮೆ ಆಗಿದೆಯಾ? 
  • ನಿರುದ್ಯೋಗ ಸಮಸ್ಯೆ ಬಗೆಹರಿಸಿದ್ರಾ? 
  • ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ರಾ? 
  • ರೈತರ ಆದಾಯ ದುಪ್ಪಟ್ಟು ಮಾಡಿದ್ರಾ? 
  • ವಿದೇಶದಿಂದ ಕಪ್ಪು ಹಣ ತಂದ್ರಾ?
  • ಮತೆ ಎಲ್ಲಿದೆ ನಿಮ್ಮ ಅಚ್ಚೆ ದಿನ್? ಬನ್ನಿ ಸ್ಚಾಮಿ ತೋರ್ಸಿ ಎಂದು ವ್ಯಂಗ್ಯವಾಡಿದರು. 

ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ, ವರ್ಗದ ಜನ ಸಮುದಾಯಗಳಿಗೆ ನಾವು ಅನುದಾನ ಮೀಸಲಿಡಲು ಕಾನೂನು ಮಾಡಿದ್ದು ನಮ್ಮ ಸರ್ಕಾರ. ನೀವು ಹತ್ತತ್ತು ವರ್ಷ ಪ್ರಧಾನಿಯಾಗಿ ದಲಿತ ಸಮುದಾಯದ , ಹಿಂದುಳಿದ ಜಾತಿ ಸಮುದಾಯಗಳ ಪ್ರಗತಿಗೆ ಒಂದೇ ಒಂದು ಕಾರ್ಯಕ್ರಮವನ್ನಾದರೂ ರೂಪಿಸಿದ್ದೀರಾ ಎಂದು ಪ್ರಶ್ನಿಸಿದರು. 

ಇದನ್ನು ಓದಿ : IPL 2024 : ಗಾಯಕ್ವಾಡ್ - ದುಬೆ ಜೊತೆಯಾಟ : ಮುಂಬೈಗೆ 207 ರನ್ ಗಳ ಟಾರ್ಗೆಟ್ ನೀಡಿದ CSK 

ನಾನು ಮೊದಲ ಮುಖ್ಯಮಂತ್ರಿಯಾಗಿ ಕೊಟ್ಟ ಆಶ್ವಾಸನೆಗಳಲ್ಲಿ ಶೇ95 ರಷ್ಟು ಈಡೇರಿಸಿದೆ. ಈ ಬಾರಿ ನಾವು ಹೇಳಿದ್ದ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ. ನೀವು ನಮ್ಮ ರಾಜ್ಯದ ಜನತೆಗೆ ಏನಾದ್ರೂ ಮಾಡಿದ್ರೆ ಬನ್ನಿ ತೋರ್ಸಿ ಸ್ವಾಮಿ ಎಂದು ಸವಾಲು ಹಾಕಿದರು.

ರಾಹುಲ್ ಗಾಂಧಿ ನ್ಯಾಯಪತ್ರ ನಿಮ್ಮ ಮನೆ ಬಾಗಿಲಿಗೆ ಬರತ್ತೆ  : ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಜತೆಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರು 25 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ ತಕ್ಷಣ ಎಲ್ಲಾ 25 ಗ್ಯಾರಂಟಿಗಳು ಜಾರಿ ಆಗುತ್ತವೆ ಎಂದರು. 

ಹೆಚ್.ಡಿ.ಕೆ ಮಾತಿಂದ ಮಹಿಳಾ ಸಮುದಾಯಕ್ಕೆ ಅವಮಾನ : ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ಮಹಿಳೆಯರು ಹಾದಿ ತಪ್ಪಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿಯವರು ನೀಡಿದ ಹೇಳಿಕೆ ಇಡೀ ಮಹಿಳಾ ಸಮುದಾಯದ ಸ್ವಾಭಿಮಾನವನ್ನು ಕೆಣಕಿದೆ. ಮಹಿಳೆಯರಿಗೆ ಈ ಮಟ್ಟದ ಅವಮಾನ ಖಂಡನೀಯ ಎಂದರು. 

BJP ಯ ದೇಶಭಕ್ತಿಗೆ ಅರ್ಥವೇ ಇಲ್ಲ : ಬ್ರಿಟೀಷರ ವಿರುದ್ಧದ ಭಾರತೀಯರ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ, RSS ನ ಒಬ್ಬೇ ಒಬ್ಬನೂ ಹುತಾತ್ಮ ಆಗಲಿಲ್ಲ. ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎನ್ನುವ ಸ್ವತಂತ್ರ ಹೋರಾಟದಲ್ಲಿ ಇಡೀ ಭಾರತೀಯರು ದುಮುಕಿದರು. ಆದರೆ 1925 ರಲ್ಲೇ ಹುಟ್ಟಿದ್ದ BJP ಯ ಮಾತೃಸಂಸ್ಥೆ RSS ನ ಒಬ್ಬೇ ಒಬ್ಬರೂ ಏಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ ಎನ್ನುವುದಕ್ಕೆ ಇಡಿ ದೇಶದ ಜನರಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದರು

ಇದನ್ನು ಓದಿ : . Mr & Mrs Mahi : ಮಿ ಮತ್ತು ಮಿಸೆಸ್ ಮಾಹಿ ರಿಲೀಸ್ ಗೆ ಡೇಟ್ ಫಿಕ್ಸ್
 
ಮೋದಿಜಿ ಬರೋದು-ಸುಳ್ಳು ಹೇಳಿ ಓಡಿ ಹೋಗೋದೇ ಆಯ್ತು : ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ನಿಲ್ಲಿಸಿದ್ದು ಮೋದಿಯವರ ಕೇಂದ್ರ ಸರ್ಕಾರ. ಈ ಸತ್ಯ ಪ್ರತೀ ವಿದ್ಯಾರ್ಥಿಗೆ ಗೊತ್ತು. ನೀವು ನಿಲ್ಲಿಸಿದ ಸ್ಕಾಲರ್ ಶಿಪ್ ಅನ್ನು ನಾವು ಕೊಡುತ್ತಿದ್ದೇವೆ. ಹೀಗಿದ್ದೂ ನಾವೇ ಸ್ಕಾಲರ್ ಶಿಪ್ ನಿಲ್ಲಿಸಿದ್ದೇವೆ ಎಂದು ಯಾವ ಬಾಯಲ್ಲಿ ಸುಳ್ಳು ಹೇಳ್ತೀರಿ ಎಂದು ಪ್ರಶ್ನಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News