15ನೇ ಶತಮಾನದ ಬೀದರ್ ಕೋಟೆ ಇಂದಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಬೀದರ್ ನಗರವು ಹೇಗೆ ಕೋಟೆಗೆ ಹೆಸರು ವಾಸಿಯಾಗಿದೆ ಕೆಂಪು ಕಲ್ಲಿನ ಸಾಲಿನಿಂದ ನಿಂತಿರುವಂತೆ ಕಾಣುವ ʼಬೀದರ್ ಕೋಟೆʼಯು ಬಹುಮನಿ ಸುಲ್ತಾನರ ಶ್ರೀಮಂತ ಇತಿಹಾಸಕ್ಕೆ ಸಾಕ್ಷಿ ಎನ್ನುವಂತೆ ನಿಂತಿವೆ. ವಿಶಿಷ್ಟ ಕೆತ್ತನೆ ಹಾಗೂ ಶಿಲ್ಪಕಲೆಯನ್ನು ಹೊಂದಿರುವ ಬೀದರ್ ಕೋಟೆ ನೋಡುವುದು ಕೂಡಾ ಒಂದು ಚೆಂದ. ಇದನ್ನು ಹತ್ತಿರದಿಂದ ಕಣ್ತುಂಬಿಸಿಕೊಳ್ಳುವುದೇ ಸಂತಸದ ಸಂಗತಿಯಾಗಿದೆ.
ಇದನ್ನು ಓದಿ :ಇಲ್ಲೊಂದಿದೇ 1200 ವರ್ಷಗಳ ಹಿಂದಿನ ಸಮಾಧಿ, ಅದರ ತುಂಬೆಲ್ಲಾ ಚಿನ್ನವೇ ಅಂತೇ !
ಬೀದರ್ ಕೋಟೆ ಬೆಂಗಳೂರಿನಿಂದ 700 ಕಿಲೋ ಮೀಟರ್ ದೂರದಲ್ಲಿದೆ. ಬೀದರ್ ಕೋಟೆ ತಲುಪಲು ಬೆಂಗಳೂರಿನಿಂದ ಬಸ್, ರೈಲುಗಳಿವೆ. ರೈಲು ನಿಲ್ದಾಣದಿಂದ 3 ಕಿಲೋ ಮೀಟರ್ ದೂರದಲ್ಲಿದ್ದರೆ, ವಿಮಾನ ನಿಲ್ದಾಣದಿಂದ ಈ ಕೋಟೆಯು 11 ಕಿಲೋ ಮೀಟರ್ ದೂರದಲ್ಲಿದೆ. ಬೀದರ್ ಕೋಟೆಗೆ ಪ್ರತಿದಿನವೂ ಭೇಟಿ ನೀಡಲು ಪ್ರವಾಸಿಗರಿಗೆ ಅವಕಾಶವಿದೆ. ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಕೋಟೆಯು ಪ್ರವಾಸಿಗರ ವೀಕ್ಷಣೆಗೆ ತೆರೆದಿರುತ್ತದೆ.
ಇದನ್ನು ಓದಿ : ಜೀವನದಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ, ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ!
15 ನೇ ಶತಮಾನದಲ್ಲಿ ಬೀದರ್ ಕೋಟೆಯನ್ನು ಬಹುಮನಿ ಸುಲ್ತಾನರ ದೊರೆ ಅಹ್ಮದ್ ಷಾ ವಲಿ ಬಹುಮನಿ ನಿರ್ಮಿಸಿದ್ದಾರೆ. ಇದನ್ನು ಅನಂತರ ಕೆಲವು ವರ್ಷಗಳಲ್ಲಿ ನವೀಕರಣ ಮಾಡಲಾಗಿತ್ತು. ಈ ಕೋಟೆಯು ಇಸ್ಲಾಮಿಕ್ ಮತ್ತು ಪರ್ಷಿಯನ್ ವಾಸ್ತುಶಿಲ್ಪವನ್ನು ಹೊಂದಿದೆ. ಇದಕ್ಕೆ ಒಟ್ಟು 7ಮುಖ್ಯ ದ್ವಾರಗಳಿವೆ. ಅಷ್ಟಭುಜಾಕೃತಿಯ 7 ಬುರುಜುಗಳು ಇವೆ. ಇದರಲ್ಲಿ 30 ಕ್ಕೂ ಹೆಚ್ಚು ಇಸ್ಲಾಮಿಕ್ ಸ್ಮಾರಕಗಳು ಮತ್ತು ಮಸೀದಿ ಮತ್ತು ಮಹಲ್‌ಗಳನ್ನು ಕಾಣಬಹುದಾಗಿದೆ.
ಬಜೆಟ್‌ಗೆ ತಕ್ಕಂತೆ ವಿವಿಧ ಹೋಟೆಲ್, ಲಾಡ್ಜ್‌ಗಳು ಲಭ್ಯವಿದೆ. ವಾರಾಂತ್ಯದಲ್ಲಿ ತೆರಳುವವರಿಗೆ ದಿನವಿಡೀ ಅಲ್ಲಿದ್ದು ರಜೆಯ ಮಜಾ ಕಳೆಯಲು ಸೂಕ್ತ ಪ್ರೇಕ್ಷಣೀಯ ಸ್ಥಳವಾಗಿದೆ. ಅಷ್ಟೇ ಅಲ್ಲ, ಬೀದರ್ ನಗರದಲ್ಲಿರುವ ಇನ್ನೂ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.