ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರದಂದು ತನ್ನ ಸಚಿವ ಸಹೋದ್ಯೋಗಿಗಳಿಗೆ ಈ ಲೋಕಸಭಾ ಚುನಾವಣೆ ತೀರ್ಥಯಾತ್ರೆಯಾಗಿತ್ತು ಎಂದು ಹೇಳಿದ್ದಾರೆ.
ಈ ವಿಚಾರವನ್ನು ಸ್ವತಃ ಕೇಂದ್ರ ಸಚಿವರಾಗಿರುವ ನರೇಂದ್ರ ಸಿಂಗ್ ತೋಮರ್ ಬಹಿರಂಗಪಡಿಸಿದ್ದಾರೆ. "ಪ್ರಧಾನಿ ಮೋದಿ ಹಲವು ಚುನಾವಣೆಗಳನ್ನು ನೋಡಿದ್ದಾರೆ ಆದರೆ ಈ ಚುನಾವಣೆ ಪ್ರಚಾರದಂತೆ ಕಾಣುತ್ತಿಲ್ಲ, ಬದಲಾಗಿ ಅದು ಅವರಿಗೆ ತೀರ್ಥಯಾತ್ರೆಯಾಗಿದೆ" ಎಂದು ಹೇಳಿದರು."ಎನ್ಡಿಎ ಸರ್ಕಾರದ ಅಧಿಕಾರಾವಧಿಯನ್ನು ಯಶಸ್ವಿ ಪ್ರಯೋಗವೆಂದು ಹೇಳಬೇಕೆಂದರೆ, ಮೈತ್ರಿಯನ್ನು ಮತ್ತಷ್ಟು ಬಲಪಡಿಸಿಕೊಳ್ಳಬೇಕು ಎಂದು ತೋಮರ್ ಹೇಳಿದರು.
ಮಂಗಳವಾರದಂದು ಪ್ರಧಾನಿ ಮೋದಿ ತಮ್ಮ ಮಂತ್ರಿಗಳ ಸದಸ್ಯರೊಂದಿಗೆ ಸಭೆ ನಡೆಸಿ ಐದು ವರ್ಷಗಳಿಂದ ಯಶಸ್ವಿ ತಂಡವಾಗಿ ಕಾರ್ಯನಿರ್ವಹಿಸಲು ಸಹಕರಿಸಿದ ಸಹೋದ್ಯೋಗಿಗಳನ್ನು ಅಭಿನಂದಿಸಿದರು.ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಎಲ್ಲಾ ಸಚಿವರು ಭಾಗವಹಿಸಿದ್ದರು.
ಈ ವೇಳೆ ಅಕಾಲಿದಳದ ನಾಯಕಿ ಹರ್ಸಿಮಾರತ್ ಕೌರ್ ಮಾತನಾಡಿ "ನಾವು ಶೇ 110 ರಷ್ಟು ಸರ್ಕಾರವನ್ನು ರಚಿಸುವ ವಿಶ್ವಾಸವನ್ನು ಹೊಂದಿದ್ದೇವೆ ಎಂದು ಹೇಳಿದರು. ಇದೇ ವೇಳೆ ಪ್ರತಿಪಕ್ಷದ ಇವಿಎಂಗಳಲ್ಲಿನ ನ್ಯೂನ್ಯತೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೂರು ರಾಜ್ಯಗಳಲ್ಲಿ ಗೆಲುವನ್ನು ಸಾಧಿಸಿದಾಗ ಅವರಿಗೆ ಇವಿಎಮ್ ಗಳು ಒಳ್ಳೆಯವು ಆಗಿರುತ್ತವೆ ಆದರೆ ಅದೇ ಸೋಲನ್ನು ಅನುಭವಿಸಿದಾಗ ಆವುಗಳನ್ನು ಅವರು ದೂಷಿಸಲು ಪ್ರಾರಂಭಿಸುತ್ತಾರೆ" ಎಂದರು