Mohan Bhagwat: ಭಾರತದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಒಗ್ಗಟ್ಟಿನಿಂದ ಇರುವವರೆಗೂ ಯಾವುದೇ ಬಾಹ್ಯ ಶಕ್ತಿಗಳು ನಮಗೆ ಹಾನಿಯುಂಟುಮಾಡಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಇನ್ನೊಂದೆಡೆ, ದೇಶವು ಮುಂದುವರಿಯುವುದನ್ನು ನೋಡಲು ಬಯಸದ ಕೆಲವು ಅಂಶಗಳಿವೆ, ಪದೇ ಪದೇ ಭಾರತೀಯ ಸಮಾಜವನ್ನು ಗುರಿಯಾಗಿಸಿಕೊಂಡು ಅದು ವಿಭಜನೆಯಾಗಬಹುದು ಎಂದು ಅವರು ಊಹಿಸುತ್ತಾರೆ. ಅವರ ಈ ಪ್ರಯತ್ನ ನಿರಂತರವಾಗಿ ಸಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನಾಗ್ಪುರದ ಜಗನ್ನಾಥ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿರುವ ಮೋಹನ್ ಭಾಗವತ್, 'ರಾಕ್ಷಸ ಶಕ್ತಿಗಳು ಭಾರತದ ಅಭಿವೃದ್ಧಿಗೆ ಅಡ್ಡಿಪಡಿಸುತ್ತವೆ ಮತ್ತು ಆಂತರಿಕ ಭಿನ್ನಾಭಿಪ್ರಾಯ ಸೃಷ್ಟಿಸುವ ಮೂಲಕ ತೊಂದರೆ ಸೃಷ್ಟಿಸಲು ಪ್ರಯತ್ನಿಸುತ್ತವೆ' ಎಂದು ಹೇಳಿದ್ದಾರೆ.
ಕೆಲ ದೇಶಗಳು ತಮ್ಮ ಸ್ವಾರ್ಥಕ್ಕಾಗಿ ಬ್ರಿಟಿಷರ ಒಡೆದು ಆಳುವ ಬ್ರಿಟಿಷರ ನೀತಿಯನ್ನು ಅನುಸರಿಸುತ್ತಿವೆ, ಆದರೆ ಈ ಬಾಹ್ಯ ಶಕ್ತಿಗಳು ಅಖಂಡ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬಂಗಾಳದ ವಿಭಜನೆಯ ಸಮಯದಲ್ಲಿ ಬ್ರಿಟಿಷರು ಅದೇ ನೀತಿಯನ್ನು ಅಳವಡಿಸಿಕೊಂಡರು. ಆದರೆ ಇಡೀ ದೇಶವು ಒಗ್ಗಟ್ಟಾಗಿದ್ದ ಕಾರಣ ಅವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರ್ಎಸ್ಎಸ್ ಮುಖ್ಯಸ್ಥರು ಹೇಳಿದ್ದಾರೆ. ಆದರೂ ಕೂಡ, 1947 ರಲ್ಲಿ, ಅವರು ಈ ಕನಸನ್ನು ನನಸಾಗಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ-Lok Sabha Elections 2024: ಪಟ್ನಾದಲ್ಲಿ ವಿರೋಧ ಪಕ್ಷಗಳ ಮಹಾ ಮಂಥನ! ಏನಿರಲಿದೆ ಏಜೆಂಡಾ? ಯಾವ ವಿಷಯಗಳ ಮೇಲೆ ಚರ್ಚೆ?
ನಾವು ಒಂದಾಗಿರುವವರೆಗೆ ನಮ್ಮನ್ನು ಸೋಲಿಸುವ ಶಕ್ತಿ ಜಗತ್ತಿನಲ್ಲಿ ಇಲ್ಲ ಎಂದು ಅವರು ಹೇಳಿದ್ದಾರೆ. ಬಾಹ್ಯ ಶಕ್ತಿಗಳು ಯಾವಾಗಲೂ ಈ ಪ್ರಯತ್ನದಲ್ಲಿ ತೊಡಗಿರುವುದಕ್ಕೆ ಇದೇ ಕಾರಣ. ಭಾರತೀಯ ಮುಸ್ಲಿಮರು ವರ್ಷಗಳಿಂದ ಇಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ನಾವೆಲ್ಲ ಒಂದೇ. ಬ್ರಿಟಿಷರು ವಿಭಜನೆಯನ್ನು ಮಾಡಿದರು. ಅವರು ದೇಶದಲ್ಲಿ ಕೋಮುವಾದದ ಬೀಜವನ್ನು ಮಾತ್ರ ಬಿತ್ತಿದರು ಎಂದು ಆರ್ಎಸ್ಎಸ್ ಮುಖ್ಯಸ್ಥರು ಹೇಳಿದ್ದಾರೆ.
ಬ್ರಿಟಿಷರು, ಮುಸ್ಲಿಮರು ಮತ್ತು ಹಿಂದೂಗಳನ್ನು ಪರಸ್ಪರ ವಿರುದ್ಧವಾಗಿ ಪ್ರಚೋದಿಸುತ್ತಿದ್ದರು ಮತ್ತು ಅವರನ್ನು ಪರಸ್ಪರ ಬದುಕಲು ಬಿಟ್ಟರೆ ಯಾವುದೇ ಅಧಿಕಾರ ಸಿಗುವುದಿಲ್ಲ ಎಂಬುದು ಅವರಿಗೆ ತಿಳಿದಿತ್ತು ಎಂದು ಸಂಘದ ಮುಖ್ಯಸ್ಥರು ಹೇಳಿದ್ದಾರೆ. ತನ್ಮೂಲಕ ಅವರು ಎರಡೂ ಧರ್ಮದ ಜನರ ಪರಸ್ಪರರ ಮನದಲ್ಲಿ ಅಪಾಯ ಸೃಷ್ಟಿಸಿದರು. ಹೀಗಾಗಿ ನಾವು ಒಗ್ಗಟ್ಟಾಗಿರುವವರೆಗೆ ಜಗತ್ತಿನ ಯಾವ ಶಕ್ತಿಯೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ