ನವದೆಹಲಿ: ಪ್ರಧಾನಿ ಮೋದಿ ಮಿಷನ್ ಶಕ್ತಿ ಘೋಷಣೆ ರಾಜಕೀಯ ಪ್ರೇರಿತವಾಗಿದೆ.ಆದ್ದರಿಂದ ಈ ಕುರಿತಾಗಿ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಮಮತಾ ಬ್ಯಾನರ್ಜೀ ತಿಳಿಸಿದರು.
ಇಂದು ಪ್ರಧಾನಿ ಮೋದಿ ಮಿಷನ್ ಶಕ್ತಿಯನ್ನು ಘೋಷಣೆ ಮಾಡಿ ಭಾರತ ಇಂದು ಕೇವಲ ಭೂ, ವಾಯು, ಹಾಗೂ ಜಲಪ್ರದೇಶವನ್ನು ರಕ್ಷಿಸುವ ಸಾಮರ್ಥ್ಯವನ್ನಲ್ಲದೆ ಅಂತರಿಕ್ಷವನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು. ಇಂದು ವಿಜ್ಞಾನಿಗಳು ಲೈವ್ ಉಪಗ್ರಹ ಹೊಡೆದುರುಳಿಸಿದ ನಂತರ ಪ್ರಧಾನಿ ಹೇಳಿಕೆ ನೀಡಿದ್ದರು.
WB CM on #MissionShakti: It's a political announcement, scientists should have announced it, it's their credit. Only one satellite was destroyed, that wasn't necessary, it was lying there since long, it's the prerogative of scientists, when to do it. We will complain to the EC. pic.twitter.com/4WKRXivX1y
— ANI (@ANI) March 27, 2019
ಆದರೆ ಈಗ ವಿಜ್ಞಾನಿಗಳ ಈ ಪ್ರಯತ್ನವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡಿರುವ ಬಗ್ಗೆ ಪ್ರತಿಪಕ್ಷಗಳು ಕಿಡಿಕಾರಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸುದ್ದಿಗೋಷ್ಠಿ ನಡೆಸಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ."ಇದು ರಾಜಕೀಯ ಘೋಷಣೆ ಇದನ್ನು ವಿಜ್ಞಾನಿಗಳು ಘೋಷಿಸಬೇಕಾಗಿತ್ತು.ಇದು ಅವರಿಗೆ ಸಲ್ಲಬೇಕಾದ ಶ್ರೇಯ.ಕೇವಲ ಒಂದು ಉಪಗ್ರಹವನ್ನು ನಾಶ ಪಡಿಸಲಾಗಿದೆ. ಅದರ ಅಗತ್ಯವಿರಲಿಲ್ಲ. ಅದು ಬಹಳ ದಿನಗಳಿಂದಲೂ ಇದೆ.ಇದನ್ನು ಯಾವಾಗ ಮಾಡಬೇಕೆಂದು ವಿಜ್ನಾನಿಗಳಿಗೆ ಗೊತ್ತಿದೆ. ನಾವು ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಮಮತಾ ಬ್ಯಾನರ್ಜೀ" ತಿಳಿಸಿದರು.