ಮಧ್ಯಪ್ರದೇಶ : ಪರಶುರಾಮ ಕಲ್ಯಾಣ ಮಂಡಳಿಯ ಅಧ್ಯಕ್ಷ ಪಂಡಿತ್ ವಿಷ್ಣು ರಜೋರಿಯಾ ಅವರು ಮಧ್ಯಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ 4 ಮಕ್ಕಳನ್ನು ಹೊಂದುವ ಬ್ರಾಹ್ಮಣ ದಂಪತಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ...
ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟೀಕೆ ವ್ಯಕ್ತವಾಗಿದೆ. ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪರಶುರಾಮ ಕಲ್ಯಾಣ ಮಂಡಳಿ ಅಧ್ಯಕ್ಷ ಪಂಡಿತ್ ವಿಷ್ಣು, ‘ಕನಿಷ್ಠ 4 ಮಕ್ಕಳನ್ನು ಹೊಂದಿರುವ ಬ್ರಾಹ್ಮಣ ಸಮುದಾಯದ ದಂಪತಿಗಳಿಗೆ 1 ಲಕ್ಷ ರೂ. ಬಹುಮಾನವನ್ನು ಪರಶುರಾಮ ಕಲ್ಯಾಣ ಮಂಡಳಿ ವತಿಯಿಂದ ನೀಡಲಾಗುವುದು ಎಂದು ತಿಳಿಸಿದ್ದಾರೆ..
ಇದನ್ನೂ ಓದಿ:ಅಣ್ಣನ ಶವದ ಮುಂದೆ ಸಹೋದರಿಯ ರೀಲ್ಸ್..! ಇದೆಂಥಾ ಹುಚ್ಚಾಟ ಗುರು.. ವಿಡಿಯೋ ವೈರಲ್
ನಾವು ನಮ್ಮ ಕುಟುಂಬಗಳ ಮೇಲೆ ಕೇಂದ್ರೀಕರಿಸುವುದನ್ನು ನಿಲ್ಲಿಸಿರುವುದರಿಂದ ಧರ್ಮಾಂಧರು ಅತಿರೇಕ ಹೆಚ್ಚಾಗಿದೆ.. ಭವಿಷ್ಯದ ಪೀಳಿಗೆಯ ಸುರಕ್ಷತೆಗಾಗಿ ಯುವಕರು ಈ ಬಗ್ಗೆ ಗಮನಹರಿಸಬೇಕು. ನಾನು ಈ ಮಂಡಳಿಯ ಅಧ್ಯಕ್ಷನಲ್ಲದಿದ್ದರೂ ಬಹುಮಾನದ ಹಣವನ್ನು ನಿಮಗೆ ನೀಡಲಾಗುವುದು ಎಂದು ವಿಷ್ಣು ಅವರು ತಿಳಿಸಿದ್ದಾರೆ.
ಅನೇಕರು ಮಕ್ಕಳನ್ನು ಹೊಂದುವುದನ್ನು ತಪ್ಪಿಸುತ್ತಾರೆ.. ಏಕೆಂದರೆ ವೆಚ್ಚಗಳು ಹೆಚ್ಚಾಗುತ್ತವೆ ಎನ್ನುವುದು ಅವರ ಭಾವನೆ. ಆದರೆ ಮಕ್ಕಳಿಗೆ ಜನ್ಮ ನೀಡುವಲ್ಲಿ ಹಿಂಜರಿಯಬೇಡಿ.. ಪ್ರತಿಯೊಬ್ಬರು ಕನಿಷ್ಠ 4 ಮಕ್ಕಳನ್ನಾದರೂ ಮಾಡಿಕೊಳ್ಳಿ ಎಂದು ಪಂಡಿತ್ ವಿಷ್ಣು ಅವರು ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.