ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹೋಮಿಯೋಪತಿ ಒಂದು ಪರಿಣಾಮಕಾರಿ ಚಿಕೆತ್ಸೆಯಾಗಿ ಸಾಬೀತಾಗುವ ಎಲ್ಲಾ ಸಾಧ್ಯತೆಗಳು ಇವೆ. ಹೋಮಿಯೋಪತಿ ಮೂಲಕ ಕೊರೊನಾ ವೈರಸ್ ರೋಗಿಗಳನ್ನು ಈಗಾಗಲೇ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಹಲವರು ಗುಣಮುಖರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ನೆಮಿನಾಥ್ ಹೋಮಿಯೋಪತಿ ಆಸ್ಪತ್ರೆ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಪ್ರದೀಪ್ ಗುಪ್ತಾ ಹೇಳಿದ್ದಾರೆ. ಅಷ್ಟೇ ಅಲ್ಲ ಪ್ರಸ್ತುತ ಉದ್ಭವಿಸಿರುವ ಆರೋಗ್ಯ ಬಿಕ್ಕಟ್ಟಿನಿಂದ ದೇಶವನ್ನು ಕಾಪಾಡಲು ಹೋಗಿಗಳಿಗೆ ಚಿಕಿತ್ಸೆ ನೀಡಲು ಹೋಮಿಯೋಪತಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ತಾವು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಕೂಡ ಬರೆದಿರುವುದಾಗಿ ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಡಾ. ಗುಪ್ತಾ, ಮೇ 5ರಂದು ICMR ಅನುಮತಿ ಪಡೆದ ಬಳಿಕ FH ಮೆಡಿಕಲ್ ಕಾಲೇಜಿನಲ್ಲಿ 44 ಕೊವಿಡ್-19 ರೋಗಿಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಈ ವೇಳೆ 22 ರೋಗಿಗಳ ಪ್ರತ್ಯೇಕ ಎರಡು ಗುಂಪುಗಳನ್ನು ರಚಿಸಿ, ಮೊದಲ ಗುಂಪಿಗೆ ಹೋಮಿಯೋಪತಿ ಔಷಧಿಗಳನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ. ಕೇವಲ ಮೂರೇ ದಿನಗಳಲ್ಲಿ ಈ ಎಲ್ಲಾ ರೋಗಿಗಳು ಕೊರೋನಾದ ಲಕ್ಷಣದಿಂದ ಮುಕ್ತರಾಗಿದ್ದು, ಏಳು ದಿನಗಳಲ್ಲಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಅವರ ಒಟ್ಟು ಎರಡು ರಿಪೋರ್ಟ್ ಗಳನ್ನು ಜಾರಿಗೊಳಿಸಲಾಗಿದ್ದು, ಎರಡೂ ರಿಪೋರ್ಟ್ ಗಳಿಂದ ಇದು ಸಾಬೀತಾಗಿದೆ ಎಂದಿದ್ದಾರೆ. ಇನ್ನೊಂದೆಡೆ ಎರಡನೇ ಗುಂಪಿನ ಕೊರೊನಾ ವೈರಸ್ ಸೋಂಕಿತರ ಮೇಲೆ ಇನ್ನೂ ಚಿಕಿತ್ಸೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಐದು ಲಕ್ಷಕ್ಕೂ ಹೆಚ್ಚು ಹೋಮಿಯೋಪತಿ ವೈದ್ಯರಿದ್ದಾರೆ ಎಂದು ಹೇಳಿರುವ ಡಾ.ಪ್ರದೀಪ್ ಗುಪ್ತಾ ಅವರು, 'ದೇಶದ ಯಾವುದೇ ಭಾಗದಲ್ಲಿಯೂ ಕೂಡ ನನ್ನ ವೆಚ್ಚದಲ್ಲಿ ಕರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ನಾನು ಸಿದ್ಧನಾಗಿರುವುದಾಗಿ ಎಂದು ಎಲ್ಲರಿಗೂ ತಿಳಿಸಿದ್ದೇನೆ. ಜನರಿಗೆ ಈಗಾಗಲೇ ಹೋಮಿಯೋಪತಿ ಔಷಧಿಗಳ ಬಗ್ಗೆ ತಿಳಿದಿದೆ. ಈ ಔಷಧಿಗಳನ್ನು ಕಂಟೈನ್‌ಮೆಂಟ್ ವಲಯಗಳಲ್ಲಿ ಉಚಿತವಾಗಿ ವಿತರಿಸಬಹುದು, ಇದರಿಂದ ಗಮನಾರ್ಹವಾಗಿ ಒತ್ತಡವನ್ನು ಕಡಿಮೆಮಾಡಬಹುದು ಎಂದು ಅವರು ಹೇಳಿದ್ದಾರೆ. ನಿಮ್ಮ ಬಳಿ ಯಾವುದೇ ಆಯ್ಕೆ ಇಲ್ಲದಿದ್ದಾಗ ಮತ್ತು ಕರೋನಾ ಲಸಿಕೆ ಸಿದ್ಧವಾಗಲು ಇನ್ನೂ ಸಾಕಷ್ಟು ಸಮಯ ಬೇಕಾಗಿರುವ ಇಂದಿನ ಕಾಲದಲ್ಲಿ ಹೋಮಿಯೋಪತಿ ಚಿಕಿತ್ಸೆ ಯಾವ ಹಾನಿ ಮಾಡಲಿದೆ ಎಂದು ಡಾ. ಗುಪ್ತಾ ಪ್ರಶ್ನಿಸಿದ್ದಾರೆ.
ಇದೇ ವೇಳೆ ಮತ್ತೋರ್ವ ಹೋಮಿಯೋಪತಿ ವೈದ್ಯ ಡಾ. ಸಿದ್ಧಾರ್ಥ್ ಮಿಶ್ರಾ, ಪ್ರಿವೆಂಟಿವ್ ಪ್ಯಾಕೇಜ್ ವೊಂದನ್ನು ಪ್ರಸ್ತುತಪಡಿಸಿದ್ದಾರೆ. ಈ ಪ್ಯಾಕೇಜ್ ನಿಂದ ಹಲವಾರು ರೋಗಿಗಳಿಗೆ ಲಾಭ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ತಜ್ಞರು ಹೋಮಿಯೋಪತಿ ಔಷಧಿಗೆ ತುಂಬಾ ಕಡಿಮೆ ವೆಚ್ಚವಾಗಲಿದ್ದು, ಪ್ರಭಾವಶಾಲಿ ಕೂಡ ಆಗಿವೆ ಎಂದು ಹೇಳಿದ್ದಾರೆ. ಕೊವಿಡ್ 19 ಚಿಕಿತ್ಸೆಗಾಗಿ ಸರ್ಕಾರ ಹೋಮಿಯೋಪತಿ ವೈದ್ಯರಿಗೆ ಚಿಕಿತ್ಸೆಗಾಗಿ ಅವಕಾಶ ಕಲ್ಪಿಸಬೇಕು ಎಂದು ಅವರು ಹೇಳಿದ್ದಾರೆ.