ಈ ನದಿಯಲ್ಲಿ ಹೇರಳವಾಗಿ ಸಿಗುತ್ತೆ ಚಿನ್ನ: ಗೋಲ್ಡನ್‌ ನದಿಯಿಂದ ಜೀವನ ಸಾಗಿಸುತ್ತಾರೆ ಇಲ್ಲಿನ ಜನ

ಇಲ್ಲಿನ ಜನರು ಪ್ರತಿನಿತ್ಯ ನದಿ ದಡಕ್ಕೆ ತೆರಳಿ ನೀರನ್ನು ಸೋಸಿ ಚಿನ್ನ ಸಂಗ್ರಹಿಸುತ್ತಾರೆ. ಜಾರ್ಖಂಡ್‌ನ ತಮರ್ ಮತ್ತು ಸರಂದಾದಂತಹ ಪ್ರದೇಶಗಳಲ್ಲಿ, ಜನರು ಶತಮಾನಗಳಿಂದ ನದಿಯಿಂದ ಚಿನ್ನವನ್ನು ಫಿಲ್ಟರ್ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.

Written by - Bhavishya Shetty | Last Updated : Jun 26, 2022, 02:39 PM IST
  • ಈ ನದಿಯಲ್ಲಿ ಚಿನ್ನ ಹೇರಳವಾಗಿ ಸಿಗುತ್ತದೆ
  • ನದಿಯ ಹೆಸರು ಸ್ವರ್ಣ ರೇಖಾ ನದಿ
  • ಜಾರ್ಖಂಡ್‌ನಲ್ಲಿ ಉದ್ಭವಗೊಳ್ಳುತ್ತರ ಈ ಬಂಗಾರದ ನದಿ
ಈ ನದಿಯಲ್ಲಿ ಹೇರಳವಾಗಿ ಸಿಗುತ್ತೆ ಚಿನ್ನ: ಗೋಲ್ಡನ್‌ ನದಿಯಿಂದ ಜೀವನ ಸಾಗಿಸುತ್ತಾರೆ ಇಲ್ಲಿನ ಜನ title=
Golden River

ಭಾರತದಲ್ಲಿ ಸುಮಾರು 400ಕ್ಕೂ ಅಧಿಕ ನದಿಗಳು ಹರಿಯುತ್ತವೆ. ಅಂತಹ ಪ್ರಮುಖ ನದಿಗಳಲ್ಲಿ ಸ್ವರ್ಣರೇಖಾ ನದಿಯೂ ಒಂದು. ಈ ನದಿಯ ವಿಶೇಷತೆಯನ್ನು ನೀವು ಕೇಳಿದರೆ ಅಚ್ಚರಿ ಪಡೋದು ಗ್ಯಾರಂಟಿ. ಈ ನದಿಯಲ್ಲಿ ಚಿನ್ನ ಹೇರಳವಾಗಿ ಸಿಗುತ್ತದೆ. ಇಲ್ಲಿನ ನೀರನ್ನು ಫಿಲ್ಟರ್‌ ಮಾಡಿದಾಗ ಚಿನ್ನ ಸಿಗುತ್ತದೆ. 

ಇದನ್ನೂ ಓದಿ: Viral Photo: ಗೊಂಬೆ ಮದುವೆಯಾದ ಮಹಿಳೆಗೆ ಜನಿಸಿತು ಗಂಡುಮಗು..!

ಈ ನದಿಯ ಹೆಸರು ಸ್ವರ್ಣ ರೇಖಾ ನದಿ. ಈ ನದಿಯ ಹೆಸರು ಹೇಗಿದೆಯೋ ಅದೇ ರೀತಿ ಚಿನ್ನವೂ ಇದರಿಂದ ಹೊರಬರುತ್ತದೆ. ಈ ನದಿಯು ಜಾರ್ಖಂಡ್‌ನಲ್ಲಿ ಹರಿಯುತ್ತದೆ. ಈ ನದಿಯು ಇಲ್ಲಿ ವಾಸಿಸುವ ಸ್ಥಳೀಯ ಜನರಿಗೆ ಆದಾಯದ ಮೂಲವಾಗಿದೆ. ಇಲ್ಲಿನ ಜನರು ಪ್ರತಿನಿತ್ಯ ನದಿ ದಡಕ್ಕೆ ತೆರಳಿ ನೀರನ್ನು ಸೋಸಿ ಚಿನ್ನ ಸಂಗ್ರಹಿಸುತ್ತಾರೆ. ಜಾರ್ಖಂಡ್‌ನ ತಮರ್ ಮತ್ತು ಸರಂದಾದಂತಹ ಪ್ರದೇಶಗಳಲ್ಲಿ, ಜನರು ಶತಮಾನಗಳಿಂದ ನದಿಯಿಂದ ಚಿನ್ನವನ್ನು ಫಿಲ್ಟರ್ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.

ಸ್ವರ್ಣ ರೇಖಾ ನದಿಯ ಮೂಲವು ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ ಸುಮಾರು 16 ಕಿ.ಮೀ. ದೂರದಲ್ಲಿದೆ. ಈ ನದಿಯು ಜಾರ್ಖಂಡ್‌ನಲ್ಲಿ ಉದ್ಭವಗೊಂಡು ಪಶ್ಚಿಮ ಬಂಗಾಳ ಮತ್ತು ಒಡಿಶಾ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಈ ನದಿಯ ಇನ್ನೊಂದು ವಿಶೇಷವೆಂದರೆ ಜಾರ್ಖಂಡ್‌ನಿಂದ ಹರಿದ ನಂತರ ಈ ನದಿ ಬೇರೆ ಯಾವುದೇ ನದಿಯೊಂದಿಗೆ ಬೆರೆಯದೆ ನೇರವಾಗಿ ಬಂಗಾಳ ಕೊಲ್ಲಿಗೆ ಸೇರುತ್ತದೆ.

ನೂರಾರು ವರ್ಷಗಳ ನಂತರವೂ ವಿಜ್ಞಾನಿಗಳಿಗೆ ಈ ನದಿಯಲ್ಲಿ ಚಿನ್ನ ಏಕೆ ಹರಿಯುತ್ತದೆ ಎಂದು ತಿಳಿಯಲು ಸಾಧ್ಯವಾಗಿಲ್ಲ. ಈ ನದಿಯ ಚಿನ್ನದ ಮೂಲ ನಿಗೂಢವಾಗಿದೆ. ಈ ನದಿಯು ಬಂಡೆಗಳ ಮೂಲಕ ಚಲಿಸುತ್ತದೆ ಮತ್ತು ಇದರಿಂದಾಗಿ ಚಿನ್ನದ ಕಣಗಳು ಅದರಲ್ಲಿ ಬರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ, ಇದು ಇನ್ನೂ ದೃಢಪಟ್ಟಿಲ್ಲ.

ಇದಲ್ಲದೇ ಇನ್ನೊಂದು ನದಿಯಲ್ಲೂ ಚಿನ್ನದ ಕಣಗಳು ಸಿಗುತ್ತವೆ. ಈ ನದಿಯ ಹೆಸರು 'ಕರ್ಕರಿ' ನದಿ. ಕರ್ಕರಿ ನದಿಯ ಬಗ್ಗೆ ಜನರು ಹೇಳುವ ಪ್ರಕಾರ ಚಿನ್ನದ ರೇಖೆಯಿಂದಲೇ ಕೆಲವು ಚಿನ್ನದ ಕಣಗಳು ಈ ನದಿಗೆ ಹರಿಯುತ್ತವೆ. ಸ್ವರ್ಣ ರೇಖಾ ನದಿಯ ಒಟ್ಟು ಉದ್ದ 474 ಕಿ.ಮೀ. ಇದೆ.

ಇದನ್ನೂ ಓದಿ: ʼಮಹಾ ರಾಜಕೀಯ ತಿರುವುʼ: ಮುಂಬೈನಲ್ಲಿ ಜುಲೈ 10ರವರೆಗೆ 144 ಸೆಕ್ಷನ್‌ ಜಾರಿ!

ಈ ನದಿಯಿಂದ ಚಿನ್ನ ತೆಗೆಯುವ ಕೆಲಸ ಸುಲಭವಲ್ಲ. ಇಲ್ಲಿನ ಜನರು ಚಿನ್ನ ಸಂಗ್ರಹಿಸಲು ದಿನವಿಡೀ ಕಷ್ಟಪಡಬೇಕಾಗುತ್ತದೆ. ಇಲ್ಲಿ ಒಬ್ಬ ವ್ಯಕ್ತಿ ಒಂದು ತಿಂಗಳಲ್ಲಿ 70 ರಿಂದ 80 ಚಿನ್ನದ ಕಣಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಅಂದರೆ, ಇಡೀ ದಿನ ಕೆಲಸ ಮಾಡಿದ ನಂತರ, ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಒಂದು ಅಥವಾ ಎರಡು ಚಿನ್ನದ ಕಣಗಳನ್ನು ಮಾತ್ರ ತೆಗೆದುಹಾಕಲು ಸಾಧ್ಯವಾಗುತ್ತದೆ. ಒಂದು ಚಿನ್ನದ ಕಣವನ್ನು ಮಾರಾಟ ಮಾಡುವುದರಿಂದ 80 ರಿಂದ 100 ರೂಪಾಯಿ ಆದಾಯ ಬರುತ್ತದೆ ಎಂಬುದು ಸ್ಥಳೀಯರ ಮಾತು. ಇದರ ಪ್ರಕಾರ ಜನರು ತಿಂಗಳಿಗೆ ಕೇವಲ 5 ರಿಂದ 8 ಸಾವಿರ ರೂ. ಸಂಪಾದಿಸುತ್ತಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News