ಮನಮೋಹನ್ ಸಿಂಗ್ ಯಾವಾಗಲೂ ನೀಲಿ ಟರ್ಬನ್ ಧರಿಸುತ್ತಿದ್ದಿದ್ದೇಕೆ ಗೊತ್ತಾ?

ಮನಮೋಹನ್ ಸಿಂಗ್ ಅವರು 1932 ರಲ್ಲಿ ಜನಿಸಿದರು. ಅವರು ಪ್ರತಿಷ್ಠಿತ ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಆಡಳಿತ ಅಧಿಕಾರಿಯಾಗಿದ್ದರು. ಅವರು ತಮ್ಮ ಸರಳ ಸ್ವಭಾವ ಮತ್ತು ಸೌಮ್ಯವಾದ ಮಾತುಗಳಿಗೆ ಪ್ರಸಿದ್ಧರಾಗಿದ್ದರು. ಅರ್ಥಶಾಸ್ತ್ರಜ್ಞ ಎಂದೇ ಹೆಸರಾಗಿರುವ ಸಿಂಗ್ ಅವರ ಪ್ರಮುಖ ಗುರುತು ಅವರ ನೀಲಿ ಪೇಟವಾಗಿತ್ತು.

Written by - Manjunath N | Last Updated : Dec 27, 2024, 05:33 PM IST
  • ಈ ವೇಳೆ ಮನಮೋಹನ್ ಸಿಂಗ್ ಅವರೇ ನೀಲಿ ಬಣ್ಣದ ಪೇಟವನ್ನೇ ಏಕೆ ಧರಿಸುತ್ತೀರಿ ಎಂದು ಕೇಳಿದ್ದರು.
  • ತಾನು ಕಾಲೇಜು ದಿನಗಳಿಂದಲೂ ನೀಲಿ ಬಣ್ಣದ ಪೇಟ ಧರಿಸುತ್ತಿದ್ದೆ. ನನ್ನ ಸ್ನೇಹಿತರು ನನ್ನನ್ನು ‘ಬ್ಲೂ ಟರ್ಬನ್’ ಎಂದು ಅಡ್ಡಹೆಸರಿನಲ್ಲೇ ಕರೆಯುತ್ತಿದ್ದರು
  • ಇದೇ ಕಾರಣಕ್ಕೆ ಅವರು ಈ ಬಣ್ಣದ ಪೇಟ ಧರಿಸಲು ಆರಂಭಿಸಿದರು.
ಮನಮೋಹನ್ ಸಿಂಗ್ ಯಾವಾಗಲೂ ನೀಲಿ ಟರ್ಬನ್ ಧರಿಸುತ್ತಿದ್ದಿದ್ದೇಕೆ ಗೊತ್ತಾ? title=

ನವದೆಹಲಿ: ಮನಮೋಹನ ಸಿಂಗ್ ವಯಸಹಜ ಖಾಯಿಲೆಯಿಂದ ನಮ್ಮನ್ನ ಅಗಲಿದ್ದಾರೆ.92 ವರ್ಷದ ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರನ್ನ ಅವರ ಆಪ್ತರು ಕರೆಯುತ್ತಿದ್ದದ್ದು ನೀಲಿ ಟರ್ಬನ್ ಎಂದು.

ಮನಮೋಹನ್ ಸಿಂಗ್ ಅವರು 1932 ರಲ್ಲಿ ಜನಿಸಿದರು. ಅವರು ಪ್ರತಿಷ್ಠಿತ ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಆಡಳಿತ ಅಧಿಕಾರಿಯಾಗಿದ್ದರು. ಅವರು ತಮ್ಮ ಸರಳ ಸ್ವಭಾವ ಮತ್ತು ಸೌಮ್ಯವಾದ ಮಾತುಗಳಿಗೆ ಪ್ರಸಿದ್ಧರಾಗಿದ್ದರು. ಅರ್ಥಶಾಸ್ತ್ರಜ್ಞ ಎಂದೇ ಹೆಸರಾಗಿರುವ ಸಿಂಗ್ ಅವರ ಪ್ರಮುಖ ಗುರುತು ಅವರ ನೀಲಿ ಪೇಟವಾಗಿತ್ತು.ನೀಲಿ ಬಣ್ಣದ ಟರ್ಬನ್ ಯಾವಾಲೂ ಮನಮೋಹನ್ ಸಿಂಗ್ ಅವರ ಶಿರದ ಮೇಲೆ ರಾರಾಜಿಸುತ್ತಿತ್ತು. ಈ ಪೇಟ ಅವರ ವ್ಯಕ್ತಿತ್ವದ ಅವಿಭಾಜ್ಯ ಅಂಗವಾಯಿತು. ಅವರನ್ನು ನೀಲಿ ಟರ್ಬನ್ ಎಂದು ಅಡ್ಡಹೆಸರಿನಿಂದಲೇ ಕರೆಯುತ್ತಿದ್ದರು.

ಇದನ್ನೂ ಓದಿ: ಆರ್ಥಿಕ ಸುಧಾರಣೆಯ ಹರಿಕಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ

ನೀಲಿ ಟರ್ಬನ್ ಧರಿಸುತ್ತಿದ್ದಿದ್ದೇಕೆ ಗೊತ್ತಾ?

2006 ರಲ್ಲಿ, ಮನಮೋಹನ್ ಸಿಂಗ್ ಅವರಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಆಫ್ ಲಾ ಪದವಿಯನ್ನು ನೀಡಲಾಯಿತು. ಅಲ್ಲಿ ಹಾಜರಿದ್ದ ಡ್ಯೂಕ್ ಆಫ್ ಎಡಿನ್ ಬರ್ಗ್ ಮತ್ತು ವಿಶ್ವವಿದ್ಯಾಲಯದ ಕುಲಪತಿ ಪ್ರಿನ್ಸ್ ಫಿಲಿಪ್ ಅವರ ಗಮನವನ್ನು ನೀಲಿ ಪೇಟ ಸೆಳೆದಿತ್ತು.

ಈ ವೇಳೆ ಮನಮೋಹನ್ ಸಿಂಗ್ ಅವರೇ ನೀಲಿ ಬಣ್ಣದ ಪೇಟವನ್ನೇ ಏಕೆ ಧರಿಸುತ್ತೀರಿ ಎಂದು ಕೇಳಿದ್ದರು. ಅದಕ್ಕೆ ಸಿಂಗ್ ಅವರು, ತಾನು ಕಾಲೇಜು ದಿನಗಳಿಂದಲೂ ನೀಲಿ ಬಣ್ಣದ ಪೇಟ ಧರಿಸುತ್ತಿದ್ದೆ. ನನ್ನ ಸ್ನೇಹಿತರು ನನ್ನನ್ನು ‘ಬ್ಲೂ ಟರ್ಬನ್’ ಎಂದು ಅಡ್ಡಹೆಸರಿನಲ್ಲೇ ಕರೆಯುತ್ತಿದ್ದರು ಎಂಬ ಸಂಗತಿಯನ್ನು ಹಂಚಿಕೊಂಡಿದ್ದರು.ಅಲ್ಲದೆ ನೀಲಿ ನನ್ನ ನೆಚ್ಚಿನ ಬಣ್ಣ ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ.ಇದೇ ಕಾರಣಕ್ಕೆ ಅವರು ಈ ಬಣ್ಣದ ಪೇಟ ಧರಿಸಲು ಆರಂಭಿಸಿದರು. ಕಾಲಾನಂತರದಲ್ಲೂ ನೀಲಿ ಬಣ್ಣದ ಅವರ ಒಲವು ಮುಂದುವರೆಯಿತು. ಹಾಗೆಯೇ ನೀಲಿ ಪೇಟವು ಒಂದು ಗುರುತಾಗಿ ಮಾರ್ಪಟ್ಟಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News