ಸತ್ತ ನಂತರ ಅಘೋರಿ ಸಾಧುಗಳನ್ನು ಸುಡುವುದಿಲ್ಲ, ಸಮಾಧಿಯೂ ಮಾಡುವುದಿಲ್ಲ !ಇವರ ಬದುಕಿನಂತೆಯೇ ಅಂತ್ಯ ಸಂಸ್ಕಾರ ಪ್ರಕ್ರಿಯೆಯೂ ಭಯಾನಕವೇ

ಅಘೋರಿ ಬಾಬಾಗಳ ಜೀವನಕ್ಕೆ ಆರಂಭ, ಅಂತ್ಯ ಯಾವುದೂ ಇಲ್ಲ ಎನ್ನಲಾಗುತ್ತದೆ. ಇವರ ಬದುಕು ಎಷ್ಟು ಕಠಿಣವೋ, ಇವರ ಅಂತ್ಯ ಸಂಸ್ಕಾರ ಪ್ರಕ್ರಿಯೆಯೂ ಅಷ್ಟೇ ಭಯಾನಕ.  

Written by - Ranjitha R K | Last Updated : Jan 21, 2025, 08:21 PM IST
  • ಕುಂಭ ಮೇಳದಲ್ಲಿ ಈ ಸಾಧುಗಳ ಸಾಗರವೇ ಹರಿದು ಬರುತ್ತಿದೆ.
  • ಕುಂಭ ಮೇಳದಲ್ಲಿ ಕುಂಭ ಸ್ನಾನಕ್ಕೆ ವಿಶೇಷ ಮನ್ನಣೆ ಇದೆ
  • ನಾಗ ಸಾಧುಗಳು ಇಲ್ಲಿಗೆ ಬಂದು ಸ್ನಾನ ಮಾಡುತ್ತಾರೆ.
ಸತ್ತ ನಂತರ ಅಘೋರಿ ಸಾಧುಗಳನ್ನು ಸುಡುವುದಿಲ್ಲ, ಸಮಾಧಿಯೂ  ಮಾಡುವುದಿಲ್ಲ !ಇವರ ಬದುಕಿನಂತೆಯೇ ಅಂತ್ಯ ಸಂಸ್ಕಾರ ಪ್ರಕ್ರಿಯೆಯೂ ಭಯಾನಕವೇ  title=

ಮಹಾಕುಂಭ ಮೇಳ ನಡೆಯುತ್ತಿದೆ. ವಿಶ್ವದ ನಾನಾ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಕುಂಭ ಮೇಲೆ ಆರಂಭವಾಗುತ್ತಿದ್ದ ಹಾಗೆ ಸಹಸ್ರಾರು ಸಂಖ್ಯೆಯಲ್ಲಿ ಕಾಣ ಸಿಗುವವರು ಎಂದರೆ ನಾಗಾ ಸಾಧುಗಳು ಮತ್ತು ಅಘೋರಿ ಬಾಬಾಗಳು. ಹೌದು ಕುಂಭ ಮೇಳದಲ್ಲಿ ಈ ಸಾಧುಗಳ ಸಾಗರವೇ ಹರಿದು ಬರುತ್ತಿದೆ. 

ಕುಂಭ ಮೇಳದಲ್ಲಿ ಕುಂಭ ಸ್ನಾನಕ್ಕೆ ವಿಶೇಷ ಮನ್ನಣೆ ಇದೆ. ನಾಗ ಸಾಧುಗಳು ಇಲ್ಲಿಗೆ ಬಂದು ಸ್ನಾನ ಮಾಡುತ್ತಾರೆ. ನಾಗ ಸಾಧು, ಅಘೋರಿ ಆಗುವ ಪ್ರಕ್ರಿಯೆ ಸುಲಭವಲ್ಲ, ತಮಾಷೆಯೂ ಅಲ್ಲ. ಕಠಿಣ ಪರಿಶ್ರಮ ಪಟ್ಟು ನಾಗಾ ಸಾಧುಗಳಾಗಬೇಕಾಗುತ್ತದೆ. ಒಮ್ಮೆ ನಾಗ ಸಾಧು, ಅಘೋರಿಯಾದ ಬಳಿಕ ಅವರ ಜೀವನವೂ ಹಾಗೆ. ಎಲ್ಲವನ್ನೂ ತ್ಯಜಿಸಿದ ಇವರಿಗೆ ನಂತರ ಶಿವನೇ ಎಲ್ಲಾ. ಇವರು ಶಿವನನ್ನು ಪೂಜಿಸುವ ರೀತಿಯೂ ಬಹಳ ಭಿನ್ನ. 

ಇದನ್ನೂ ಓದಿ: Viral Video: ಅಯ್ಯೋ ಈ ಸುಂದರಿಗೆ ಮೇಕಪ್‌ ಯಾಕೆ ಬೇಕಿತ್ತು ಗುರು.. ನ್ಯಾಚುರಲ್‌ ಆಗೇ ಚೆನ್ನಾಗಿದ್ಲು! ಈಗ ನಿಜಕ್ಕೂ ನೋಡೋಕಾಗ್ತಿಲ್ಲ..

ಇನ್ನು ಅಘೋರಿ ಬಾಬಾಗಳ ಜೀವನಕ್ಕೆ ಆರಂಭ, ಅಂತ್ಯ ಯಾವುದೂ ಇಲ್ಲ ಎನ್ನಲಾಗುತ್ತದೆ. ಇವರ ಬದುಕು ಎಷ್ಟು ಕಠಿಣವೋ, ಇವರ ಅಂತ್ಯ ಸಂಸ್ಕಾರ ಪ್ರಕ್ರಿಯೆಯೂ ಅಷ್ಟೇ ಭಯಾನಕ. ಇವರ ಮೃತದೇಹವನ್ನು ಸುಡುವುದಿಲ್ಲ, ಹೂಳುವುದೂ ಇಲ್ಲ,  ಹಾಗಂತ ಪ್ರಾಣಿ ಪಕ್ಷಿಗಳಿಗೆ ಆಹಾರವಾಗಲಿ ಎಂದು ಬಿಡುವುದೂ ಇಲ್ಲ. ಬದಲಿಗೆ ಮರಣದ ನಂತರ, ಅವರ ಮೃತ ದೇಹವನ್ನು ತಲೆಕೆಳಗಾಗಿ ನೇತು ಹಾಕಲಾಗುತ್ತದೆ. ಹೀಗೆ ನೇತು ಹಾಕಿದ ಮೃತದೇಹದಲ್ಲಿ ಕ್ರಿಮಿಗಳು ಉತ್ಪತ್ತಿಯಾಗುವವರೆಗೆ ಆ ಮೃತ ದೇಹಕ್ಕೆ ಕಾವಲು ನೀಡಲಾಗುತ್ತದೆ. ನಂತರ ದೇಹವನ್ನು ಅಲ್ಲಿಂದ ತೆಗೆದು, ತಲೆಯನ್ನು ಬೇರ್ಪಡಿಸಿ ದೇಹದ ಉಳಿದ ಭಾಗವನ್ನು ಗಂಗಾ ನದಿಯಲ್ಲಿ ಎಸೆಯಲಾಗುತ್ತದೆ.

ಅಘೋರಿಗಳು ಪ್ರಮುಖವಾಗಿ ಶಿವನ ಆರಾಧಕರಾದರೂ ಕಾಳಿಯನ್ನು ಕೂಡಾ ಪೂಜಿಸುತ್ತಾರೆ. ಇವರು ಸಿದ್ದ ಮಂತ್ರಗಳನ್ನು ಜಪಿಸುತ್ತಲೇ ಇರುತ್ತಾರೆ. ಇವರು ಕುಂಭ ಮೇಳ ನಡೆಯುವ ಹೊತ್ತಿನಲ್ಲಿ ಮಾತ್ರ ಜನರ ಕಣ್ಣಿಗೆ ಬೀಳುವುದು.  ಇದು ಬಿಟ್ಟರೆ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. 

ಸ್ಮಶಾನಗಳಲ್ಲಿ ಅಥವಾ ಜನರು ಬಾರದ ಪ್ರದೇಶಗಳಲ್ಲಿಯೇ ಇವರ ವಾಸ. ಅಘೋರಿಗಳು ಮತ್ತು ನಾಗಾ ಸಾಧು ಒಂದೇ ಅಲ್ಲ. ಇವರಿಬ್ಬರ ಮಧ್ಯೆ ಬಹಳ ಮುಖ್ಯ ವ್ಯತ್ಯಾಸ ಇದೆ. ನಾಗಾ ಸಾಧುಗಳು ಬ್ರಹ್ಮಚರ್ಯವನ್ನು ಅನುಸರಿಸುತ್ತಾರೆ. ಜೀವಂತವಾಗಿರುವಾಗಲೇ ಪಿಂಡ ಪ್ರದಾನ ಮಾಡಿ ನಂತರ ಸಾಧುಗಳಾಗುತ್ತಾರೆ. 

ಇದನ್ನೂ ಓದಿ: ಕುಂಭಮೇಳದಲ್ಲಿ ಸುಂದರ ಕಣ್ಣಿನಿಂದ ಫೇಮಸ್ ಆದ ಬಾಲೆ! ಹಿಂದಿ ಸಿನಿಮಾದ ಹೀರೋಯಿನ್ ಆಗಬೇಕಿದ್ದವಳು?!

ಆದರೆ ಅಘೋರಿಗಳು ಹಾಗಲ್ಲ. ಬ್ರಹ್ಮಚರ್ಯವನ್ನು ಅನುಸರಿಸಲೇ ಬೇಕು ಎನ್ನುವುದು ಇಲ್ಲಿ ಕಡ್ಡಾಯ ಅಲ್ಲ. ತಮ್ಮ ದೈಹಿಕ ಆಸೆ ಆಕಾಂಕ್ಷೆ ತೀರಿಸಿಕೊಳ್ಳಲು ಇವರು ಮೃತ ದೇಹಗಳನ್ನು ಕೂಡಾ ಬಳಸಿಕೊಳ್ಳುತ್ತಾರೆಯಂತೆ. ಒಂದರ್ಥದಲ್ಲಿ ಇವರಿಗೆ ಮನುಷ್ಯತ್ಯ್ವ ಎನ್ನುವುದು ಸಂಪೂರ್ಣ ನಾಶವಾಗಿರುತ್ತದೆ. ನಾಗಾ ಸಾಧುಗಳು ಭಿಕ್ಷಾಟನೆಯಿಂದ  ಜೀವನ ಸಾಗಿಸಿದರೆ, ಅಘೋರಿಗಳು ಮಾಂಸವನ್ನು ತಿಂದು ಬದುಕುತ್ತಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News