ನವದೆಹಲಿ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗಾಂಧಿ ಕುಟುಂಬದ ಪರವಾಗಿ ವಿಶೇಷ ಸಂರಕ್ಷಣಾ ಸಮೂಹದ ಮುಖ್ಯಸ್ಥ ಅರುಣ್ ಸಿನ್ಹಾ ಅವರಿಗೆ ಪತ್ರ ಬರೆದಿದ್ದಾರೆ ಮತ್ತು ಈ ಎಲ್ಲಾ ವರ್ಷಗಳಲ್ಲಿ ಭದ್ರತಾ ಸೇವೆಯು ತೋರಿಸಿದ ಕರ್ತವ್ಯದ ಪ್ರಾಮಾಣಿಕತೆ ಮತ್ತು ಸಮರ್ಪಣೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
'ಇಡೀ ಕುಟುಂಬದ ಪರವಾಗಿ, ನಮ್ಮ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಅಂತಹ ಸಮರ್ಪಣೆ, ವಿವೇಚನೆ ಮತ್ತು ವೈಯಕ್ತಿಕ ಕಾಳಜಿಯೊಂದಿಗೆ ನೋಡಿಕೊಂಡ ಎಸ್ಪಿಜಿಗೆ ನಮ್ಮ ಆಳವಾದ ಮೆಚ್ಚುಗೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ" ಎಂದು ಸೋನಿಯಾ ಬರೆದಿದ್ದಾರೆ.
Message from Congress President Smt. Sonia Gandhi to SPG forces. pic.twitter.com/OaWa936LW1
— Congress (@INCIndia) November 9, 2019
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸೋನಿಯಾ ಮತ್ತು ಅವರ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನೀಡಿರುವ ಎಸ್ಪಿಜಿ ರಕ್ಷಣೆ ಹಿಂಪಡೆಯಲು ನಿರ್ಧರಿಸಿದ ನಂತರ ಅವರ ಈ ಪತ್ರ ಬಂದಿದೆ. ಈಗ ಗಾಂಧೀ ಕುಟುಂಬಕ್ಕೆ ಈಗ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಒದಗಿಸಿರುವ ಜೆಡ್ ಪ್ಲಸ್' ಭದ್ರತೆಯನ್ನು ಒದಗಿಸಲಾಗಿದೆ. ಸಿಆರ್ಪಿಎಫ್ ಜವಾಬ್ದಾರಿ ವಹಿಸಿಕೊಂಡ ನಂತರ ಎಸ್ಪಿಜಿ ಭದ್ರತೆಯನ್ನು ಅವರ ನವದೆಹಲಿ ನಿವಾಸಗಳಿಂದ ಹಿಂತೆಗೆದುಕೊಳ್ಳಲಾಗುವುದು ಎನ್ನಲಾಗಿದೆ.
ಮೇ 21, 1991 ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯ ನಂತರ ಗಾಂಧಿ ಕುಟುಂಬಕ್ಕೆ ಎಸ್ಪಿಜಿ ರಕ್ಷಣೆಯನ್ನು ನೀಡಲಾಗಿತ್ತು.