ನವದೆಹಲಿ: ವಿಧಾನಸಭಾ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯುವ ಕೆಲವೇ ಗಂಟೆಗಳ ಮೊದಲು ಬಿಹಾರ ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ ಶುರುವಾಗಿದೆ. ಆರ್.ಜೆ.ಡಿ. ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವಿರುದ್ಧ ಎನ್ಡಿಎ ಶಾಸಕರಿಗೆ ಆಮಿಷವೊಡ್ಡುತ್ತಿರುವ ಆರೋಪ ಕೇಳಿಬಂದಿದೆ.
ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರ ಉರುಳಿಸಲು ಲಾಲು ಪ್ರಸಾದ್ ಯಾದವ್(Lalu Prasad Yadav) ಪ್ಲಾನ್ ಮಾಡ್ತಿದ್ದಾರೆ ಅಂತಾ ಬಿಜೆಪಿ ಮುಖಂಡ ಸುಶೀಲ್ ಮೋದಿ ಆರೋಪ ಮಾಡಿದ್ದರು. ಇದಾದ ಒಂದೇ ದಿನದಲ್ಲಿ ಶಾಸಕ ಲಲ್ಲನ್ ಪಾಸ್ವಾನ್ಗೆ ಲಾಲೂ ಆಮಿಷವೊಡ್ಡುತ್ತಿರುವ ಆಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಲಾಲೂ ಸ್ಪೀಕರ್ ಚುನಾವಣೆ ವೇಳೆ ಆರ್ಜೆಡಿ ಪರ ಕೆಲಸ ಮಾಡಿದರೆ ಆರ್ಜೆಡಿ ಅಧಿಕಾರಕ್ಕೆ ಬಂದ ಸಮಯದಲ್ಲಿ ಮಂತ್ರಿ ಸ್ಥಾನ ಕೊಡುತ್ತೇವೆ ಎಂದು ಆಮಿಷವೊಡ್ಡಿದ್ದಾರೆ.
Nivar ಚಂಡಮಾರುತದಿಂದಾಗಿ ಹಲವು ರೈಲುಗಳ ಸಂಚಾರ ರದ್ದು, ಪೂರ್ಣ ಪಟ್ಟಿಯನ್ನು ಇಲ್ಲಿ ಪರಿಶೀಲಿಸಿ
ಆಡಿಯೋದಲ್ಲಿ ಲಾಲೂ ಪಿಎ ಶಾಸಕರಿಗೆ ಕರೆ ಮಾಡುತ್ತಾರೆ. ಕರೆಯನ್ನ ಶಾಸಕರ ಪಿಎ ಸ್ವೀಕರಿಸುತ್ತಾರೆ. ನಂತರ ಲಾಲೂ ಪಿಎ ಲಾಲೂ ಪ್ರಸಾದ್ ಯಾದವ್ ಶಾಸಕರೊಂದಿಗೆ ಮಾತನಾಡಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಕೂಡಲೇ ಶಾಸಕರು ಕರೆ ಸ್ವೀಕರಿಸುತ್ತಾರೆ. ಆಗ ಲಾಲೂ ಶಾಸಕರನ್ನ ಅಭಿನಂದಿಸಿ ಬಳಿಕ ಮತದಾನದ ಸಂದರ್ಭದಲ್ಲಿ ವಿಧಾನಸಭೆಯಿಂದ ದೂರವಿರುವಂತೆ ಹೇಳುತ್ತಾರೆ.
ಜನವರಿ 1ರಿಂದ ಬದಲಾಗಲಿದೆ ಲ್ಯಾಂಡ್ಲೈನ್ನಿಂದ Mobile ಫೋನ್ಗೆ ಕರೆ ಮಾಡುವ ವಿಧಾನ
ಇದಕ್ಕೆ ಶಾಸಕ ಇದು ಕಷ್ಟದ ಕೆಲಸ ಎನ್ನುತ್ತಾರೆ. ಬಳಿಕ ಮಾತನಾಡಿದ ಲಾಲೂ ಎನ್ಡಿಎ ಸರ್ಕಾರ ಶೀಘ್ರದಲ್ಲೇ ಕುಸಿಯಲಿದೆ. ಆರ್ಜೆಡಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನಿಮಗೆ ಮಂತ್ರಿ ಸ್ಥಾನ ನೀಡಲಾಗುವುದು ಅಂತಾ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ಇದಾಗಿದೆ. ಆದರೆ ಈ ಆರೋಪ ನಿರಾಕರಿಸಿರುವ ಆರ್ಜೆಡಿ, ಇದು ನಕಲಿ ಆಡಿಯೋ. ಬಿಜೆಪಿ ಷಡ್ಯಂತ್ರದಿಂದ ಈ ಆಡಿಯೋ ರಚಿಸಿ ಆರ್ಜೆಡಿಗೆ ಧಕ್ಕೆ ತರಲು ಯತ್ನಿಸಿದೆ ಅಂತಾ ಆರೋಪಿಸಿದೆ.
2020ರಲ್ಲಿ 250ಕ್ಕೂ ಹೆಚ್ಚು ಚೀನೀ ಅಪ್ಲಿಕೇಶನ್ಗಳನ್ನು ನಿಷೇಧಿಸಿದ ಭಾರತ: ಇಲ್ಲಿದೆ ಫುಲ್ ಲಿಸ್ಟ್