ನವದೆಹಲಿ: ಒಂದಕ್ಕಿಂತ ಹೆಚ್ಚು ಸ್ಥಾನಗಳಿಂದ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರುವ ಸಲುವಾಗಿ ಚುನಾವಣಾ ಆಯೋಗವು ಈಗ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.ಇತ್ತೀಚೆಗೆ ಕಾನೂನು ಸಚಿವಾಲಯದಲ್ಲಿ ಶಾಸಕಾಂಗ ಕಾರ್ಯದರ್ಶಿ ಅವರೊಂದಿಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಈ ಪ್ರಸ್ತಾವನೆಯನ್ನು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಭ್ಯರ್ಥಿಗಳ ಮೇಲೆ ಅಂತಹ ನಿರ್ಬಂಧವನ್ನು ವಿಧಿಸಲಾಗದಿದ್ದರೆ, ಚುನಾವಣೆಯಲ್ಲಿ ಗೆದ್ದ ನಂತರ ಒಂದು ಸ್ಥಾನವನ್ನು ತೆರವು ಮಾಡುವ ಮತ್ತು ಉಪಚುನಾವಣೆಗೆ ಒತ್ತಾಯಿಸುವ ಜನರಿಗೆ ಕನಿಷ್ಠ ಭಾರಿ ದಂಡವನ್ನು ವಿಧಿಸಬೇಕು ಎಂದು ಚುನಾವಣಾ ಆಯೋಗ ಹೇಳಿದೆ.
ಇದನ್ನೂ ಓದಿ : ನೀನಾಸಂ ಸತೀಶ್ ಅಭಿನಯದ "ಅಶೋಕ ಬ್ಲೇಡ್"... ಇದರ ಕಥೆ ಏನು ಗೊತ್ತಾ!?
ಚುನಾವಣಾ ಆಯೋಗವು ಇಂತಹ ಕ್ರಮಕ್ಕೆ ಒತ್ತಾಯಿಸುತ್ತಿರುವುದು ಇದೇ ಮೊದಲಲ್ಲ. 2004 ರಲ್ಲಿಯೇ ಈ ಸುಧಾರಣೆಗೆ ಒತ್ತಾಯಿಸಿತ್ತು. ಅಸ್ತಿತ್ವದಲ್ಲಿರುವ ಚುನಾವಣಾ ಕಾನೂನಿನ ಪ್ರಕಾರ, ಅಭ್ಯರ್ಥಿಯು ಸಾರ್ವತ್ರಿಕ ಚುನಾವಣೆ ಅಥವಾ ಉಪಚುನಾವಣೆ ಅಥವಾ ದ್ವೈವಾರ್ಷಿಕ ಚುನಾವಣೆಗಳ ಗುಂಪಿನಲ್ಲಿ ಎರಡು ವಿಭಿನ್ನ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಲು ಅನುಮತಿಸಲಾಗಿದೆ.ಒಬ್ಬ ವ್ಯಕ್ತಿಗೆ ಶಾಸಕಾಂಗ ಅಥವಾ ಸಂಸದೀಯ ಸಂಸ್ಥೆಯಲ್ಲಿ ಒಂದು ಕ್ಷೇತ್ರವನ್ನು ಮಾತ್ರ ಪ್ರತಿನಿಧಿಸಲು ಅವಕಾಶವಿರುವುದರಿಂದ, ಎರಡೂ ಸ್ಥಾನಗಳಲ್ಲಿ ಗೆಲುವುಗಳು ದಾಖಲಾಗಿದ್ದರೆ ಇನ್ನೊಂದು ಸ್ಥಾನವನ್ನು ಖಾಲಿ ಮಾಡಬೇಕಾಗುತ್ತದೆ.
ಇದನ್ನೂ ಓದಿ : ಪ್ರೀತಿ, ಕಂಬನಿ, ಭಾವನೆಗಳ ಬೆಲೆ ಹೇಳಲಿದ್ದಾನೆ ನಮ್ಮ 'ಚಾರ್ಲಿ'..!
1996ರಲ್ಲಿ, ಸರ್ಕಾರವು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದು ಒಬ್ಬ ವ್ಯಕ್ತಿಯನ್ನು ಎರಡಕ್ಕಿಂತ ಹೆಚ್ಚು ಸ್ಥಾನಗಳಿಂದ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಿತು.ತಿದ್ದುಪಡಿಗೆ ಮೊದಲು ಒಬ್ಬ ವ್ಯಕ್ತಿಗೆ ಎಷ್ಟು ಸೀಟುಗಳಿಂದ ಬೇಕಾದರೂ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಲಾಗಿತ್ತು.2004 ರಲ್ಲಿ, ಚುನಾವಣಾ ಆಯೋಗ ಕಾಯಿದೆಯ ಕೆಲವು ಸೆಕ್ಷನ್‌ಗಳಿಗೆ ತಿದ್ದುಪಡಿಯನ್ನು ಪ್ರಸ್ತಾಪಿಸಿತು,ಇದರಿಂದಾಗಿ ಒಬ್ಬ ವ್ಯಕ್ತಿಯು ಒಂದೇ ಬಾರಿಗೆ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.
"ಆದಾಗ್ಯೂ, ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ಉಳಿಸಿಕೊಳ್ಳಬೇಕಾದರೆ, ಎರಡು ಸ್ಥಾನಗಳಿಂದ ಸ್ಪರ್ಧಿಸುವ ಅಭ್ಯರ್ಥಿಯು ಎರಡೂ ಸ್ಥಾನಗಳನ್ನು ಗೆದ್ದರೆ ಸ್ಪರ್ಧಿಯು ತೆರವು ಮಾಡಲು ನಿರ್ಧರಿಸುವ ಸ್ಥಾನಕ್ಕೆ ಉಪಚುನಾವಣೆಯ ವೆಚ್ಚವನ್ನು ಭರಿಸಬೇಕು." ಎಂದು ಹೇಳಿದ್ದಾರೆ. ಉಪಚುನಾವಣೆ ನಡೆಸುವುದರಿಂದ ಸಾರ್ವಜನಿಕ ಬೊಕ್ಕಸಕ್ಕೆ ಅನಗತ್ಯ ಆರ್ಥಿಕ ಹೊರೆ ಬೀಳುತ್ತದೆ ಅಷ್ಟೇ ಅಲ್ಲದೆ ಅಭ್ಯರ್ಥಿಯು ಖಾಲಿ ಮಾಡುವ ಸ್ಥಾನದ ಮತದಾರರಿಗೆ ಅನ್ಯಾಯವಾಗುತ್ತದೆ ಎಂದು ಚುನಾವಣಾ ಆಯೋಗ ಅಭಿಪ್ರಾಯ ಪಟ್ಟಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.