Amit Shah: ಬಿಹಾರ-ಬಂಗಾಳದ ಕೆಲ ಜಿಲ್ಲೆಗಳು ಸೇರಿ ಕೇಂದ್ರಾಡಳಿತ ಪ್ರದೇಶವಾಗಲಿದೆಯೇ?

Amit Shah In Bihar: ಬಿಹಾರ ಹಾಗೂ ಪಶ್ಚಿಮ ಬಂಗಾಳದ 20 ವಿಧಾನಸಭೆ ಕ್ಷೇತ್ರಗಳನ್ನು ಒಗ್ಗೂಡಿಸಿ ಕೇಂದ್ರಾಡಳಿತ ಪ್ರದೇಶವಾಗಲಿದೆ ಎಂಬುದರ ಕುರಿತು ಬಿಸಿ ಚರ್ಚೆಗಳು ಆರಂಭಗೊಂಡಿದ್ದವು. ಬಳಿಕ ಹಲವರ ಮನದಲ್ಲಿ ಈ ಕುರಿತು ಗೊಂದಲ ಮನೆ ಮಾಡಿತ್ತು. ಆದರೆ, ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಕುರಿತಾದ ಚರ್ಚೆಗೆ ಬ್ರೇಕ್ ಹಾಕಿದ್ದಾರೆ.   

Written by - Nitin Tabib | Last Updated : Sep 24, 2022, 06:04 PM IST
  • ಸೀಮಾಂಚಲ್ ಜಿಲ್ಲೆಗಳನ್ನು ಕೇಂದ್ರಾಡಳಿತ ಪ್ರದೇಶ ಮಾಡಲಾಗುವುದಿಲ್ಲ ಎಂದು ಅಮಿತ್ ಶಾ ಅವರು
  • ಕಿಶನ್‌ಗಂಜ್‌ನಲ್ಲಿ ಅನೌಪಚಾರಿಕ ಸಂವಾದದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
  • ಇದು ಬಿಹಾರದ ಭಾಗವಾಗಿದೆ ಮತ್ತು ಬಿಹಾರದಲ್ಲಿ ಉಳಿಯಲಿದೆ.
Amit Shah: ಬಿಹಾರ-ಬಂಗಾಳದ ಕೆಲ ಜಿಲ್ಲೆಗಳು ಸೇರಿ ಕೇಂದ್ರಾಡಳಿತ ಪ್ರದೇಶವಾಗಲಿದೆಯೇ?  title=
Amit Shah In Bihar

Amit Shah: ಬಿಹಾರದ ಸೀಮಾಂಚಲ್ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕೆಲವು ಗಡಿ ಜಿಲ್ಲೆಗಳನ್ನು ಸೇರಿಸಿ ಕೇಂದ್ರಾಡಳಿತ ಪ್ರದೇಶವನ್ನು ರಚಿಸುವ ಯೋಜನೆ ರೂಪಿಸಲಾಗಿದೆಯೇ? ಇತ್ತೀಚೆಗೆ, ಬಿಹಾರದ ರಾಜಕೀಯ-ಸಾಮಾಜಿಕ ವಲಯಗಳಲ್ಲಿ ಸಾಮಾನ್ಯ ಜನರಲ್ಲಿ ಇದು ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ವಿಶೇಷವಾಗಿ ಬಿಹಾರದಲ್ಲಿ ಮಹಾಮೈತ್ರಿಕೂಟ ಸರ್ಕಾರ ರಚನೆಯಾದ ನಂತರ ಗೃಹ ಸಚಿವರು ಪೂರ್ಣಿಯಾ ಮತ್ತು ಕಿಶನ್‌ಗಂಜ್ ಜಿಲ್ಲೆಗಳ ಪ್ರವಾಸವನ್ನು ಕೈಗೊಂಡಿರುವಾಗ ಈ ಚರ್ಚೆಯು ಹೆಚ್ಚು ವೇಗವನ್ನು ಪಡೆದುಕೊಂಡಿತ್ತು. ಏತನ್ಮಧ್ಯೆ, ಈ ಚರ್ಚೆಯು ವೇಗವನ್ನು ಪಡೆಯುತ್ತಲೇ ಇತ್ತು ಮತ್ತು ಕೆಲವೊಮ್ಮೆ ಅದು ಸ್ವಲ್ಪ ಗತಿಯನ್ನು ಕೂಡ ಕಳೆದುಕೊಂಡಿತು. ಇದೀಗ ಅಮಿತ್ ಶಾ ಅವರು ಬಿಹಾರ ತಲುಪಿದಾಗ, ಅವರ ಭೇಟಿಯ ಎರಡನೇ ದಿನವಾದ ಶನಿವಾರ, ಕಿಶನ್‌ಗಂಜ್‌ನಲ್ಲಿ ಅನೌಪಚಾರಿಕ ಸಂವಾದದಲ್ಲಿ, ಸುದ್ದಿಗಾರರು ಅವರನ್ನು ಈ ಕುರಿತಾಗಿ ಪ್ರಶ್ನಿಸಿದ್ದಾರೆ, ಕೇಂದ್ರ ಸರ್ಕಾರವು ಇಂತಹ ಯೋಜನೆಯ ಬಗ್ಗೆ ಗಂಭೀರವಾಗಿದೆಯೇ? ಎಂಬ ಪ್ರಶ್ನೆಯನ್ನು ಅವರಿಗೆ ಕೇಳಲಾಗಿದೆ. ಇದಕ್ಕೆ ತಕ್ಷಣ ಉತ್ತರಿಸಿದ ಅಮಿತ್ ಶಾ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಸೀಮಾಂಚಲ್ ಜಿಲ್ಲೆಗಳನ್ನು ಕೇಂದ್ರಾಡಳಿತ ಪ್ರದೇಶ (ಕೇಂದ್ರಾಡಳಿತ ಪ್ರದೇಶ) ಮಾಡಲಾಗುವುದಿಲ್ಲ ಎಂದು ಅಮಿತ್ ಶಾ ಅವರು ಕಿಶನ್‌ಗಂಜ್‌ನಲ್ಲಿ ಅನೌಪಚಾರಿಕ ಸಂವಾದದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಇದು ಬಿಹಾರದ ಭಾಗವಾಗಿದೆ ಮತ್ತು ಬಿಹಾರದಲ್ಲಿ ಉಳಿಯಲಿದೆ. ಪ್ರತಿಯೊಬ್ಬರಿಗೂ ರಕ್ಷಣೆ ನೀಡಲಾಗುವುದು ಮತ್ತು ಪ್ರದೇಶದಲ್ಲಿ ವಾಸಿಸುವ ಜನರು ಯಾವುದೇ ರೀತಿಯಲ್ಲಿ ಅಸುರಕ್ಷತೆ ಅನುಭವಿಸುವ ಅವಶ್ಯಕತೆ ಇಲ್ಲ. ಗಡಿ ಪ್ರದೇಶದ ಭದ್ರತೆ ಮುಖ್ಯವಾಗಿದೆ, ಆದ್ದರಿಂದ ನಾವು ಈ ಪ್ರದೇಶದ ಭದ್ರತಾ ವ್ಯವಸ್ಥೆಗಳ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ರಾಜ್ಯವನ್ನು ಏಕೆ ವಿಭಜಿಸುವಿರಿ? ಎಂದು ಮರು ಪ್ರಶ್ನಿಸಿದ್ದಾರೆ

ಇದನ್ನೂ ಓದಿ-ISISಗಾಗಿ ಯುವಕರನ್ನು ಸಿದ್ಧಗೊಳಿಸುತ್ತಿದೆ ಪಿಎಫ್ಐ, ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಹುನ್ನಾರದಲ್ಲಿದೆ: NIA

ಪಶ್ಚಿಮ ಬಂಗಾಳ ಮತ್ತು ಬಿಹಾರದ ಕೆಲವು ಜಿಲ್ಲೆಗಳ 20 ವಿಧಾನಸಭಾ ಕ್ಷೇತ್ರಗಳನ್ನು ವಿಲೀನಗೊಳಿಸಿ ಕೇಂದ್ರಾಡಳಿತ ಪ್ರದೇಶವನ್ನು ರಚಿಸಲಾಗುವುದು ಎಂಬ ಚರ್ಚೆಗಳು ಕೇಳಿಬಂದಿದ್ದವು. ಪಾಟ್ನಾದಲ್ಲಿರುವ ಒಂದು ದಿನಪತ್ರಿಕೆಯಲ್ಲಿ ಈ ಬಗ್ಗೆ ಸುದ್ದಿ ಪ್ರಕಟವಾಗಿತ್ತು. ಅಂದಿನಿಂದ ಜನ ಸಾಮಾನ್ಯರ ಮನದಲ್ಲಿ ಈ ಕುರಿತು ಗೊಂದಲ ನಿರ್ಮಾಣಗೊಂಡಿತ್ತು. ಆದರೆ, ಬಿಜೆಪಿ ನಾಯಕ ಶಹನವಾಜ್ ಹುಸೇನ್ ಈ ವಿಷಯವನ್ನು ಈಗಾಗಲೇ ತಿರಸ್ಕರಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಆದರೂ ಕೂಡ ಬಿಹಾರದ ಜನರ ಮನದಲ್ಲಿ ಈ ಚರ್ಚೆ ನಿರಂತರವಾಗಿ ನಡೆಯುತ್ತಲೇ ಇತ್ತು. ಇದೀಗ ಗೃಹಸಚಿವ ಅಮಿತ್ ಶಾ ಅವರೇ ಈ ಬಗ್ಗೆ ಕೇಂದ್ರ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದು, ಅನೌಪಚಾರಿಕ ಮಾತುಕತೆಯಲ್ಲಿದ್ದರೂ, ಅನುಮಾನದ ಪರಿಸ್ಥಿತಿ ಸಂಪೂರ್ಣ ತಳ್ಳಿಹಾಕಿದ್ದಾರೆ.

ಇದನ್ನೂ ಓದಿ-PFI Ban: ಪಿಎಫ್ಐವನ್ನು ನಿಷೇಧಿಸುವಂತೆ ಹಿಂದೂ ಮಹಾಸಭಾ-AIBA ಆಗ್ರಹ, ರಸ್ತೆಗಿಳಿಯಲು ಸಿದ್ಧತೆ

ಇಂಡೋ-ನೇಪಾಳ ಗಡಿಯಲ್ಲಿರುವ ಫತೇಪುರ್ ಬಿಒಪಿಗೆ ಗೃಹ ಸಚಿವರು ಶನಿವಾರವೇ ಭೇಟಿ ನೀಡಿದ್ದಾರೆ ಮತ್ತು ಪಿಲರ್ ನಂ. 151 ಮತ್ತು 152 ಅನ್ನು ಪರಿಶೀಲಿಸಿದ್ದಾರೆ ಮತ್ತು ಸಶಾಸ್ತ್ರ ಸೀಮಾ ಬಲ್ ಅಂದರೆ SSB ಯೊಂದಿಗೆ ಗಡಿ ಪ್ರದೇಶದಲ್ಲಿ ವಿವಿಧ ಚಟುವಟಿಕೆಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ, ಅವರು ಸಶಸ್ತ್ರ ಸೀಮಾ ಬಲ್‌ನ ಫತೇಪುರ್, ಪೆಕಟೋಲ್, ಬೆರಿಯಾ, ಅಮ್ಗಚಿ ಮತ್ತು ರಾಣಿಗಂಜ್ ಗಡಿ ಪೋಸ್ಟ್‌ಗಳನ್ನು ಉದ್ಘಾಟಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News