Ghee Health Benefits: ತುಪ್ಪದ 4 ಆರೋಗ್ಯಕಾರಿ ಪ್ರಯೋಜನಗಳು

ತುಪ್ಪದ ಆರೋಗ್ಯ ಪ್ರಯೋಜನಗಳು: ತುಪ್ಪವು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಸಮತೋಲಿತ ಪ್ರಮಾಣದಲ್ಲಿ ತುಪ್ಪವನ್ನು ಸೇವಿಸುವುದರಿಂದ ಅನೇಕ ಆರೋಗ್ಯಕಾರಿ ಪ್ರಯೋಜನಗಳಿವೆ. ತುಪ್ಪದ ಪ್ರಯೋಜನಗಳು ಏನು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Nov 27, 2022, 10:15 AM IST
  • ತುಪ್ಪವು ನಿಮ್ಮನ್ನು ದೀರ್ಘಕಾಲದವರೆಗೆ ಯಂಗ್ ಅಂಡ್ ಎನರ್ಜೆಟಿಕ್ ಆಗಿ ಇರಿಸುತ್ತದೆ
  • ಪ್ರತಿದಿನ ತುಪ್ಪ ಸೇವನೆಯಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು
  • ತುಪ್ಪದ ಸೇವನೆಯು ಉತ್ತಮ ಜೀರ್ಣಕ್ರಿಯೆ ಸಹಕಾರಿಯಾಗಿದೆ
Ghee Health Benefits: ತುಪ್ಪದ 4 ಆರೋಗ್ಯಕಾರಿ ಪ್ರಯೋಜನಗಳು title=
ತುಪ್ಪದ ಆರೋಗ್ಯ ಪ್ರಯೋಜನಗಳು

ನವದೆಹಲಿ: ಬಹುತೇಕ ಭಾರತೀಯರು ಆಹಾರದ ಜೊತೆಗೆ ತುಪ್ಪವನ್ನು ಸೇವಿಸುತ್ತಾರೆ. ಚಪಾತಿ, ಹೋಳಿಗೆ ಸೇರಿದಂತೆ ಇನ್ನಿತರ ಆಹಾರಗಳ ಜೊತೆಗೆ ತುಪ್ಪವನ್ನು ಸೇರಿಸಿ ಸೇವಿಸುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ. ಸಮತೋಲಿತವಾಗಿ ಬಳಸಿದಾಗ ಮಾತ್ರ ತುಪ್ಪವು ನಿಮ್ಮ ಆರೋಗ್ಯಕ್ಕೆ ಉತ್ತಮ. ‘ಅತಿಯಾದರೆ ಅಮೃತವೂ ವಿಷ’ ಎಂಬಂತೆ ಯಾವುದೂ ಅತಿಯಾಗಬಾರದು.    

ಸಾಮಾನ್ಯವಾಗಿ ಅನೇಕರು ತೂಕ ಇಳಿಸಿಕೊಳ್ಳಲು ತುಪ್ಪ ತಿನ್ನುವುದನ್ನು ನಿಲ್ಲಿಸುತ್ತಾರೆ. ಆದರೆ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಮತ್ತು ಹಾರ್ಮೋನ್ ಸಮತೋಲನ ಕಾಪಾಡಿಕೊಳ್ಳಲು ತುಪ್ಪ ಅತ್ಯಗತ್ಯ. ತುಪ್ಪವು ಹೆಚ್ಚಿನ ಕರಗುವ ಬಿಂದುವನ್ನು ಹೊಂದಿದೆ, ಇದು ಜೀವಕೋಶದ ಕಾರ್ಯಚಟುವಟಿಕೆಗೆ ಹಾನಿ ಮಾಡುವ ಸ್ವತಂತ್ರ ರಾಡಿಕಲ್ಗಳನ್ನು ಉತ್ಪಾದಿಸುವುದನ್ನು ತಡೆಯುತ್ತದೆ. ಮಲೈಕಾ ಅರೋರಾ, ಕರೀನಾ ಕಪೂರ್ ಮತ್ತು ಕತ್ರಿನಾ ಕೈಫ್ ಅವರಂತಹ ಎಷ್ಟೋ ಬಿ-ಟೌನ್ ತಾರೆಯರು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ 1 ಚಮಚ ತುಪ್ಪವನ್ನು ಸೇವಿಸುತ್ತಾರಂತೆ. ಹೀಗಾಗಿ ನೀವೂ ಸಹ ಅಗತ್ಯಕ್ಕೆ ತಕ್ಕಂತೆ ತುಪ್ಪವನ್ನು ಸೇವಿಸುವುದು ಉತ್ತಮ.

ಇದನ್ನೂ ಓದಿ: Diabetes : ಮಧುಮೇಹಿಗಳ ಗಮನಕ್ಕೆ : ನೀವು ಶೂ ಖರೀದಿಸುವಾಗ ನೆನಪಿರಲಿ ಈ ವಿಷಯಗಳು!

ದೈನಂದಿನ ಆಹಾರದಲ್ಲಿ ತುಪ್ಪದ ಆರೋಗ್ಯ ಪ್ರಯೋಜನಗಳು

1) ಹೆಚ್ಚಿನ ಖನಿಜಗಳು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುವ ತುಪ್ಪವು ನರವೈಜ್ಞಾನಿಕ ವ್ಯವಸ್ಥೆ, ಮೂಳೆಗಳು ಮತ್ತು ಮೆದುಳಿನ ಆರೋಗ್ಯಕರ ಕಾರ್ಯಾಚರಣೆಗೆ ಅವಶ್ಯಕವಾಗಿದೆ. ಇದನ್ನು ಪ್ರತಿನಿತ್ಯ ಮಿತವಾಗಿ ಸೇವಿಸುವುದು ಮೆದುಳಿಗೆ ನಿಜವಾಗಿಯೂ ಒಳ್ಳೆಯದು.

2) ತುಪ್ಪವು ನಿಮ್ಮನ್ನು ದೀರ್ಘಕಾಲದವರೆಗೆ ಯಂಗ್ ಅಂಡ್ ಎನರ್ಜೆಟಿಕ್ ಆಗಿ ಇರಿಸುತ್ತದೆ. ಇದು ಸಕ್ರಿಯ ಚಯಾಪಚಯವನ್ನು ಉತ್ತೇಜಿಸುತ್ತದೆ. ರೋಟಿಯಲ್ಲಿನ ಅಂಟು ಮತ್ತು ನಾರಿನ ಸುಲಭ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.

3) ತುಪ್ಪವು ಬಹಳಷ್ಟು ಬ್ಯುಟರಿಕ್ ಆಮ್ಲಗಳನ್ನು ಹೊಂದಿರುತ್ತದೆ, ಇದು ರೋಗದ ವಿರುದ್ಧ ಹೋರಾಡುವ T ಕೋಶಗಳನ್ನು ಉತ್ಪಾದಿಸಲು ದೇಹವನ್ನು ಉತ್ತೇಜಿಸುತ್ತದೆ. ತುಪ್ಪವು ಪ್ರಮುಖ ಕೊಬ್ಬಿನಾಮ್ಲಗಳು ಮತ್ತು ಕೊಬ್ಬು ಕರಗುವ ಜೀವಸತ್ವಗಳ (A, D, E, ಮತ್ತು K) ಗಮನಾರ್ಹ ಮೂಲವಾಗಿದೆ.

4) ತುಪ್ಪದ ಸೇವನೆಯು ಉತ್ತಮ ಜೀರ್ಣಕ್ರಿಯೆಗೆ ಸಂಬಂಧಿಸಿದೆ. ಇದು ಹೊಟ್ಟೆಯ ಆಮ್ಲದ ಉತ್ಪಾದನೆಯನ್ನು ಸುಗಮಗೊಳಿಸುತ್ತದೆ, ಇದು ಆರೋಗ್ಯಕರ ಜೀರ್ಣಕ್ರಿಯೆಗೆ ಅವಶ್ಯಕವಾಗಿದೆ.

ಇದನ್ನೂ ಓದಿ: weight loss Tips : ವೇಗವಾಗಿ ದೇಹ ತೂಕ ಇಳಿಸಿಕೊಳ್ಳಲು ಈ 3 ಯೋಗಾಸನಗಳನ್ನು ಪ್ರಯತ್ನಿಸಿ!

ಹೀಗಾಗಿ ನಿಮ್ಮ ಚಪಾತಿಗೆ ತುಪ್ಪವನ್ನು ಹಚ್ಚಿ ತಿನ್ನಲು ಹಿಂಜರಿಯಬೇಡಿ. ಆದರೆ ಸರಿಯಾದ ಪ್ರಮಾಣದಲ್ಲಿ ತುಪ್ಪವನ್ನು ಸೇವಿಸುವುದು ಉತ್ತಮ. ಒಂದು ಸಣ್ಣ ಟೀಚಮಚ ತುಪ್ಪವನ್ನು ಚಪಾತಿ ಅಥವಾ ರೋಟಿಗೆ ಹಚ್ಚಿಕೊಂಡು ತಿನ್ನುವುದು ಉತ್ತಮ. ಅತಿಯಾಗಿ ಮಾಡುವ ಪ್ರತಿಯೊಂದು ಕ್ರಿಯೆಯೂ ದೇಹಕ್ಕೆ ಹಾನಿಕರವಾಗಿರುತ್ತದೆ. ಹೀಗಾಗಿ ಇದರ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News