ಜನಪ್ರಿಯತೆಯ ಮೌಲ್ಯದಲ್ಲಿ ಕಿಂಗ್ ಖಾನ್ ಹಿಂದಿಕ್ಕಿದ ವಿರಾಟ್ ಕೊಹ್ಲಿ

     

Last Updated : Dec 25, 2017, 02:51 PM IST
ಜನಪ್ರಿಯತೆಯ ಮೌಲ್ಯದಲ್ಲಿ ಕಿಂಗ್ ಖಾನ್ ಹಿಂದಿಕ್ಕಿದ ವಿರಾಟ್ ಕೊಹ್ಲಿ title=

ನವದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು ಅದರ ಫಲವಾಗಿ ಇತ್ತೀಚೆಗಿನ ಬ್ರ್ಯಾಂಡ್ ಮೌಲ್ಯದ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು ಅದರಲ್ಲಿ ಬಾಲಿವುಡ್ ನ ಶಾರುಖ್ ಖಾನ್ ರವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

ರೈಸ್ ಆಫ್ ಮಿಲೆನಿಯಲ್ಸ್ :ಇಂಡಿಯಾಸ್ ಮೋಸ್ಟ ವ್ಯಾಲುಬಲ್ ಸೆಲೆಬ್ರಿಟಿಸ್ ಎನ್ನುವ ವರದಿಯಲ್ಲಿ ಕೊಹ್ಲಿ ಜೊತೆಗೆ ದೀಪಿಕಾ ಪಡುಕೋಣೆ ರನ್ವೀರ್ ಸಿಂಗ್ ಟಾಪ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 

ಡಫ್ ಮತ್ತು ಪೆಲ್ಪ್ಸ್ ನಿರ್ದೇಶಕರಾದ  ವರುಣ್ ಗುಪ್ತಾ ಹೇಳುವಂತೆ ಮೊದಲ ಬಾರಿಗೆ ಈ ರ್ಯಾಂಕ್ ಪಟ್ಟಿಯಲ್ಲಿ ಶಾರುಖ್ ಖಾನ್ ತಮ್ಮ ಮೊದಲನೆಯ ಸ್ಥಾನದಿಂದ ಕೆಳಗಿಳಿದಿದ್ದಾರೆ,ಬಾಲಿವುಡ್ ತಾರೆಗಳು ನಿರಂತರವಾಗಿ ರ್ಯಾಂಕಿಂಗ್ ಪಟ್ಟಿಯಲ್ಲಿ ಪ್ರಾಬಲ್ಯವನ್ನು ಸಾಧಿಸುತಿದ್ದಾರೆ ಎಂದು ತಿಳಿಸಿದ್ದಾರೆ. ಈ ರ್ಯಾಂಕಿಂಗ್ ಪಟ್ಟಿಯನ್ನು ಅವರು ಜಾಹಿರಾತುಗಳಿಗೆ ಪಡೆಯುವ ಸಂಭಾವನೆಯ ಆಧಾರದ ಮೇಲೆ ಬ್ರ್ಯಾಂಡ್ ಮೌಲ್ಯವನ್ನು ನಿರ್ಧರಿಸಲಾಗುತ್ತದೆ.

  

Trending News