ಶ್ರೀಮಾ ಸಿನಿಮಾಸ್ ಲಾಂಛನದಲ್ಲಿ ಎಂ ಶ್ರೀನಿವಾಸ್ ಬಾಬು ಅವರು ನಿರ್ಮಿಸಿರುವ, ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ಹಾಗೂ "ಬಿಗ್ ಬಾಸ್" ಖ್ಯಾತಿಯ ರಾಜೀವ್ ಹನು ನಾಯಕರಾಗಿ ನಟಿಸಿರುವ "ಬೇಗೂರು ಕಾಲೋನಿ" ಚಿತ್ರಕ್ಕಾಗಿ ಬಹದ್ದೂರ್ ಚೇತನ್ ಕುಮಾರ್ ಬರೆದಿರುವ "ರಾ ರಾ ರಾಘವ" ಎಂಬ ಹಾಡು ಸಂಕ್ರಾಂತಿ ಹಬ್ಬದ ಶುಭದಿನ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಾಯಕನನ್ನು ಪರಿಚಯಿಸುವ ಈ ಗೀತೆಯನ್ನು ತಮ್ಮ ಅಮೋಘ ಗಾಯನದ ಮೂಲಕ ಜನಪ್ರಿರಾಗಿರುವ ಅಂತೋನಿ ದಾಸ್ ಹಾಡಿದ್ದಾರೆ. ಅಭಿನಂದನ್ ಕಶ್ಯಪ್ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ: ಬೆಳಗೆದ್ದ ಕೂಡಲೇ ನೀರಲ್ಲಿ ನೆನೆಸಿದ ಈ ಒಣಹಣ್ಣನ್ನು ತಿನ್ನಿ.. ಸೊಂಟದ ಬೊಜ್ಜು ಕೇವಲ ಎರಡೇ ವಾರದಲ್ಲಿ ಕರಗಿ ಸ್ಲಿಮ್ ಆಗ್ತೀರಾ!
"ರಾಜೀವ" ಚಿತ್ರದ ನಂತರ ರಾಜೀವ್ ಹನು ಹಾಗೂ ಫ್ಲೈಯಿಂಗ್ ಕಿಂಗ್ ಮಂಜು ಅವರ ಕಾಂಬಿನೇಶನ್ ನಲ್ಲಿ ಈ ಚಿತ್ರ ಮೂಡಿಬಂದಿದೆ. "ಹೋರಾಟಕ್ಕೆ ಹೊಡೆದಾಟಕ್ಕೆ ಬಲಿಯಾಗೋದು ಬಡವರ ಮಕ್ಕಳೇ" ಎಂಬ ಅಡಿಬರಹವಿರುವ ಈ ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಕುತೂಹಲ ಮೂಡಿಸಿದೆ. ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರವನ್ನು ಆದಷ್ಟು ಬೇಗ ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ.
ಇದನ್ನೂ ಓದಿ: 14 ಲಕ್ಷ ರೂ. ಖರ್ಚು ಮಾಡಿ ದೇಹದಿಂದ ಮೂಳೆಗಳನ್ನೇ ತೆಗೆಸಿ, ಕಿರೀಟ ಮಾಡಲು ರೆಡಿಯಾದ ಯುವತಿ..! ಏಕೆ ಗೊತ್ತೆ..?
ರಾಜೀವ್ ಹನು "ಬೇಗೂರು ಕಾಲೋನಿ" ಚಿತ್ರದ ನಾಯಕರಾಗಿ ಅಭಿನಯಿಸಿದ್ದು, ವಿಶೇಷ ಪಾತ್ರದಲ್ಲಿ ನಿರ್ದೇಶಕ ಫ್ಲೈಯಿಂಗ್ ಕಿಂಗ್ ಮಂಜು ಕೂಡ ಅಭಿನಯಿಸಿದ್ದಾರೆ. ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೊಸಾನಿ ಕೃಷ್ಣ, ಬಲ ರಾಜವಾಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆರು ಹಾಡುಗಳಿರುವ "ಬೇಗೂರು ಕಾಲೋನಿ"ಗೆ ಅಭಿನಂದನ್ ಕಶ್ಯಪ್ ಸಂಗೀತ ನೀಡಿದ್ದಾರೆ. ಕಾರ್ತಿಕ್ ಎಸ್ ಛಾಯಾಗ್ರಹಣ ಹಾಗೂ ಪ್ರಮೋದ್ ತಲ್ವಾರ್ ಅವರ ಸಂಕಲನವಿರುವ ಈ ಚಿತ್ರಕ್ಕೆ ತ್ರಿವೇದಿ ನಾಗ್ ಮತ್ತು ಫ್ಲೈಯಿಂಗ್ ಕಿಂಗ್ ಮಂಜು ಅವರ ನಿರ್ಮಾಣ ನಿರ್ವಹಣೆಯಿದೆ. ರವಿ ಫಿಲಂಸ್ ಮೂಲಕ ಈ ಚಿತ್ರ ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.