ಪತ್ರಕರ್ತರ ಮೇಲೆ ಹಿರಿಯ ನಟನಿಂದ ಹಲ್ಲೆ..! ಮೈಕ್‌ನಿಂದ ವರದಿಗಾರನ ತಲೆ ಓಡೆದ ಮೋಹನ್‌ ಬಾಬು.. 

Manchu Manoj on Mohan Babu : ಖ್ಯಾತ ತೆಲುಗು ನಟ ಮೋಹನ್‌ಬಾಬು ಅವರು ಕುಟುಂಬ ಸಮಸ್ಯೆ ಬೀದಿಗೆ ಬಂದಿದೆ. ಕಿರಿಯ ಪುತ್ರ ಮಂಚು ಮನೋಜ್‌ ಜತೆಗೆ ಜಗಳವಾಡಿಕೊಂಡಿರುವ ಹಿರಿಯ ನಟ ಇದೀಗ ಖಾಸಗಿ ವಾಹಿನಿಯ ವರದಿಗಾರನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಈ ಕುರಿತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

Written by - Krishna N K | Last Updated : Dec 11, 2024, 02:03 PM IST
    • ಹಿರಿಯ ನಟ ಮೋಹನ್‌ ಬಾಬು ಅವರ ಕುಟುಂಬ ಜಗಳ ಇದೀಗ ಜಗಜ್ಜಾಹೀರಾಗಿದೆ.
    • ತಂದೆ ಮಕ್ಕಳ ಹೊಡೆದಾಟ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.
    • ಹಿರಿಯ ನಟ ವರದಿ ಮಾಡಲು ಬಂದಿದ್ದ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ.
ಪತ್ರಕರ್ತರ ಮೇಲೆ ಹಿರಿಯ ನಟನಿಂದ ಹಲ್ಲೆ..! ಮೈಕ್‌ನಿಂದ ವರದಿಗಾರನ ತಲೆ ಓಡೆದ ಮೋಹನ್‌ ಬಾಬು..  title=

Mohan babu attack on Journalist : ತೆಲುಗು ಚಿತ್ರರಂಗದ ಖ್ಯಾತ ಹಿರಿಯ ನಟ ಮೋಹನ್‌ ಬಾಬು ಅವರ ಕುಟುಂಬ ಜಗಳ ಇದೀಗ ಜಗಜ್ಜಾಹೀರಾಗಿದೆ. ತಂದೆ ಮಕ್ಕಳ ಹೊಡೆದಾಟ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಇದರ ನಡುವೆ ಹಿರಿಯ ನಟ ವರದಿ ಮಾಡಲು ಬಂದಿದ್ದ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ.

ಹೌದು.. ಸ್ಟಾರ್‌ ನಟ ಮೋಹನ್‌ಬಾಬು ಅವರಿಗೆ ವಿಷ್ಣು ಮಂಚು ಮತ್ತು ಮನೋಜ್ ಮಂಚು ಎಂಬ ಇಬ್ಬರು ಪುತ್ರರು ಮತ್ತು ಲಕ್ಷ್ಮಿ ಮಂಚು ಎಂಬ ಪುತ್ರಿ ಇದ್ದಾರೆ. ತಂದೆಯಂತೆಯೇ ತೆಲುಗು ಚಿತ್ರರಂಗದ ಪ್ರಮುಖ ನಟರು ಮೂವರು. ಕೆಲವು ದಿನಗಳ ಹಿಂದೆ ನಟ ಮೋಹನ್‌ಬಾಬು ಅವರು ಪುತ್ರ ಮನೋಜ್ ನಡುವೆ ಆಸ್ತಿಗೆ ಸಂಬಂಧಿಸದಂತೆ ಜಗಳ ಶುರುವಾಗಿತ್ತು. ಇದೀಗ ಈ ವಿಚಾರ ತಾರಕಕ್ಕೇರಿದೆ..

ಇದನ್ನೂ ಓದಿ:ಡಿವೋರ್ಸ್‌ ನೀಡಿದ್ದೇ ತಡ, ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ನಟಿ..! ವಿಡಿಯೋ ನೋಡಿ ಫ್ಯಾನ್ಸ್‌ ಶಾಕ್‌..

ನಟ ಮನೋಜ್ ತಮ್ಮ ತಂದೆ ಮೋಹನ್‌ಬಾಬು ಅವರು ತಮ್ಮ ಮೇಲೆ ಹಾಗೂ ತಮ್ಮ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೈದರಾಬಾದ್‌ನ ಪಣಹಗಿರಿ ಶೆರಿಫ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಧ್ಯ ಚಿಕಿತ್ಸೆ ಪಡೆದುಕೊಂಡಿರುವ ನಟ ಕುತ್ತಿಗೆಗೆ ಬೆಲ್ಟ್ ಹಾಕಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.

ನಟ, ನಿರ್ಮಾಪಕ, ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಮೋಹನ್ ಬಾಬು ಹಾಗೂ ಅವರ ಪುತ್ರ ಮಂಜು ಮಂಜು ಅವರು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೇ ವೇಳೆ ಮನೋಜ್ ತಮ್ಮ ಬೆಂಬಲಿಗರು ಹಾಗೂ ವರದಿಗಾರರನ್ನು ತಂದೆ ಮೋಹನ್‌ಬಾಬು ಮನೆಗೆ ಕರೆದೊಯ್ದಿದ್ದಾರೆ. ಅಲ್ಲಿ ದೈತ್ಯ ಕಬ್ಬಿಣದ ಗೇಟಿನ ಹೊರಗೆ ನಿಂತಿದ್ದ ಮನೋಜ್ ಬಾಗಿಲು ತೆರೆಯುವಂತೆ ಜೋರಾಗಿ ಕೂಗಾಡಿದ್ದರು..

ಇದನ್ನೂ ಓದಿ:ದೀಪಿಕಾ ಪಡುಕೋಣೆ ಪುತ್ರಿ ದುವಾಗೆ ಅವರಜ್ಜಿ ಕೊಟ್ಟ ಗಿಫ್ಟ್ ಏನು? ಎಲ್ಲಾ ಬಿಟ್ಟು ಈ ಉಡುಗೊರೆಯನ್ನೇ ಕೊಟ್ಟಿದ್ದೇಕೆ?

ಕಾಂಪೌಂಡ್‌ನಲ್ಲಿದ್ದ ಮೋಹನ್ ಬಾಬು ಬೆಂಬಲಿಗರು ಬಾಗಿಲು ತೆರೆಯದಂತೆ ತಡೆದರು. ಆದರೆ ಅವರ ವಿರೋಧದ ನಡುವೆಯೂ ಮಂಜು ಮನೋಜ್ ಬೆಂಬಲಿಗರು ಗೇಟ್ ಒಡೆದು ಒಳ ನುಗ್ಗಿದರು. ಇವರೊಂದಿಗೆ ಪತ್ರಕರ್ತರು ಕ್ಯಾಮೆರಾ ಹಿಡಿದು ಸುದ್ದಿ ಸಂಗ್ರಹಿಸಲು ತೆರಳಿದರು.

ಇದೇ ವೇಳೆ ಮೋಹನ್‌ಬಾಬು ಬೆಂಬಲಿಗರು ಒಳ ಪ್ರವೇಶಿಸದಂತೆ ತಡೆಯಲು ಯತ್ನಿಸಿ ಹಲ್ಲೆ ನಡೆಸಿದ್ದಾರೆ. ಮೋಹನ್ ಬಾಬು ತಮ್ಮ ಬೆಂಬಲಿಗರೊಂದಿಗೆ ವಾಗ್ದಾಳಿ ನಡೆಸಿದರು. ಈ ವೇಳೆ ಸಿಕ್ಕಿಬಿದ್ದ ವರದಿಗಾರರನ್ನು ಮೋಹನ್ ಬಾಬು ಮೈಕ್ ಕಿತ್ತು ಥಳಿಸುವ ಮೂಲಕ ಓಡಿಸಿದ್ದಾರೆ. 

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ರಾಚಕೊಂಡ ಪೊಲೀಸರು ಎರಡೂ ಕಡೆಯವರನ್ನು ಸಮಾಧಾನಪಡಿಸಿದರೂ ಸಮಸ್ಯೆ ಶಮನವಾಗದ ಕಾರಣ ಸ್ಥಳವೇ ರಣರಂಗವಾಯಿತು. ಈ ಜಗಳದ ಮಧ್ಯೆ ನಟ ಮಂಜುಮನೋಜ್ ತಮ್ಮ ಅಂಗಿ ಹರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ಸಂಗ್ರಹಿಸಲು ಹೋದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News