No Kissing ಪಾಲಿಸಿಗೆ ಬ್ರೇಕ್‌! ವಿಜಯ್ ದೇವರಕೊಂಡ ಜೊತೆ ತಮನ್ನಾ ಲಿಪ್‌ಲಾಕ್‌?

Tamanna Bhatia : ತಮನ್ನಾ ಭಾಟಿಯಾ ಈ ಹಿಂದೆ ಸಮಂತಾ ಅಕ್ಕಿನೇನಿ ಹೋಸ್ಟ್ ಮಾಡಿದ ಸ್ಯಾಮ್ ಜಾಮ್ ಎಂಬ ಚಾಟ್ ಶೋ ನಲ್ಲಿ ಭಾಗಿಯಾಗಿದ್ದರು. ಈ ವೇಳೆ No Kissing ಪಾಲಿಸಿ ಮುರಿಯುವ ವಿಚಾರವಾಗಿ ಮಾತನಾಡಿದ್ದಾರೆ. 

Written by - Chetana Devarmani | Last Updated : Feb 7, 2023, 09:03 AM IST
  • ಟಾಲಿವುಡ್‌ ಟಾಪ್‌ ನಟಿಯರಲ್ಲಿ ಒಬ್ಬರು ತಮನ್ನಾ
  • ಇದುವರೆಗೂ ಕಿಸ್ಸಿಂಗ್‌ ಸೀನ್‌ ಮಾಡದ ನಟಿ
  • ವಿಜಯ್ ದೇವರಕೊಂಡ ಜೊತೆ ತಮನ್ನಾ ಲಿಪ್‌ಲಾಕ್‌?
No Kissing ಪಾಲಿಸಿಗೆ ಬ್ರೇಕ್‌! ವಿಜಯ್ ದೇವರಕೊಂಡ ಜೊತೆ ತಮನ್ನಾ ಲಿಪ್‌ಲಾಕ್‌? title=
Tamanna Bhatia

ತಮನ್ನಾ ಭಾಟಿಯಾ ಸಂದರ್ಶನ : ತಮನ್ನಾ ಭಾಟಿಯಾ ಈ ಹಿಂದೆ ಸಮಂತಾ ಅಕ್ಕಿನೇನಿ ಹೋಸ್ಟ್ ಮಾಡಿದ ಸ್ಯಾಮ್ ಜಾಮ್ ಎಂಬ ಚಾಟ್ ಶೋ ನಲ್ಲಿ ಭಾಗಿಯಾಗಿದ್ದರು. ಚಿರಂಜೀವಿ, ಅಲ್ಲು ಅರ್ಜುನ್ ಮತ್ತು ವಿಜಯ್ ದೇವರಕೊಂಡ ಸೇರಿದಂತೆ ಅನೇಕ ಟಾಲಿವುಡ್ ದಿಗ್ಗಜರು ಕಾರ್ಯಕ್ರಮದ ಭಾಗವಾಗಿದ್ದರು. ಈ ಚಾಟ್‌ ಶೋನಲ್ಲಿ ತಮನ್ನಾ ಅವರು ನಿರ್ದೇಶಕಿ ನಂದಿನಿ ರೆಡ್ಡಿ ಅವರೊಂದಿಗೆ ಬಂದಿದ್ದರು. 

ಚಾಟ್ ಶೋನಲ್ಲಿ, ಸಮಂತಾ ಅವರು ತಮನ್ನಾ ಅವರನ್ನು No Kissing ಪಾಲಿಸಿ ಮುರಿಯುವುದಾದರೆ ಯಾವ ನಟನಿಗೆ ಕಿಸ್ ಮಾಡಲು ಬಯಸುವಿರಿ ಎಂದು ಕೇಳಿದರು. ಆಗ ಮಿಲ್ಕಿ ಬ್ಯೂಟಿ ತಕ್ಷಣ ಅರ್ಜುನ್ ರೆಡ್ಡಿ ಸ್ಟಾರ್ ವಿಜಯ್ ದೇವರಕೊಂಡ ಎಂದು ಹೇಳಿದರು. "ನಾನು ವಿಜಯ್ ದೇವರಕೊಂಡ ಅವರಿಗೆ ಕಿಸ್ ಮಾಡಲು ಬಯಸುತ್ತೇನೆ" ಎಂದು ಹೇಳಿದರು.

ಇದನ್ನೂ ಓದಿ :  ಕನ್ನಡ ಕಿರುತೆರೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ "ನಮ್ಮ ಲಚ್ಚಿ"ಗೆ ಸಿಕ್ತು ಈ ಹಿರಿಮೆ...!

ತಮನ್ನಾ ಭಾಟಿಯಾ ತನ್ನ 16 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಯಾವುದೇ ಚಲನಚಿತ್ರ ತಾರೆಯರಿಗೆ ಚುಂಬಿಸಿಲ್ಲ. ಇದು ವರೆಗೂ No Kissing ಪಾಲಿಸಿಯನ್ನು ಬ್ರೇಕ್‌ ಮಾಡಿಲ್ಲ. ದಕ್ಷಿಣದ ಅತಿದೊಡ್ಡ ನಟಿಯರಲ್ಲಿ ಒಬ್ಬರಾಗಿದ್ದರೂ ಸಹ, ಕಿಸ್ಸಿಂಗ್‌ ಸೀನ್‌ಗಳನ್ನು ಮಾಡಿಲ್ಲ. 

ಇದಕ್ಕೂ ಮೊದಲು, ಸಂದರ್ಶನವೊಂದರಲ್ಲಿ ತಮನ್ನಾ ಭಾಟಿಯಾ ಅವರು ಹೃತಿಕ್ ರೋಷನ್‌ ಅವರಿಗೆ ಚುಂಬಿಸಲು No Kissing ಪಾಲಿಸಿ ಬ್ರೇಕ್‌ ಮಾಡುವೆ ಎಂದಿದ್ದರು.

ಇದನ್ನೂ ಓದಿ :  Kiara Sidharth Marriage: ಫೆ. 6ಕ್ಕೆ ನಡೆಯಲ್ಲ ಸಿದ್ಧಾರ್ಥ್ ಕಿಯಾರಾ ಅದ್ಧೂರಿ ಮದುವೆ! ವಿವಾಹದ ಡೇಟ್ ಚೇಂಜ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News