‘ಹೆಂಡತಿ ಮನೆಯಲ್ಲಿ..’ ಕೊನೆಗೂ ಸಲ್ಮಾನ್‌ ಖಾನ್‌ ಮದುವೆ ಸೀಕ್ರೆಟ್‌ ಬಿಚ್ಚಿಟ್ಟ ತಂದೆ! ಬಾಯಿಜಾನ್‌ ಫ್ಯಾನ್ಸ್‌ ಶಾಕ್...

Salman Khan Marriage: ಅಭಿಮಾನಿಗಳು ಸಲ್ಮಾನ್ ಖಾನ್ ಮದುವೆಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ನಟ ಇನ್ನೂ ಒಂಟಿಯಾಗಿರುವುದು ಏಕೆ? ತಂದೆ ಸಲೀಂ ಖಾನ್ ಅವರೇ ಅವರಿಗೆ ಯಾವ ರೀತಿಯ ಹೆಂಡತಿ ಬೇಕು ಎಂದು ನಿಖರವಾಗಿ ಹೇಳಿದ್ದಾರೆ..   

Written by - Savita M B | Last Updated : Jan 9, 2025, 11:32 AM IST
  • ಬಾಲಿವುಡ್ ನ ಭಾಯಿಜಾನ್ ಸದ್ಯ ಭದ್ರತೆಯ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ.
  • ತಂದೆ ಸಲೀಂ ಖಾನ್ ಅವರು ಸಲ್ಮಾನ್ ಏಕೆ ಮದುವೆಯಾಗಲಿಲ್ಲ ಎಂದು ವಿವರಿಸಿದ್ದಾರೆ
‘ಹೆಂಡತಿ ಮನೆಯಲ್ಲಿ..’ ಕೊನೆಗೂ ಸಲ್ಮಾನ್‌ ಖಾನ್‌ ಮದುವೆ ಸೀಕ್ರೆಟ್‌ ಬಿಚ್ಚಿಟ್ಟ ತಂದೆ! ಬಾಯಿಜಾನ್‌ ಫ್ಯಾನ್ಸ್‌ ಶಾಕ್...   title=

Salman Khan: ಬಾಲಿವುಡ್ ನ ಭಾಯಿಜಾನ್ ಸದ್ಯ ಭದ್ರತೆಯ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಸಲ್ಮಾನ್‌ಗೆ ಬೆದರಿಕೆಯಿಂದ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸಲ್ಮಾನ್ ಖಾನ್ ಒಬ್ಬ ನಟ, ಅವರ ಸಿನಿಮಾ ವೃತ್ತಿಜೀವನಕ್ಕಿಂತ ಹೆಚ್ಚಾಗಿ ಅವರ ವೈಯಕ್ತಿಕ ಜೀವನ ಯಾವಾಗಲೂ ಸುದ್ದಿಯಲ್ಲಿದೆ. ಸಲ್ಮಾನ್ ಚಿತ್ರಕ್ಕಿಂತ ಸಲ್ಮಾನ್ ಪರ್ಸ್‌ನಲ್ ವಿಚಾರಗಳೇ ಹೆಚ್ಚು ಚರ್ಚೆಯಾಗುತ್ತಿದ್ದವು. ಅವರ ಹೆಸರು ಬಾಲಿವುಡ್‌ನ ಅನೇಕ ನಟಿಯರೊಂದಿಗೆ ಸೇರಿಕೊಂಡಿತ್ತು. ಮದುವೆಯನ್ನು ಮುರಿದು ವಯೋಸಹಜವಾಗಿ ಒಂಟಿಯಾಗಿರುವ ಸಲ್ಮಾನ್ ಪಯಣ ಅಷ್ಟು ಸುಲಭದ ಮಾತಾಗಿರಲಿಲ್ಲ. ಅನೇಕರು ಅವನ ಮದುವೆಗಾಗಿ ಕಾದು ಸುಸ್ತಾಗಿದ್ದಾರೆ. ಸಲ್ಮಾನ್ ಖಾನ್ ಇನ್ನೂ ಒಂಟಿಯಾಗಿರುವುದು ಏಕೆ? ತಂದೆ ಸಲೀಂ ಖಾನ್ ಅವರೇ ಅವರಿಗೆ ಯಾವ ರೀತಿಯ ಹೆಂಡತಿ ಬೇಕು ಎಂದು ನಿಖರವಾಗಿ ಹೇಳಿದ್ದಾರೆ..  

ತಂದೆ ಸಲೀಂ ಖಾನ್ ಅವರು ಸಲ್ಮಾನ್ ಏಕೆ ಮದುವೆಯಾಗಲಿಲ್ಲ ಎಂದು ವಿವರಿಸಿದ್ದಾರೆ.. “ಸಲ್ಮಾನ್ ಖಾನ್ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ನನಗೆ ತಿಳಿದಿಲ್ಲ. ಅವನ ಆಲೋಚನೆಯಲ್ಲಿ ಸ್ವಲ್ಪ ವಿರೋಧಾಭಾಸವು ಅವನು ಮದುವೆಯಾಗದಿರಲು ನಿಜವಾದ ಕಾರಣ. ಪ್ರೀತಿಯಲ್ಲಿ ಬಿದ್ದ ನಂತರ ಅವನು ತನ್ನ ನಿಯಮಗಳನ್ನು ಹಾಕಲು ಪ್ರಾರಂಭಿಸುತ್ತಾನೆ.. ಅವನಿಗೆ ತನ್ನ ಹೆಂಡತಿ ವೃತ್ತಿ ಜೀವನವನ್ನೆಲ್ಲ ಬದಿಗಿಟ್ಟು ಇವನಿಗೆ ಸಮಯ ನೀಡಬೇಕು.. ಅಲ್ಲದೇ ಆಕೆ ಎಲ್ಲಿಯೂ ಹೋಗಬಾರದು ಮನೆಯಲ್ಲೇ ಇರಬೇಕು ಎನ್ನುವುದು ಅಲ್ಲು ಅಭಿಪ್ರಾಯ.. ಹೀಗಾಗಿ ಅವರು ಎಲ್ಲ ನಟಿಯೊಂದಿಗೆ ಬ್ರೇಕಪ್‌ ಮಾಡಿಕೊಂಡರು" ಎಂದು ಹೇಳಿದ್ದಾರೆ..   

ಇದನ್ನೂ ಓದಿ-ಅಲ್ಲು ಅರ್ಜುನ್‌ ನನ್ನ ಎತ್ತಿಕೊಂಡು ಆ ರೀತಿ ಮಾಡಿದಾಗ.. ನನಗೆ ಭಯವಾಯ್ತು..! ರಶ್ಮಿಕಾ ಶಾಕಿಂಗ್‌ ಹೇಳಿಕೆ ವೈರಲ್‌..

ಅಲ್ಲದೇ "ಸಲ್ಮಾನ್ ನಟಿಯೊಂದಿಗೆ ಸಂಬಂಧವನ್ನು ಬೆಳೆಸಿದಾಗ, ಅವರು ತಾಯಿಯ ಗುಣಗಳನ್ನು ಆಕೆಯಲ್ಲಿ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ವೃತ್ತಿ-ಆಧಾರಿತ ಮಹಿಳೆ ತನ್ನ ಮಹತ್ವಾಕಾಂಕ್ಷೆಗಳನ್ನು ಬಿಟ್ಟು ಕೇವಲ ಮನೆಕೆಲಸಗಳ ಮೇಲೆ ಕೇಂದ್ರೀಕರಿಸಬೇಕೆಂದು ಸಲ್ಮಾನ್ ನಿರೀಕ್ಷಿಸುವುದು ತಪ್ಪು. ನಾನು ಅವನನ್ನು ಮದುವೆಯಾಗಿ ಮನೆಯಲ್ಲೇ ಇರುತ್ತೇನೆ ಎಂದು ಹೇಳಿ ತಮಗೆ ತಾವೇ ಯಾವ ಹುಡುಗಿಯೂ ವಂಚನೆ ಮಾಡಿಕೊಳ್ಳುವುದಿಲ್ಲ.. ಹೀಗಾಗಿಯೇ ಸಲ್ಮಾನ್‌ ಖಾನ್‌ ಒಂಟಿಯಾಗಿದ್ದಾರೆ.." ಎಂದು ಅವರ ತಂದೆ ಹೇಳಿದ್ದಾರೆ.. 

'ಒಂದು ಸಂಬಂಧದಲ್ಲಿ ಇದ್ದಾಗ, ಅವನು ಆಕೆಯನ್ನು ತಾಯಿಯಾಗಿ ಬದಲಾಯಿಸಲು ಪ್ರಯತ್ನಿಸುತ್ತಾನೆ. ಆದರೆ ಇದು ಸಾಧ್ಯವಿಲ್ಲ. ಕೆಲಸ ಮಾಡುವ ನಟಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದು, ಮನೆಕೆಲಸದಲ್ಲಿ ಸಹಾಯ ಮಾಡುವುದು.. ಅಡುಗೆ ಮಾಡುವುದು, ಮುಂತಾದ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಹೀಗಾಗಿಯೇ ಸಲ್ಮಾನ್‌ ಯಾವ ಸಂಬಂಧಗಳು ವರ್ಕ್‌ ಆಗಿಲ್ಲ" ಎಂದು ಹೇಳಿದ್ದಾರೆ.. 

ಇದನ್ನೂ ಓದಿ-ಅಲ್ಲು ಅರ್ಜುನ್‌ ನನ್ನ ಎತ್ತಿಕೊಂಡು ಆ ರೀತಿ ಮಾಡಿದಾಗ.. ನನಗೆ ಭಯವಾಯ್ತು..! ರಶ್ಮಿಕಾ ಶಾಕಿಂಗ್‌ ಹೇಳಿಕೆ ವೈರಲ್‌..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News