action king arjun sarja: ಸಿಲ್ಕ್ ಸ್ಮಿತಾ ಭಾರತೀಯ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದ ನಟಿ. ಜನಪ್ರಿಯ ಮತ್ತು ಐಟಂ ಹಾಡುಗಳೊಂದಿಗೆ ವಿಶೇಷ ಮನ್ನಣೆ ಪಡೆದ ತಾರೆ... ತನಗೊಂದು ಬ್ರಾಂಡ್ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದ ನಟಿ ತಮ್ಮ 18 ವರ್ಷಗಳ ಚಲನಚಿತ್ರ ವೃತ್ತಿಜೀವನದಲ್ಲಿ 450 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಮಾಡಿದ್ದಾರೆ.
ಅಂದು ಸ್ಟಾರ್ ಹೀರೋನಂತೆ ಸಂಭಾವನೆ ಪಡೆಯುವ ನಟಿಯಾಗಿದ್ದ ಈಕೆಯ ಕಾಲ್ ಶೀಟ್ ಗಾಗಿ ದೊಡ್ಡ ಸ್ಟಾರ್ಗಳೂ ಕಾಯಬೇಕಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ಕಡು ಬಡತನದಲ್ಲಿ ಹುಟ್ಟಿ ಹೈಸ್ಕೂಲನ್ನು ಬಿಟ್ಟು ಕೆಲಸ ಪಡೆಯಬೇಕಾಯಿತು. ಕೆಲವು ವರ್ಷಗಳ ಬಳಿಕ ಸಿಲ್ಕ್ ಸ್ಮೀತಾ ಮದುವೆಯಾಗಿ ಮಕ್ಕಳಿರುವವವರೊಂದಿಗೆ ವಿವಾಹವಾದರು.. ಆದರೆ ವೈಯಕ್ತಿಕ ಜೀವನದಲ್ಲಿ ಯಶಸ್ಸು ಸಿಗದ ನಟಿ ಆ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿದರು..
ಇದನ್ನೂ ಓದಿ-KGF ಡೈರೆಕ್ಟರ್ ಪ್ರಶಾಂತ್ ನೀಲ್ ಸಹೋದರಿ ಯಾರು ಗೊತ್ತೇ? ಅವರು ಬೇರಾರೂ ಅಲ್ಲ ಕನ್ನಡದ ಸ್ಟಾರ್ ನಟನ ಪತ್ನಿ!
ತಮಿಳಿನ ನಿರ್ದೇಶಕ ವಿನು ಚಕ್ರವರ್ತಿ ಅವರು ಸಿಲ್ಕ್ ಸ್ಮಿತಾ ಅವರನ್ನು ನೋಡಿ ತಮ್ಮ 'ವಂಡಿಚಕ್ಕರಂ' ಚಿತ್ರದಲ್ಲಿ ಬಾರ್ ಗರ್ಲ್ ಪಾತ್ರವನ್ನು ಸಿಲ್ಕ್ಗೆ ನೀಡಿದರು. ಆದರೆ ಈ ಸಿನಿಮಾ ಬಹಳ ದಿನಗಳ ನಂತರ ಬಿಡುಗಡೆಯಾಯಿತು.. ಆದ್ದರಿಂದ ಅವರು ಮಲಯಾಳಂ ಚಿತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಇದನ್ನೂ ಓದಿ-ಸಮಂತಾ ಜೊತೆ ಪ್ರಭಾಸ್ ಒಂದೇ ಒಂದು ಸಿನಿಮಾ ಕೂಡ ಮಾಡದಿರಲು ಇದೇ ರಿಯಲ್ ಕಾರಣ!
ಆದರೆ ಮೊದಲ ಚಿತ್ರದ ನಿರ್ದೇಶಕರು ಮೊದಲ ಚಿತ್ರದಲ್ಲಿ ನಟಿಸಿದ ಪಾತ್ರಕ್ಕೆ ಅವರ ಹೆಸರನ್ನು ಇಟ್ಟರು. ಹೀಗಾಗಿ ವಿಜಯಲಕ್ಷ್ಮಿ ಸಿಲ್ಕ್ ಸ್ಮಿತಾ ಆಗಿ ಬದಲಾದರು. ಕಡಿಮೆ ಸಮಯದಲ್ಲಿ ಸ್ಟಾರ್ ಇಮೇಜ್ ಗಳಿಸಿದರು.. ಸಿನಿರಂಗಕ್ಕೆ ಬಂದ ನಂತರ ಪ್ರವೇಶಿಸಿದ ನಂತರ ನಟಿ ಐಷಾರಾಮಿ ಜೀವನವನ್ನು ಅನುಭವಿಸಿದರು.
ಬಳಿಕ ಸಾಕಷ್ಟು ವಂಚನೆಗೆ ಒಳಗಾದ ನಟಿ ಸ್ಮಿತಾ ಕುಡಿತದ ಚಟಕ್ಕೆ ಬಿದ್ದ ಆಕೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.. ಅವರು 23 ಸೆಪ್ಟೆಂಬರ್ 1996 ರಂದು ನಿಧನರಾದರು. ಹಲವು ಸ್ಟಾರ್ ಹೀರೋಗಳು, ಸೂಪರ್ ಸ್ಟಾರ್ ಗಳು, ಮೈನರ್ ಹೀರೋಗಳ ಜೊತೆ ನಟಿಸಿದ್ದರೂ ಆಕೆಯ ಅಂತ್ಯಕ್ರಿಯೆಗೆ ಸಿನಿಮಾ ಮಂದಿಯೇ ಯಾರು ಬಂದಿರಲಿಲ್ಲ.. ಆದರೆ ಒಬ್ಬನೇ ಒಬ್ಬ ನಟ ಕೊನೆ ಘಳಿಗೆಯಲ್ಲಿ ಸಿಲ್ಕ್ ಸ್ಮೀತಾ ಅವರನ್ನು ನೋಡಲು ಆಗಮಿಸಿದ್ದರು.. ಆತ ಬೇರಾರೂ ಅಲ್ಲ.. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.