Hilarious Viral Video: ಹಲವು ಬಾರಿ ನೀವು ಮದುವೆ ಸಮಾರಂಭಗಳಲ್ಲಿ ಭಾಗವಹಿಸಿರಬೇಕು. ನಿಮ್ಮ ಹತ್ತಿರದ ಸಂಬಂಧಿಯ ಮದುವೆಯಾಗಿದ್ದರೆ, ನೀವು ಬೀಳ್ಕೊಡುಗೆ ಸಮಾರಂಭವನ್ನು ಸಹ ನೋಡಿರಬಹುದು. ಆದರೆ ಆಗಾಗ್ಗೆ ಈ ಸಂಪ್ರದಾಯ ನೆರವೇರುವ ಸಮಯದಲ್ಲಿ, ಅನೇಕ ಜನರ ಕಣ್ಣುಗಳು ತೇವವಾಗುತ್ತವೆ. ಆದರೆ ಈ ವಿಡಿಯೋ ಅದಕ್ಕೆ ವಿಪರೀತ ಎಂಬಂತಿದೆ. ಈ ವೀಡಿಯೋದಲ್ಲಿ ಬಿಳ್ಕೊಡುಗೆ ಸಮಾರಂಭದ ಬಳಿಕ ಕಾರಿನೊಳಗೆ ಬಂದು ಕುಳಿತುಕೊಳ್ಳುವ ವಧು, ವರನೊಂದಿಗೆ ಮಾಡುವ ಕೆಲಸ ನೋಡಿ ನೀವೂ ನಿಮ್ಮ ತಲೆ ಹಿಡಿದುಕೊಳ್ಳುವಿರಿ.
ಕೆಂಡಾಮಂಡಲಗೊಂಡ ವಧು
ಈ ವೀಡಿಯೊದಲ್ಲಿ, ವಧು-ವರರು ಕಾರಿನಲ್ಲಿ ಕುಳಿತಿದ್ದಾರೆ ಮತ್ತು ತಮ್ಮ ತಮ್ಮ ಪೋಷಾಕಿನಲ್ಲಿ ಸುಂದರವಾಗಿ ಕಂಗೊಲ್ಲಿಸುತ್ತಿದ್ದಾರೆ. ಆದರೆ ಬಹುಶಃ ನಂತರ ವಧು ಮತ್ತು ವರರು ಈ ರೀತಿ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ, ಆಕಸ್ಮಿಕವಾಗಿ ವಧು ಕೋಪಗೊಳ್ಳುತ್ತಾಳೆ. ಇದಾದ ಬಳಿಕ ಏನಾಯಿತು ತಿಳಿಯುವ ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ನೋಡಲೇಬೇಕು.
ಇದನ್ನೂ ಓದಿ-Viral Video: ”ಕಲಿಯುಗದ ‘ಕೃಷ್ಣ’ನ ಸಂಗೀತ ಕೇಳಿ ನಿಂತಲ್ಲೇ ಕುಣಿದಾಡಿತು ಗೋವು: ವಿಡಿಯೋ ನೋಡಿ
ವರನಿಗೆ ವಿಪರೀತ ಕಪಾಳಮೋಕ್ಷ ಮಾಡುತ್ತಾಳೆ
ಕಾರಿನಲ್ಲಿ ಕುಳಿತ ವಧು ಎಷ್ಟು ಕೊಪಗೊಂಡಿದ್ದಾಳೆ ಎಂದರೆ ಆಕೆ ತನ್ನ ಪಕ್ಕದಲ್ಲಿದ್ದ ವರನನ್ನು ಪದೇ ಪದೇ ತಳ್ಳಿ ಕಪಾಳಮೋಕ್ಷ ಮಾಡುತಿದ್ದಾಳೆ. ವಧುವಿನ ಇಂತಹ ರೂಪವನ್ನು ನೋಡಿದ ಬಡಪಾಯಿ ವರ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಾಗದೆ ದಂಗಾಗಿದ್ದಾನೆ ಎಂಬಂತೆ ವಿಡಿಯೋದಲ್ಲಿ ತೋರುತ್ತಿದೆ.
ಇದನ್ನೂ ಓದಿ-Viral Video: ಟೀಚರ್ ಬಳಿ ಹೋಗಿ ಅಮ್ಮನ ಬಗ್ಗೆ ದೂರು ನೀಡಿದ ಪುಟಾಣಿ ಕಂದಮ್ಮ ಹೇಳಿದ್ದೇನು ನೀವೇ ಕೇಳಿ?
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ಸಣ್ಣ ಕ್ಲಿಪ್ಪಿಂಗ್ ಅನ್ನು ಹಲವು ಬಾರಿ ನೋಡಲಾಗಿದೆ. ಅಷ್ಟೇ ಅಲ್ಲ ಈ ವಿಡಿಯೋವನ್ನು ಜನ ಲೈಕ್ ಮಾಡಿದ್ದು ಮಾತ್ರವಲ್ಲದೆ, ತಮಾಷೆಯ ರೂಪದಲ್ಲಿ ವರನ ಕಾಲೆಳೆಯುತ್ತಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಅನೇಕ ಬಳಕೆದಾರರು (ಸಾಮಾಜಿಕ ಮಾಧ್ಯಮ ಬಳಕೆದಾರರು) ತಮಾಷೆ ಮಾಡುತ್ತಿರುವುದು ನೀವು ನೋಡಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.