ಗನ್‌ʼನಿಂದ ಶೂಟ್ ಮಾಡಿಕೊಂಡ ನಟ ಗೋವಿಂದ.. ಐಸಿಯುಗೆ ದಾಖಲು!

ಹಿರಿಯ ನಟ ಗೋವಿಂದ ಗನ್‌ ನಿಂದ ಶೂಟ್‌ ಮಾಡಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.  

Written by - Chetana Devarmani | Last Updated : Oct 1, 2024, 10:40 AM IST
  • ಬಾಲಿವುಡ್ ಇಂಡಸ್ಟ್ರಿಯ ಖ್ಯಾತ ನಟ ಗೋವಿಂದ
  • ಗನ್‌ ನಿಂದ ಶೂಟ್‌ ಮಾಡಿಕೊಂಡ ಹಿರಿಯ ನಟ
  • ನಟ ಗೋವಿಂದ ಐಸಿಯುಗೆ ದಾಖಲು!
ಗನ್‌ʼನಿಂದ ಶೂಟ್ ಮಾಡಿಕೊಂಡ ನಟ ಗೋವಿಂದ.. ಐಸಿಯುಗೆ ದಾಖಲು! title=

ಬಾಲಿವುಡ್ ಇಂಡಸ್ಟ್ರಿಯ ಖ್ಯಾತ ನಟ ಗೋವಿಂದ ಬಗ್ಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ಅವರ ಅಭಿಮಾನಿಗಳ ಆತಂಕವನ್ನು ಹೆಚ್ಚಿಸಿದೆ. ಹಿರಿಯ ನಟ ಗೋವಿಂದ ಗನ್‌ ನಿಂದ ಶೂಟ್‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. 

ಬಾಲಿವುಡ್ ನಟ ಗೋವಿಂದ ಅವರದೇ ಗನ್ ನಿಂದ ಗುಂಡನ್ನು ಹಾರಿಸಿಕೊಂಡಿದ್ದಾರೆ. ಗುಂಡು ನಟ ಗೋವಿಂದ ಅವರ ಕಾಲಿಗೆ ತಗುಲಿದೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಹೊರಗೆ ಹೊರಡುವ ಮುನ್ನ ನಟ ಗೋವಿಂದ ತಮ್ಮ ಗನ್ ಚೆಕ್ ಮಾಡುತ್ತಿದ್ದ. ಆ ಸಮಯದಲ್ಲಿ ಅವರು ಮಿಸ್ ಫೈರ್ ಮಾಡಿದ್ದಾರೆ. 

ಇದನ್ನೂ ಓದಿ: Sandalwood: 2400 ಕೋಟಿ ಒಡೆಯನನ್ನು 2ನೇ ಮದುವೆಯಾದ 56 ವರ್ಷದ ಸ್ಟಾರ್‌ ನಟಿ... 4600 ಕೋಟಿ ಸಾಮ್ರಾಜ್ಯಕ್ಕೆ ಒಡತಿ! ಕನ್ನಡಿಗರ ಮನಗೆದ್ದ ಚೆಲುವೆ ಈಕೆ

ಈ ವೇಳೆ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ಅವರನ್ನು CRITI ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋವಿಂದನ ಕಾಲಿನಲ್ಲಿದ್ದ ಗುಂಡನ್ನು ಹೊರ ತೆಗೆಯಲಾಗಿದೆ. ಅವರ ಸ್ಥಿತಿ ನಾರ್ಮಲ್‌ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಗುಂಡು ಹಾರಿದ ವೇಳೆ ಗೋವಿಂದ ಮನೆಯಲ್ಲಿ ಒಬ್ಬರೇ ಇದ್ದರು. ಆಗ ತಪ್ಪಾಗಿ ಗುಂಡು ಹಾರಿದ್ದು, ಗಾಯಗೊಂಡಿದ್ದಾರೆ. ಪರವಾನಗಿ ಪಡೆದ ರಿವಾಲ್ವರ್‌ನಿಂದ ಗುಂಡು ಹಾರಿದೆ. ಗುಂಡು ಹಾರಿಸಿದ ನಂತರ, ತಮ್ಮ ಸಂಬಂಧಿಕರಿಗೆ ಕರೆ ಮೂಲಕ ತಿಳಿಸಿದ್ದಾರೆ. ಸಂಬಂಧಿಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.ಗನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆಯ ಸುದ್ದಿ ತಿಳಿದ ತಕ್ಷಣ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಗೋವಿಂದನ ಆರೋಗ್ಯ ಸುಧಾರಿಸಲಿ ಎಂದು ಅಭಿಮಾನಿಗಳಿಂದ ನಿರಂತರ ಪ್ರಾರ್ಥನೆಗಳು ನಡೆಯುತ್ತಿವೆ.

ಇದನ್ನೂ ಓದಿ: ಬಿಗ್‌ ಬಾಸ್‌ ಮೊದಲ ವಾರವೇ ಎಲಿಮಿನೇಟ್‌ ಆಗ್ತಾರಾ ಚೈತ್ರಾ ಕುಂದಾಪುರ ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News