ಬೆಂಗಳೂರು: ಕನ್ನಡದಲ್ಲಿ ವಿವಿಧ ಬಗೆಯ ಪಾತ್ರಗಳಿಂದ ನಾಡಿನ ಪ್ರೇಕ್ಷಕರನ್ನು ರಂಜಿಸಿದ ನವರಸ ನಾಯಕ ಜಗ್ಗೇಶ್ ಈಗ ತಮ್ಮ ಹಳೆಯ ಫೋಟೋವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಸವಿ ನೆನಪಿಗೆ ಜಾರಿದ್ದಾರೆ.
ಇತ್ತೀಚಿಗಷ್ಟೇ ಕನ್ನಡ ಚಲನಚಿತ್ರರಂಗಕ್ಕೆ ಪ್ರವೇಶ ಮಾಡಿ 38 ವರ್ಷಗಳನ್ನು ಪೂರೈಸಿರುವ ಜಗ್ಗೇಶ್ ತಮ್ಮ ಸುದೀರ್ಘ ಪ್ರಯಾಣದಲ್ಲಿ ಬಗೆ ಬಗೆಯ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಈಗ ತಮ್ಮ ಹಳೆಯ ನೆನಪಿಗೆ ಪೂರಕವಾಗಿ ಪಿಯುಸಿಯಲ್ಲಿದ್ದಾಗಿನ ಕಪ್ಪು ಬಿಳುಪಿನ ಫೋಟೋವನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
ರಾಜಣ್ಣನಂತೆ hairstyle ಮೀಸೆಬಿಟ್ಟು
ಅಪ್ಪನ ಕೈಯಲ್ಲಿ ಬೂಟಿನ ಏಟುತಿಂದದ್ದು ನೆನಪಿಸಿತು ಈ ಪೋಟೋ!ಸಣ್ಣಗೆ ಮೀಸೆ ಬಿಟ್ಟು ಅಮ್ಮನ ಕಾಡಿಗೆಯಿಂದ
ಬಣ್ಣತೀಡಿ ಇಲ್ಲದ ಮೀಸೆ ಇರುವಂತೆ ಮಾಡಿಕೊಂಡpuc ದಿನಗಳು!ಬಾಲ್ಯದಲ್ಲೇ ನಟನಾಗಬೇಕು ಎಂದು ಹಂಬಲಿಸಿದ ಯುವ ಆತ್ಮ!
ಈಗ ಆಗಿಯೇ ಬಿಟ್ಟಲ್ಲೋ #ಬಡವರಾಸ್ಕಲ್ ಎಂದಿತು ಮನ..!ಈ ದಿನಕ್ಕೆ 38ವರ್ಷದ
ಶ್ರಮ.! pic.twitter.com/ZQqZK0vBek— ನವರಸನಾಯಕ ಜಗ್ಗೇಶ್ (@Jaggesh2) November 27, 2019
"ರಾಜಣ್ಣನಂತೆ hairstyle ಮೀಸೆಬಿಟ್ಟು ಅಪ್ಪನ ಕೈಯಲ್ಲಿ ಬೂಟಿನ ಏಟುತಿಂದದ್ದು ನೆನಪಿಸಿತು ಈ ಪೋಟೋ!ಸಣ್ಣಗೆ ಮೀಸೆ ಬಿಟ್ಟು ಅಮ್ಮನ ಕಾಡಿಗೆಯಿಂದ ಬಣ್ಣತೀಡಿ ಇಲ್ಲದ ಮೀಸೆ ಇರುವಂತೆ ಮಾಡಿಕೊಂಡ puc ದಿನಗಳು! ಬಾಲ್ಯದಲ್ಲೇ ನಟನಾಗಬೇಕು ಎಂದು ಹಂಬಲಿಸಿದ ಯುವ ಆತ್ಮ! ಈಗ ಆಗಿಯೇ ಬಿಟ್ಟಲ್ಲೋ #ಬಡವರಾಸ್ಕಲ್ ಎಂದಿತು ಮನ..! ಈ ದಿನಕ್ಕೆ 38 ವರ್ಷದ ಶ್ರಮ.!' ಎಂದು ಬರೆದುಕೊಂಡಿದ್ದಾರೆ.
ಜಗ್ಗೇಶ್ ಕೇವಲ ಬೆಳ್ಳಿತೆರೆ ಅಷ್ಟೇ ಅಲ್ಲ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಇದುವರೆಗೆ ಕನ್ನಡದ ಕಣ್ಮಣಿ, ಕಾಮಿಡಿ ಕಿಲಾಡಿಗಳು, ಕಿಲಾಡಿ ಕುಟುಂಬ ಹೀಗೆ ಹಲವು ರಿಯಾಲಿಟಿ ಷೋಗಳಲ್ಲಿ ಪ್ರಮುಖ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.