Deepika Padukone: ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆ ಓದಿದ್ದೇನು ಗೊತ್ತೇ? ನಿಜವಾಗ್ಲೂ ಶಾಕ್‌ ಆಗ್ತೀರಾ..

Deepika Padukone Education: ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಹೆಚ್ಚಾಗಿ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.. ಇದೇ ವೇಳೆ ಇವರ ಶಿಕ್ಷಣದ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..  

Written by - Savita M B | Last Updated : Jan 5, 2025, 10:20 AM IST
  • ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಕಠಿಣ ಪರಿಶ್ರಮದಿಂದ ಸಿನಿರಂಗದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ
  • ಶೈಕ್ಷಣಿಕ ಅರ್ಹತೆ ಮತ್ತು ಅವರಿಗೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ತಿಳಿಯೋಣ.
Deepika Padukone: ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆ ಓದಿದ್ದೇನು ಗೊತ್ತೇ? ನಿಜವಾಗ್ಲೂ ಶಾಕ್‌ ಆಗ್ತೀರಾ..  title=

Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಕಠಿಣ ಪರಿಶ್ರಮದಿಂದ ಸಿನಿರಂಗದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ. ಅವರ ತಂದೆ ಪ್ರಸಿದ್ಧ ಬ್ಯಾಡ್ಮಿಂಟನ್ ಆಟಗಾರರಾಗಿದ್ದರು. ಹೀಗಿರುವಾಗ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ದೀಪಿಕಾ ಅಲ್ಲಿ ಛಾಪು ಮೂಡಿಸಿದ್ದಾರೆ. ಇದೀಗ ದೀಪಿಕಾ ಪಡುಕೋಣೆ ಅವರ ಶೈಕ್ಷಣಿಕ ಅರ್ಹತೆ ಮತ್ತು ಅವರಿಗೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ತಿಳಿಯೋಣ. 

ದೀಪಿಕಾ ಪಡುಕೋಣೆ, ಬಾಲಿವುಡ್‌ನ ಟಾಪ್ ನಟಿಯರ ಪಟ್ಟಿಯಲ್ಲಿ ಸೇರಿದ್ದಾರೆ.. 2006 ರಿಂದ ಉದ್ಯಮದಲ್ಲಿ ಸಕ್ರಿಯರಾಗಿರುವ ಇವರ ಕುಟುಂಬದ ಹಿನ್ನೆಲೆ ಕ್ರೀಡೆ. ಆಕೆಯೂ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರ್ತಿ. ಆದರೆ ಬಾಲಿವುಡ್ ಕನಸು ಆಕೆಯನ್ನು ಕ್ರೀಡಾ ಪ್ರಪಂಚದಿಂದ ದೂರವಿಟ್ಟಿತು.. 

ಇದನ್ನೂ ಓದಿ-"ನನಗೆ ಈಗಾಗಲೇ ಮದುವೆಯಾಗಿದೆ.. ಇಬ್ಬರು ಮಕ್ಕಳು ಕೂಡ ಇದ್ದಾರೆ" ಸೆನ್ಸೇಷನಷಲ್‌ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ! ಸುದ್ದಿ ಕೇಳಿ ಅಭಿಮಾನಿಗಳು ಕಕ್ಕಾಬಿಕ್ಕಿ!!

ದೀಪಿಕಾ ಪಡುಕೋಣೆ ಆರಂಭಿಕ ಜೀವನ: ದೀಪಿಕಾ ಪಡುಕೋಣೆ 5 ಜನವರಿ 1986 ರಂದು ಜನಿಸಿದರು.. ದೀಪಿಕಾ ಹುಟ್ಟಿದ್ದು ಭಾರತದಲ್ಲಿ ಅಲ್ಲ, ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಎಂಬುದು ಕೆಲವೇ ಜನರಿಗೆ ತಿಳಿದಿದೆ. ಆಕೆಯ ತಂದೆ ಪ್ರಕಾಶ್ ಪಡುಕೋಣೆ ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ.. ಅವರ ತಾಯಿಯ ಹೆಸರು ಉಜ್ಜಲಾ ಪಡುಕೋಣೆ ಮತ್ತು ಸಹೋದರಿಯ ಹೆಸರು ಅನಿಶಾ ಪಡುಕೋಣೆ, ಅವರು ವೃತ್ತಿಪರ ಗಾಲ್ಫ್ ಆಟಗಾರ್ತಿ.

ಇದನ್ನೂ ಓದಿ-BBK 11: ಈ ಬಾರಿ ಹನುಮಂತ ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಗ್ಯಾರಂಟಿ!! ಯಾಕೆ ಗೊತ್ತಾ?

ದೀಪಿಕಾ ಪಡುಕೋಣೆ ಶಿಕ್ಷಣ: ದೀಪಿಕಾ ಪಡುಕೋಣೆ ಅವರು ಬೆಳೆದಿದ್ದು ಬೆಂಗಳೂರಿನಲ್ಲಿ.. ಅಲ್ಲಿಂದಲೇ ಶಾಲಾ ಶಿಕ್ಷಣವನ್ನೂ ಮಾಡಿದರು. ದೀಪಿಕಾ ಓದಿದ್ದು ಬೆಂಗಳೂರಿನ ಸೋಫಿಯಾ ಹೈಸ್ಕೂಲ್‌ನಲ್ಲಿ. ನಂತರ ಅವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ತಮ್ಮ ಮುಂದಿನ ಅಧ್ಯಯನವನ್ನು ಮಾಡಿದರು. ದೀಪಿಕಾ ಸಮಾಜಶಾಸ್ತ್ರದಲ್ಲಿ ಬಿ.ಎ. ಪದವಿ ಪಡೆಯಲು ದೆಹಲಿ ಮೂಲದ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ (IGNOU) ಪ್ರವೇಶ ಪಡೆದಿದ್ದರು. ದೀಪಿಕಾ ಪಡುಕೋಣೆ ಕಾಲೇಜ್ ಡ್ರಾಪ್ಔಟ್.. 

ದೀಪಿಕಾ ಪಡುಕೋಣೆ ವೃತ್ತಿ: ಮಾಡೆಲಿಂಗ್ ಮತ್ತು ಚಲನಚಿತ್ರಗಳಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ದೀಪಿಕಾ ತನ್ನ ಕಾಲೇಜು ಅಧ್ಯಯನವನ್ನು ಮಧ್ಯದಲ್ಲಿಯೇ ತೊರೆದರು. 2006 ರಲ್ಲಿ ಅವರು ಕನ್ನಡ ಸಿನಿಮಾದಲ್ಲಿ ನಟಿಸಿದರು.. ಇದರ ನಂತರ, ಅವರು 2007 ರಲ್ಲಿ 'ಓಂ ಶಾಂತಿ ಓಂ' ಚಿತ್ರದ ಮೂಲಕ ತಮ್ಮ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರು ತಮ್ಮ ಮೊದಲ ಚಿತ್ರದಲ್ಲೇ ಶಾರುಖ್ ಖಾನ್ ಅವರಿಗೆ ನಟಿಯಾಗುವ ಮೂಲಕ ಎಲ್ಲರ ಹೃದಯದಲ್ಲಿ ವಿಶೇಷ ಛಾಪು ಮೂಡಿಸಿದರು.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News