ಜಾರಕಿಹೊಳಿ ಸಿಡಿ ಕೇಸ್ : FIR ರದ್ದುಕೋರಿ ನರೇಶ್, ಶ್ರವಣ್ ಕೋರ್ಟ್ ಮೊರೆ‌

ನರೇಶ್ ಗೌಡ ಮತ್ತು ಶ್ರವಣ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಸದಾಶಿವನಗರದಲ್ಲಿ ಜಾರಕಿಹೊಳಿ ನೀಡಿದ್ದ ದೂರಿನ ಎಫ್​ಐಆರ್  ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ. 

Last Updated : Jul 2, 2022, 05:02 PM IST
  • ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ
  • ಎಫ್​ಐಆರ್ ರದ್ದು ಕೋರಿ ಹೈ ಕೋರ್ಟ್ ಮೊರೆ
  • ನರೇಶ್ ಗೌಡ ಮತ್ತು ಶ್ರವಣ್ ಹೈಕೋರ್ಟ್ ಗೆ ಅರ್ಜಿ
ಜಾರಕಿಹೊಳಿ ಸಿಡಿ ಕೇಸ್ : FIR ರದ್ದುಕೋರಿ ನರೇಶ್, ಶ್ರವಣ್ ಕೋರ್ಟ್ ಮೊರೆ‌ title=

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಫ್​ಐಆರ್ ರದ್ದು ಕೋರಿ ಹೈ ಕೋರ್ಟ್ ಮೊರೆ ಹೋಗಿದ್ದಾರೆ. ನರೇಶ್ ಗೌಡ ಮತ್ತು ಶ್ರವಣ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಸದಾಶಿವನಗರದಲ್ಲಿ ಜಾರಕಿಹೊಳಿ ನೀಡಿದ್ದ ದೂರಿನ ಎಫ್​ಐಆರ್  ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ. 

ಎಫ್​ಐಆರ್ ನಲ್ಲಿ ನಮ್ಮ ಹೆಸರಿಲ್ಲ. ಬ್ಲ್ಯಾಕ್ ಮೇಲ್ ಮತ್ತು ವಸೂಲಿಯಲ್ಲಿ ಭಾಗಿಯಾಗಿಲ್ಲ. ಎಫ್​ಐಆರ್ ದಾಖಲಾಗಿ ವರ್ಷ ಕಳೆದಿದೆ. ಹೀಗಾಗಿ ಎಫ್​ಐಆರ್ ರದ್ದು ಮಾಡಿ ಅಂತಾ ಸಿಆರ್ ಪಿಸಿ 482 ಅಡಿ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ಪ್ರಕರಣವಮ್ನ ಸಿಬಿಐಗೆ ಒಪ್ಪಿಸಬಹುದು ಅನ್ನೋ ಮಾಹಿತಿ ಹರಿದಾಡ್ತಿರುವ ಹೊತ್ತಲ್ಲಿ ಇದೀಗ‌ ನರೇಶ್, ಶ್ರವಣ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರೋದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ : Bengaluru City police : ನಗರ ಪೊಲೀಸ್ ಇಲಾಖೆಯಲ್ಲಿ ಒಂದೇ ದಿನ 3 ಸಾವಿರ ಪೊಲೀಸರ ವರ್ಗಾವಣೆ!

ಇನ್ನೂ ಸಿಡಿ ವಿಚಾರವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸದಾಶಿವನಗರ ಠಾಣೆಯಲ್ಲಿ ಬ್ಲಾಕ್ ಮೇಲ್ ದೂರು ದಾಖಲಿಸಿದ್ರೆ, ಕಬ್ಬನ್ ಪಾರ್ಕ್ ನಲ್ಲಿ ಸಂತ್ರಸ್ತ ಯುವತಿ ಅಧಿಕಾರ‌ದುರುಪಯೋಗ ಪಡಿಸಿಕೊಂಡು ಅತ್ಯಾಚರವೆಸಗಿದ್ದಾರೆ ಎಂದು ದೂರು ದಾಖಲಿಸಿದ್ದಳು. ಯುವತಿ ದಾಖಲಿಸಿದ ದೂರಿನನ್ವಯ ತನಿಖೆ ನಡೆಸಿದ ಪೊಲೀಸ್ರು ಅತ್ಯಾಚಾರ ಕೇಸ್ ಸಂಬಂಧ ಬಿ'ರಿಪೋರ್ಟ್ ಸಲ್ಲಿಸಿದ್ರು. ಇನ್ನೂ ಸಿಡಿ ಕೇಸ್ ನಿಂದಾಗಿ ಸಚಿವರಾಗಿದ್ದ ಜಾರಕಿಹೊಳಿ ತಮ್ಮ ಸಚಿವ ಸ್ಥಾನವನ್ನೆ ಕಳೆದುಕೊಂಡಿದ್ರು.

ಇದನ್ನೂ ಓದಿ : ʼಇನ್ಮುಂದೆ ಬಿಎಂಟಿಸಿ ಬಸ್‌ನಲ್ಲಿ ಕಂಡೆಕ್ಟರ್ ಇರಲ್ಲ!ʼ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News