Matrimony scams: ಏನೂ ಅರಿಯದ ವಯಸ್ಸಿನಲ್ಲಿ ಪ್ರೀತಿ-ಪ್ರೇಮ ಎಂದು ಮೋಸ ಹೋಗುವ ಯುವಕ-ಯುವತಿಯರಿಗೆ ಜೀವನದ ಅನುಭವ ಹೊಂದಿರುವ ಹಿರಿಯರು ಬುದ್ದಿ ಹೇಳುತ್ತಾರೆ. ಆದರಿಲ್ಲಿ, ನಿವೃತ್ತಿ ವಯಸ್ಸಿನ ವ್ಯಕ್ತಿಗೆ 50ರ ಆಂಟಿ ಮಾಡಿರುವ ಮಹಾಮೋಸ ಕೇಳಿದ್ರೆ ಪ್ರೀತಿ, ಪ್ರೇಮ ಅಲ್ಲ ಜನರಿಗೆ ಮದುವೆಯ ಬಗ್ಗೆಯೂ ವೈರಾಗ್ಯ ಹುಟ್ಟುತ್ತೆ...
ಮೊದಲನೇ ಪತ್ನಿ ತೀರಿಕೊಂಡ ಹಿನ್ನೆಲೆಯಲ್ಲಿ ರಾಮಕೃಷ್ಣ (62) ಎಂಬ ವ್ಯಕ್ತಿ ಮ್ಯಾಟ್ರಿಮೋನಿ ಮೂಲಕ ಸಂಗಾತಿಯ ಹುಡುಕಾಟ ನಡೆಸಿದ್ದರು. ಮ್ಯಾಟ್ರಿಮೋನಿ ಮೂಲಕವೇ ರಾಮಕೃಷ್ಣ ಅವರಿಗೆ ಪರಿಚಯ ಆಗಿದ್ದ ಮಹಿಳೆ ಅಂಕಲ್ ಪೂರ್ವಾಪರ, ಆತನ ಪಿಎಫ್ ಅಕೌಂಟ್, ಚಿನ್ನಾಭರಣ ಹೀಗೆ ಎಲ್ಲದರ ಬಗ್ಗೆ ಮಾಹಿತಿ ಕಲೆಹಾಕಿ ಇಳಿ ವಯಸ್ಸಿನಲ್ಲಿ ಜೊತೆಯಾಗಿರುವ ಭರವಸೆ ನೀಡಿದ್ದರು. ಆಕೆಯ ಹೆಸರು ವಿಜಯಲಕ್ಷ್ಮಿ.
ಇದನ್ನೂ ಓದಿ- ಹೀಗೂ ಉಂಟು… ಹೆತ್ತ ತಾಯಿಯನ್ನೇ ಮದುವೆಯಾದ ಮಗ: ಇದು ವಿಚಿತ್ರವೋ, ವಿನಾಶವೋ… ಛೇ!!!
ಆಂಟಿಯ ಮೋಸ ಜಾಲದಲ್ಲಿ ಬೀಳುತ್ತಿರುವುದನ್ನು ಅರಿಯದ ಅಂಕಲ್ ರಾಮಕೃಷ್ಣ 2020ರ ನವೆಂಬರ್ ನಲ್ಲಿ ವಿಜಯಲಕ್ಷ್ಮಿ ಜೊತೆ ಎರಡನೇ ಮದುವೆಯಾಗಿದ್ದರು.
ಮದುವೆಯಾದ ಕೆಲವೇ ತಿಂಗಳಲ್ಲಿ ತನ್ನ ಚಾಳಿ ತೋರಿಸಲು ಆರಂಭಿಸಿದ ಮಹಿಳೆ ಹಣ, ಚಿನ್ನಾಭರಣಕ್ಕಾಗಿ ಬೆದರಿಕೆ ಹಾಕಿದ್ದಳು. ಹಾಗೆಯೇ ಆಕೆ ಮನೆಯಲ್ಲಿದ್ದ 25 ಲಕ್ಷ ಹಣವನ್ನ ಕಳುವು ಮಾಡಿದ್ದಳು ಎಂಬ ಆರೋಪವೂ ಇದೆ. ಅಷ್ಟೇ ಅಲ್ಲ, ಎರಡನೇ ಮದುವೆ ಆಗಿದ್ದ ವ್ಯಕ್ತಿಗೆ ಆ ಮಹಿಳೆಯಿಂದ ಊಹಿಸಲೂ ಸಾಧ್ಯವಾಗದಂತಹ ಮಹಾಮೋಸವೂ ಆಗಿದೆ.
ಇದನ್ನೂ ಓದಿ- Relationship Tips: ನೀವು ಮದುವೆಯಾಗದಿದ್ದರೆ ಏನೆಲ್ಲ ತೊಂದರೆಗಳು ಆಗುತ್ತೆ ಗೊತ್ತಾ..?
ವೃದ್ಧಾಪ್ಯದಲ್ಲಿ ತನ್ನ ಕಷ್ಟ ಸುಖ ಹೇಳಿಕೊಳ್ಳಲು ಸಂಗಾತಿ ಇರಲಿ ಎಂದು ಎರಡನೇ ಮದುವೆಯಾಗಿದ್ದ 62 ವಯಸ್ಸಿನ ರಾಮಕೃಷ್ಣ ಅವರನ್ನು ಕೈ ಹಿಡಿದಿದ್ದ ಮಹಿಳೆಗೆ ಇದು ಒಂದಲ್ಲ... ಎರಡಲ್ಲ... ಬರೋಬ್ಬರಿ ಎಂಟನೇ ಮದುವೆ ಎಂದು ಗೊತ್ತಾಗಿದೆ. ಈ ಮೊದಲೇ ಏಳು ಮದುವೆಯಾಗಿರುವ ವಿಷಯ ಬೆಳಕಿಗೆ ಬಂದ ಬಳಿಕ ಈ ವಿಷಯ ಕೇಳಿದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಆಂಟಿ, ಮೋಸ ಮಾಡಿರುವುದಲ್ಲದೇ ನ್ಯಾಯಾಲಯದಲ್ಲಿ ಸುಳ್ಳು ದೂರು ನೀಡಿದ್ದಾಳೆ ಎಂದು ಹೇಳಲಾಗುತ್ತಿದೆ.
ಸದ್ಯ, ಅಂಕಲ್ ಗೆ ಮೋಸ ಮಾಡಿದ್ದ ಮಹಿಳೆ ವಿಜಯಲಕ್ಷ್ಮಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು ನ್ಯಾಯಾಲಯದ ಪಿಸಿಆರ್ ಆಧರಿಸಿ ಬಸವೇಶ್ವರ ನಗರ ಠಾಣೆಯಲ್ಲ ಎಫ್ಐಆರ್ ಫೈಲ್ ಮಾಡಲಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.