"ಗಂಡ ಹೆಂಡತಿ ಪರಸ್ಪರ ಮುಖ ನೋಡಿಲ್ಲ ಅಂದ್ರೆ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಿ ಹೇಗೆ ಉಳಿಯುತ್ತೆ?"- L&T ಮುಖ್ಯಸ್ಥನ ಹೇಳಿಕೆಗೆ ಅನುಪಮ್‌ ಮಿತ್ತಲ್‌ ಟಾಂಗ್‌

Anupam Mittal's response to S.N. Subramanian's statement: ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಿ ಎಂದು ಎಸ್.ಎನ್. ಸುಬ್ರಮಣಿಯನ್ ಅವರ ಹೇಳಿಕೆಯು ವಿವಾದ ಸೃಷ್ಟಿಸಿದ್ದಲ್ಲದೆ, ಅವರನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ.

Written by - Bhavishya Shetty | Last Updated : Jan 13, 2025, 04:04 PM IST
    • ಲಾರ್ಸೆನ್ & ಟೂಬ್ರೊ (ಎಲ್ & ಟಿ) ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಹೇಳಿಕೆ
    • ಶಾದಿ.ಕಾಮ್ ಸಂಸ್ಥಾಪಕ ಅನುಪಮ್ ಮಿತ್ತಲ್ ಟೀಕೆ
    • ಹೇಳಿಕೆಗೆ ವಿರುದ್ಧವಾಗಿ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಧ್ವನಿ ಎತ್ತುತ್ತಿದ್ದಾರೆ.
"ಗಂಡ ಹೆಂಡತಿ ಪರಸ್ಪರ ಮುಖ ನೋಡಿಲ್ಲ ಅಂದ್ರೆ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಿ ಹೇಗೆ ಉಳಿಯುತ್ತೆ?"- L&T ಮುಖ್ಯಸ್ಥನ ಹೇಳಿಕೆಗೆ ಅನುಪಮ್‌ ಮಿತ್ತಲ್‌ ಟಾಂಗ್‌ title=
Anupam Mittal'

Anupam Mittal's response to S.N. Subramanian's statement: ಲಾರ್ಸೆನ್ & ಟೂಬ್ರೊ (ಎಲ್ & ಟಿ) ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಅವರು, 90 ಗಂಟೆಗಳ ಕಾಲ ಕೆಲಸ ಮಾಡುವ ಬಗ್ಗೆ ಮತ್ತು ತನ್ನ ಹೆಂಡತಿಯನ್ನು ನೋಡುವ ಕುರಿತಾಗಿ ನೀಡಿರುವ ಹೇಳಿಕೆಯು ಬಹಳಷ್ಟು ಕೋಲಾಹಲವನ್ನು ಸೃಷ್ಟಿಸುತ್ತಿದೆ. ಈ ಹೇಳಿಕೆಗೆ ವಿರುದ್ಧವಾಗಿ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ  ಧ್ವನಿ ಎತ್ತುತ್ತಿದ್ದಾರೆ. ಜೊತೆಗೆ ಅವರ ಆ ಮಾತುಗಳನ್ನು ವಿವಾದಾತ್ಮಕ ಎಂದು ಕರೆಯುತ್ತಿದ್ದಾರೆ.

ಈ ಮಧ್ಯೆ, ಶಾರ್ಕ್ ಟ್ಯಾಂಕ್ ಇಂಡಿಯಾ ರಿಯಾಲಿಟಿ ಶೋನ ತೀರ್ಪುಗಾರ ಮತ್ತು ಶಾದಿ.ಕಾಮ್ ಸಂಸ್ಥಾಪಕ ಅನುಪಮ್ ಮಿತ್ತಲ್ ಕೂಡ ಎಸ್.ಎನ್. ಸುಬ್ರಮಣಿಯನ್ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ನಿಂದ ಹೊರ ಬಂದ ಚೈತ್ರಾ ಕುಂದಾಪುರ ನಿಜವಾದ ವಯಸ್ಸೆಷ್ಟು?

ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಿ ಎಂದು ಎಸ್.ಎನ್. ಸುಬ್ರಮಣಿಯನ್ ಅವರ ಹೇಳಿಕೆಯು ವಿವಾದ ಸೃಷ್ಟಿಸಿದ್ದಲ್ಲದೆ, ಅವರನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ. ಇಷ್ಟೇ ಅಲ್ಲ, ನಟಿ ದೀಪಿಕಾ ಪಡುಕೋಣೆ ಕೂಡ ಅವರ ಹೇಳಿಕೆಯನ್ನು ಟೀಕಿಸಿ, ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಈಗ ಅನುಪಮ್ ಮಿತ್ತಲ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಎಸ್.ಎನ್. ಸುಬ್ರಮಣಿಯನ್ ಅವರ ಹೇಳಿಕೆಯನ್ನು ಅನುಪಮ್ ಮಿತ್ತಲ್ ಟೀಕಿಸಿ, "ಆದರೆ ಸರ್, ಗಂಡ ಮತ್ತು ಹೆಂಡತಿ ಒಬ್ಬರನ್ನೊಬ್ಬರು ನೋಡದಿದ್ದರೆ ನಾವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೇಗೆ ಉಳಿಯುತ್ತೇವೆ?" ಎಂದು x ನಲ್ಲಿ ಪೋಸ್ಟ್ ಮಾಡಿದ್ದಾರೆ.

ಎಸ್.ಎನ್. ಸುಬ್ರಮಣಿಯನ್ ಹೇಳಿದ್ದೇನು?
ಇತ್ತೀಚೆಗೆ ಎಸ್.ಎನ್. ಸುಬ್ರಮಣಿಯನ್ ಅವರು 90 ಗಂಟೆಗಳ ಕೆಲಸದ ಅವಧಿಯನ್ನು ಪ್ರತಿಪಾದಿಸುತ್ತಾ, "ನೀವು ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ನೀವು ಎಷ್ಟು ಹೊತ್ತು ಅಂತಾ ನಿಮ್ಮ ಹೆಂಡತಿಯನ್ನು ನೋಡಲು ಸಾಧ್ಯ? ಹೆಂಡತಿಯರು ಕೂಡ ಎಷ್ಟು ಹೊತ್ತು ಅಂತಾ ನಿಮ್ಮನ್ನೇ ನೋಡುತ್ತಿರುತ್ತಾರೆ? ಆಫೀಸಿಗೆ ಹೋಗಿ ಕೆಲಸ ಶುರು ಮಾಡಿ” ಎಂದಿದ್ದರು. ಅವರ ಹೇಳಿಕೆಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಎಲ್ಲಾದರೂ ಶುಭ ಕಾರ್ಯಕ್ಕೆ ಹೊರಡುವಾಗ ಬೆಕ್ಕು ಅಡ್ಡ ಬಂದ್ರೆ ಕೆಟ್ಟದ್ದಾ? ಇದರ ಹಿಂದಿರುವ ನಿಜವಾದ ಅರ್ಥ ಏನು ಗೊತ್ತಾ?

ಆನಂದ್ ಮಹೀಂದ್ರಾ ಪ್ರತಿಕ್ರಿಯೆ:
ಇತ್ತೀಚೆಗೆ, ಸಂದರ್ಶನವೊಂದರಲ್ಲಿ, ಆನಂದ್ ಮಹೀಂದ್ರಾ, ಎಸ್.ಎನ್. ಸುಬ್ರಮಣಿಯನ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, "ನನ್ನ ಹೆಂಡತಿ ತುಂಬಾ ಸುಂದರಿ. ನಾನು ಅವಳನ್ನು ನೋಡಲು ಇಷ್ಟಪಡುತ್ತೇನೆ" ಎಂದು ಹೇಳಿದ್ದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News