ಇಷ್ಟು ಮೊತ್ತದ ಹಣ ವರ್ಗಾವಣೆ ಆಗಿದ್ರೆ 'ಐಟಿ ನೋಟೀಸ್' ಬರೋದು ಗ್ಯಾರಂಟಿ..!

Income Tax: ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಇರುವ ಎಲ್ಲಾ ನಿಯಮ-ಕಾನೂನುಗಳನ್ನು ತಿಳಿಯುವುದು ಅತ್ಯಂತ ಅವಶ್ಯಕ. ಅದರಲ್ಲೂ ಆದಾಯ ತೆರಿಗೆ ಇಲಾಖೆಯ ನಿಯಮಗಳನ್ನು ತಿಳಿಯುವುದು ಮತ್ತು ಪಾಲಿಸುವುದು ಇನ್ನೂ ಮುಖ್ಯವಾದ ಸಂಗತಿ.

Written by - Yashaswini V | Last Updated : Dec 13, 2024, 08:45 AM IST
  • ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ನಿಯಮದ ಪ್ರಕಾರ ಒಂದು ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಹಣ ಪಾವತಿಸಿದರೆ ನೋಟಿಸ್ ಗ್ಯಾರಂಟಿ
  • ಒಂದು ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ದುಡ್ಡನ್ನು ಫಿಕ್ಸೆಡ್ ಡಿಪಾಸಿಟ್ ಮಾಡಿದರೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ.
  • 30 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿ ಮಾಡಿದರೆ ಪ್ರಾಪರ್ಟಿ ರಿಜಿಸ್ಟ್ರಾರ್ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುತ್ತದೆ.
ಇಷ್ಟು ಮೊತ್ತದ ಹಣ ವರ್ಗಾವಣೆ ಆಗಿದ್ರೆ 'ಐಟಿ ನೋಟೀಸ್' ಬರೋದು ಗ್ಯಾರಂಟಿ..!   title=

Income Tax Notice: ನಾವು ದುಡಿದ ಹಣವನ್ನು ಉಳಿಸುವಾಗ ಮತ್ತು ಬೇರೆ ಬೇರೆ ವ್ಯವಹಾರದಲ್ಲಿ ತೊಡಗಿಸುವಾಗ ಅತ್ಯಂತ ಜಾಗರೂಕರಾಗಿರಬೇಕು. ಅದಕ್ಕಾಗಿ ನಾವು ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಇರುವ ಎಲ್ಲಾ ನಿಯಮ-ಕಾನೂನುಗಳನ್ನು ತಿಳಿಯುವುದು ಅತ್ಯಂತ ಅವಶ್ಯಕ. ಅದರಲ್ಲೂ ಆದಾಯ ತೆರಿಗೆ ಇಲಾಖೆಯ ನಿಯಮಗಳನ್ನು ತಿಳಿಯುವುದು ಮತ್ತು ಪಾಲಿಸುವುದು ಇನ್ನೂ ಮುಖ್ಯವಾದ ಸಂಗತಿ. ವಿತ್ತೀಯ ವರ್ಷದಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣ ವರ್ಗಾವಣೆ ಆಗಿದ್ದು, ಈ ಹಣಕ್ಕೆ ಆದಾಯ ತೆರಿಗೆ ಪಾವತಿಸದಿದ್ದರೆ ಅಂತಹವರಿಗೆ ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಬಹುದು. 

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ನಿಯಮಗಳ ಪ್ರಕಾರ ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಡಿಪಾಸಿಟ್ ಮಾಡಿದರೆ ಅಥವಾ ವ್ಯವಹಾರ ಮಾಡಿದರೆ ಈ ಬಗ್ಗೆ ನೀವು ವ್ಯವಹರಿಸುವ ಬ್ಯಾಂಕ್ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುತ್ತದೆ. ಇದು ಬ್ಯಾಂಕ್ ಗೆ ಇರುವ ನಿಯಮ. ಬ್ಯಾಂಕಿನಿಂದ ಆದಾಯ ತೆರಿಗೆ ಇಲಾಖೆಗೆ ಈ ಮಾಹಿತಿ ಹೋಗುತ್ತಿದ್ದಂತೆ ಅದು ನಿಮಗೆ ನೋಟಿಸ್ ನೀಡುತ್ತದೆ. 

* ನಿಗದಿತ ಮೊತ್ತಕ್ಕಿಂತ ಹೆಚ್ಚಿನ ವಹಿವಾಟು: 
ನಿಗದಿತ ಮಿತಿಗಿಂತ ಅರ್ಥಾತ್ ಒಂದು ಆರ್ಥಿಕ ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಹಣದ ವಹಿವಾಟು ನಡೆಸಿದಾಗ ಆದಾಯ ತೆರಿಗೆ ಇಲಾಖೆಯು ಈ ಹಣದ ಮೂಲದ ಬಗ್ಗೆ ನಿಮ್ಮನ್ನು ಮಾಹಿತಿ ಕೇಳಬಹುದು. 

ಇದನ್ನೂ ಓದಿ- ಪ್ರಪಂಚದ ಶ್ರೀಮಂತರ ಪೈಕಿ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಆಸ್ತಿಯ ಮೌಲ್ಯ ಒಟ್ಟು ಎಷ್ಟು ಗೊತ್ತಾ ?

* ಎಷ್ಟು ದುಡ್ಡನ್ನು ಫಿಕ್ಸೆಡ್ ಡಿಪಾಸಿಟ್ ಮಾಡಬಹುದು?
ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ದುಡ್ಡನ್ನು ಫಿಕ್ಸೆಡ್ ಡಿಪಾಸಿಟ್ ಮಾಡಿದರೆ ಆಗಲೂ ನಿಮ್ಮ ವ್ಯವಹಾರದ ಬಗ್ಗೆ ಬ್ಯಾಂಕ್ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ. ಆಗ ಆದಾಯ ತೆರಿಗೆ ಇಲಾಖೆ ನಿಮಗೆ ಆದಾಯ ಮೂಲದ ಮಾಹಿತಿ ಕೇಳಬಹುದು ಜೊತೆಗೆ ತೆರಿಗೆ ಪಾವತಿಸುವಂತೆ ಸೂಚಿಸಬಹುದು. 
 
* ಆಸ್ತಿಗಳ ಖರೀದಿ ವ್ಯವಹಾರ: 
ನೀವು ಯಾವುದೇ ಆಸ್ತಿಗಳನ್ನು ಖರೀದಿ ಮಾಡುವಾಗ ಅದು 30 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ವ್ಯವಹಾರವಾಗಿದ್ದರೆ ಪ್ರಾಪರ್ಟಿ ರಿಜಿಸ್ಟ್ರಾರ್ ನಿಮ್ಮ ವ್ಯವಹಾರದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುತ್ತದೆ. ಇದು  ಪ್ರಾಪರ್ಟಿ ರಿಜಿಸ್ಟ್ರಾರ್ ಖಡ್ಡಾಯವಾಗಿ ಮಾಡಬೇಕಾದ ಕೆಲಸವಾಗಿದೆ. ಅಂತಹ ಸಂದರ್ಭದಲ್ಲಿ ಆದಾಯ ಇಲಾಖೆ ನಿಮಗೆ ಆದಾಯದ ಮೂಲ ಕೇಳಿ ನೋಟಿಸ್ ನೀಡುತ್ತದೆ. ಜೊತೆಗೆ ತೆರಿಗೆ ಕಟ್ಟುವಂತೆಯೂ ಸೂಚಿಸುತ್ತದೆ. 

* ಕ್ರೆಡಿಟ್ ಕಾರ್ಡ್ ಬಿಲ್ಲುಗಳು: 
ಡಿಜಿಟಲ್ ಯುಗದಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ವ್ಯವಹರಿಸುವುದು ಜಾಸ್ತಿ. ಹಾಗಾಗಿ ಈ ಬಗ್ಗೆ ಕೂಡ ತಿಳಿದುಕೊಳ್ಳಬೇಕು. ಕ್ರೆಡಿಟ್ ಕಾರ್ಡ್ ಮೂಲಕ 1 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಬಿಲ್ ಪಾವತಿ ಮಾಡಿದರೆ ಆಗಲೂ ಆದಾಯ ಇಲಾಖೆಗೆ ಮಾಹಿತಿ ಹೋಗುತ್ತದೆ. ಇದೇ ರೀತಿ ಒಂದು ಹಣಕಾಸು ವರ್ಷದಲ್ಲಿ ನೀವು ಕ್ರೆಡಿಟ್ ಕಾರ್ಡ್ ಮೂಲಕ 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ವ್ಯವಹಾರ ಮಾಡಿದರೆ ಆದಾಯ ಇಲಾಖೆ ನಿಮಗೆ ನೋಟಿಸ್ ನೀಡುತ್ತದೆ. 

ಇದನ್ನೂ ಓದಿ- ತಿಂಗಳಿಗೆ 80-85ಸಾವಿರ ದುಡಿಯುವ ಬೆಂಗಳೂರು ಉಬರ್ ಡ್ರೈವರ್: ವಿಡಿಯೋ ವೈರಲ್

* ಷೇರು, ಮ್ಯೂಚುವಲ್ ಫಂಡ್‌, ಡಿಬೆಂಚರ್‌, ಬಾಂಡ್‌ ಖರೀದಿ: 
ಹಣ ಉಳಿತಾಯ ಮಾಡಲು ಷೇರುಗಳು, ಮ್ಯೂಚುವಲ್ ಫಂಡ್‌ಗಳು, ಡಿಬೆಂಚರ್‌ಗಳು ಅಥವಾ ಬಾಂಡ್‌ಗಳನ್ನು ಖರೀದಿಸುವುದು ಸಾಮಾನ್ಯ. ಹಾಗಂತ ನಿಮಿಗಿಷ್ಟ ಬಂದಷ್ಟು ಮೌಲ್ಯಕ್ಕೆ ಖರೀದಿ ಮಾಡುವಂತಿಲ್ಲ. ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಷೇರುಗಳು, ಮ್ಯೂಚುವಲ್ ಫಂಡ್‌ಗಳು, ಡಿಬೆಂಚರ್‌ಗಳು ಅಥವಾ ಬಾಂಡ್‌ಗಳನ್ನು ಖರೀದಿ ಮಾಡಿದರೆ ಆದಾಯ ತೆರಿಗೆ ಇಲಾಖೆ ನಿಮಗೆ ನೋಟಿಸ್ ನೀಡುತ್ತದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News