Baal Aadhaar Latest Update: ಮಕ್ಕಳಿಗಾಗಿ ಬಾಲ್ ಆಧಾರ್ ಹೆಸರಿನಲ್ಲಿ ಆಧಾರ್ ಕಾರ್ಡ್ ನೀಡುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಇದೀಗ ಐದು ಮತ್ತು 15 ವರ್ಷ ವಯಸ್ಸಿನ ಮಕ್ಕಳಿಗೆ ಆಧಾರ್ ಡೇಟಾದಲ್ಲಿ ಬಯೋಮೆಟ್ರಿಕ್ ಮಾಹಿತಿಯನ್ನು ಅಪ್ಡೇಟ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ನೀವೂ ನಿಮ್ಮ ಮಕ್ಕಳಿಗೆ ಬಾಲ್ ಆಧಾರ್ ಮಾಡಿಸಿದ್ದರೆ ಈ ಮಕ್ಕಳ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
ಏನಿದು ಬಾಲ್ ಆಧಾರ್?
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೆ ನೀಡುವ ಆಧಾರ್ ಕಾರ್ಡ್ ಅನ್ನು ಬಾಲ್ ಆಧಾರ್ ಎಂದು ಕರೆಯಲಾಗುತ್ತದೆ. ಈ ಆಧಾರ್ ಕಾರ್ಡ್ ನೀಲಿ ಬಣ್ಣದಲ್ಲಿರುತ್ತದೆ. ಈ 12- ಅಂಕಿಯ ಬಾಲ್ ಆಧಾರ್ ಕಾರ್ಡ್ ಮಗುವಿನ ಫಿಂಗರ್ಪ್ರಿಂಟ್ಗಳನ್ನು ಒಳಗೊಂಡಿರುವುದಿಲ್ಲ. ಆದಾಗ್ಯೂ, ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಿದ ನಂತರ ಮಗುವಿನ ಆಧಾರ್ ಸಂಖ್ಯೆ ಬದಲಾಗುವುದಿಲ್ಲ.
ಇದನ್ನೂ ಓದಿ- Aadhaar Card : ಆಧಾರ್ ಕಾರ್ಡ್ಗೆ ಸಂಭಂದಿಸಿದಂತೆ ಕೇಂದ್ರದಿಂದ ಹೊಸ ಅಪ್ಡೇಟ್!
ಇದೀಗ ಬಾಲ್ ಆಧಾರ್ ಕುರಿತಂತೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಯುಐಡಿಎಐ, ಈಗ 5-15 ವರ್ಷ ವಯಸ್ಸಿನ ಮಕ್ಕಳ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ ಎಂದು ಘೋಷಿಸಿದೆ. ಜೊತೆಗೆ ಈ ಮಾಹಿತಿ ನವೀಕರಣ ಪ್ರಕ್ರಿಯು ಸಂಪೂರ್ಣವಾಗಿ ಉಚಿತವಾಗಿರಲಿದೆ. ಪೋಷಕರು ಆಧಾರ್ ಕಾರ್ಡಿನಲ್ಲಿ ತಮ್ಮ ಮಕ್ಕಳ ವಿವರಗಳನ್ನು ನವೀಕರಿಸಲು ತಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
#MandatoryBiometricUpdate#BaalAadhaar
To ensure correctness of your child's #Aadhaar data, carefully check all details including spellings in both English and local language during #BiometricUpdate
If there's any changes required in the child’s details, don’t forget to update it pic.twitter.com/gO4Mfm36BC— Aadhaar (@UIDAI) November 22, 2022
ಇದನ್ನೂ ಓದಿ- ಆಧಾರ್ ಕಾರ್ಡಿನಿಂದ ಹ್ಯಾಕ್ ಆಗುತ್ತಾ ಬ್ಯಾಂಕ್ ಅಕೌಂಟ್: ಯುಐಡಿಎಐ ಹೇಳಿದ್ದೇನು?
ಬಾಲ್ ಆಧಾರ್ ಕಾರ್ಡ್ ಅನ್ನು ನವೀಕರಿಸುವುದು ಹೇಗೆ?
ತಮ್ಮ ಮಕ್ಕಳಿಗೆ ಬಾಲ್ ಆಧಾರ್ ಮಾಡಿಸಿರುವ ಪೋಷಕರು ಯುಐಡಿಎಐ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್ನಲ್ಲಿ ಮಕ್ಕಳ ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸಬಹುದು.
* ಇದಕ್ಕಾಗಿ ಮೊದಲು ಯುಐಡಿಎಐ ಅಧಿಕೃತ ವೆಬ್ಸೈಟ್ಗೆ ಭೇಟಿ ಹೋಗಿ ಬಯೋಮೆಟ್ರಿಕ್ ವಿವರಗಳ ನವೀಕರೋಸ;ಇ ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರದಲ್ಲಿ ಅಪಾಯಿಂಟ್ಮೆಂಟ್ ಕಾಯ್ದಿರಿಸಿ.
* ಬಾಲ್ ಆಧಾರ್ ಕಾರ್ಡ್ನಲ್ಲಿ ಬಯೋಮೆಟ್ರಿಕ್ ಅಪ್ಡೇಟ್ ಮಾಡಲು ನಿಮ್ಮ ಮಗುವಿನ ಜನನ ಪ್ರಮಾಣಪತ್ರ, ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳು ಸೇರಿದಂತೆ ಅಗತ್ಯವಿರುವ ದಾಖಲೆಗಳನ್ನು ಮಿಸ್ ಮಾಡದೇ ನಿಮ್ಮೊಂದಿಗೆ ಕೊಂಡೊಯ್ಯಿರಿ.
* ತಮ್ಮ ಮಗುವಿನ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಲು ಪೋಷಕರು ಇತರ ದಾಖಲೆಗಳೊಂದಿಗೆ ತಮ್ಮ ಆಧಾರ್ ಕಾರ್ಡ್ ಅನ್ನು ಸಹ ತಮ್ಮೊಂದಿಗೆ ಒಯ್ಯಬೇಕಾಗುತ್ತದೆ.
* ಆಧಾರ್ ಕೇಂದ್ರದಲ್ಲಿರುವ ಅಧಿಕಾರಿಗಳು ಮಗುವಿನ ಚಿತ್ರ, ಫಿಂಗರ್ಪ್ರಿಂಟ್ಗಳಂತಹ ಬಯೋಮೆಟ್ರಿಕ್ ವಿವರಗಳನ್ನು ಅಪ್ಡೇಟ್ ಮಾಡುತ್ತಾರೆ.
* ಬಳಿಕ ನವೀಕರಣದ ಬಗ್ಗೆ ಸ್ವೀಕೃತಿ ಚೀಟಿಯೊಂದನ್ನು ನೀಡುತ್ತಾರೆ. ಭವಿಷ್ಯದ ಉಪಯೋಗಕ್ಕಾಗಿ ಈ ಚೀಟಿಯನ್ನು ಜೋಪಾನವಾಗಿಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.