GST On Rent: ಬಾಡಿಗೆ ಮನೆಯ ಮೇಲೂ 18% ಜಿಎಸ್‌ಟಿ ಪಾವತಿಸಬೇಕೇ?

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಸುದ್ದಿಯ ಪ್ರಕಾರ ಕೇಂದ್ರ ಸರ್ಕಾರವು ಜುಲೈ 18ರಿಂದ ಜಿಎಸ್‌ಟಿ ನಿಯಮಗಳನ್ನು ಬದಲಾಯಿಸಿದೆ ಎಂದು ಹೇಳಲಾಗುತ್ತಿದೆ. ಇದರ ಪ್ರಕಾರ ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ, ಬಾಡಿಗೆಗೆ ಶೇ.18ರಷ್ಟು ಜಿಎಸ್‍ಟಿ ಪಾವತಿಸಬೇಕಾಗುತ್ತದಂತೆ.

Written by - Puttaraj K Alur | Last Updated : Sep 12, 2022, 03:23 PM IST
  • ಸೋಷಿಯಲ್ ಮೀಡಿಯಾದಲ್ಲಿ ಜಿಎಸ್‌ಟಿ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ
  • ಈ ವರದಿಗಳಲ್ಲಿ ಕೇಂದ್ರ ಸರ್ಕಾರವು ಜುಲೈ 18ರಿಂದ ಜಿಎಸ್‌ಟಿ ನಿಯಮ ಬದಲಾಯಿಸಿದೆ ಎಂದು ಹೇಳಲಾಗುತ್ತಿದೆ
  • ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಹೆಚ್ಚುವರಿ 18% ಜಿಎಸ್‌ಟಿ ಪಾವತಿಸಬೇಕಾ..?
GST On Rent: ಬಾಡಿಗೆ ಮನೆಯ ಮೇಲೂ 18% ಜಿಎಸ್‌ಟಿ ಪಾವತಿಸಬೇಕೇ?   title=
ಬಾಡಿಗೆ ಮನೆಗೆ ಶೇ.18ರಷ್ಟು GST?

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಜಿಎಸ್‌ಟಿ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಈ ವರದಿಗಳಲ್ಲಿ ಸರ್ಕಾರವು ಜುಲೈ 18ರಿಂದ ಜಿಎಸ್‌ಟಿ ನಿಯಮಗಳನ್ನು ಬದಲಾಯಿಸಿದೆ ಎಂದು ಹೇಳಲಾಗುತ್ತಿದೆ. ಈ ನಿಯಮಗಳ ಪ್ರಕಾರ ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಹೆಚ್ಚುವರಿಯಾಗಿ 18% ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಈ ವೈರಲ್ ಸುದ್ದಿಯನ್ನು ಓದಿ ಬಾಡಿಗೆದಾರರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಫ್ಯಾಕ್ಟ್ ಚೆಕ್‌ನಲ್ಲಿ ವಾಸ್ತವಾಂಶ ಬಹಿರಂಗ

ವೈರಲ್ ಸುದ್ದಿಗಳ ಪ್ರಕಾರ ನೀವು 10,000 ರೂ. ಬಾಡಿಗೆ ನೀಡುತ್ತಿದ್ದರೆ ಹೆಚ್ಚುವರಿಯಾಗಿ ಶೇ.18%ರಷ್ಟು GST ಪಾವತಿಸಬೇಕಂತೆ. ಅಂದರೆ 10 ಸಾವಿರದ ಬದಲು ನೀವು ಆಗ11,800 ರೂ. ಪಾವತಿಸಬೇಕಾಗುತ್ತದೆ. ಈ ವೈರಲ್ ಸಂದೇಶದ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್ ತನಿಖೆ ನಡೆಸಿ ಸಂತ್ಯಾಂಶವನ್ನು ತಿಳಿಸಿದೆ. ಅದರ ಪ್ರಕಾರ ಈ ಸುದ್ದಿ ಸಂಪೂರ್ಣ ನಕಲಿ ಎಂದು ಹೇಳಲಾಗಿದೆ. ಮನೆ ಬಾಡಿಗೆಗೆ ಶೇ.18ರಷ್ಟು ಜಿಎಸ್‌ಟಿ ಎಂಬ ಸುದ್ದಿ ಆಧಾರ ರಹಿತ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತಿಳಿಸಿದೆ. ಇದಲ್ಲದೇ ಈ ಬಗ್ಗೆ ಕೇಂದ್ರ ಸರ್ಕಾರವೂ ಸಹ ಸ್ಪಷ್ಟನೆ ನೀಡಿದೆ.   

ಇದನ್ನೂ ಓದಿ: ಮ್ಯೂಚುಯಲ್ ಫಂಡ್ ಅಥವಾ ಷೇರು? ಯಾವುದರಲ್ಲಿ ಹಣ ಹೂಡಿಕೆ ಮಾಡಬೇಕು?

ವೈಯಕ್ತಿಕ ಬಳಕೆಗೆ ಯಾವುದೇ GST ಇಲ್ಲ

ಈ ಬಗ್ಗೆ PIB ಟ್ವೀಟ್ ಮಾಡಿದ್ದು, ‘ವಸತಿ ಘಟಕದ ಬಾಡಿಗೆಯನ್ನು ವ್ಯಾಪಾರ ಉದ್ದೇಶಗಳಿಗಾಗಿ GST ನೋಂದಾಯಿತ ಕಂಪನಿಗೆ ನೀಡಿದಾಗ ಮಾತ್ರ ತೆರಿಗೆ ವಿಧಿಸಲಾಗುತ್ತದೆ’ ಎಂದು ಹೇಳಿದೆ. ಯಾರಾದರೂ ಇದನ್ನು ವೈಯಕ್ತಿಕ ಬಳಕೆಗಾಗಿ ಬಾಡಿಗೆಗೆ ತೆಗೆದುಕೊಂಡರೆ ಯಾವುದೇ ಜಿಎಸ್‌ಟಿ ಪಾವತಿಸುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.

ನಿಯಮವೇನು..?

ಜಿಎಸ್‌ಟಿ ಸಭೆಯ ನಂತರ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಒಬ್ಬ ವ್ಯಕ್ತಿಯು ವ್ಯಾಪಾರಕ್ಕಾಗಿ ವಸತಿ ಆಸ್ತಿಯನ್ನು ಬಾಡಿಗೆಗೆ ತೆಗೆದುಕೊಂಡರೆ ಆಗ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಆರ್ಥಿಕ ತಜ್ಞರ ಪ್ರಕಾರ, Residential Property ಅಥವಾ ಫ್ಲಾಟ್ ಬಾಡಿಗೆಗೆ GST ಪಾವತಿಸಲಾಗುವುದಿಲ್ಲ. ನೋಂದಾಯಿತ ವ್ಯಕ್ತಿ ಅಥವಾ ಘಟಕವು ವ್ಯವಹಾರವನ್ನು ನಡೆಸಿದಾಗ ಮಾತ್ರ GST ಪಾವತಿಸುವುದು ಅವಶ್ಯಕ.

ಇದನ್ನೂ ಓದಿ: ಎಸ್‌ಬಿಐ ಖಾತೆಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಹೇಗೆ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News