7th Pay Commission Latest News: ಕೇಂದ್ರ ನೌಕರರಿಗೆ ಜನವರಿ ತಿಂಗಳ ಡಿಎ ಹೆಚ್ಚಳದ ಕುರಿತಂತೆ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಮಾರ್ಚ್ ತಿಂಗಳ ವೇತನದೊಂದಿಗೆ ಹೆಚ್ಚಳವಾದ ಡಿಎ ನೌಕರರ ಕೈ ಸೇರಲಿದೆ. ಹೊಸ ಆರ್ಥಿಕ ವರ್ಷ ಪ್ರಾರಂಭವಾಗಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಇದರೊಂದಿಗೆ ನೌಕರರ ಮೂಲ ವೇತನ ಪರಿಷ್ಕರಣೆಯ ಚರ್ಚೆ ಆರಂಭವಾಗಿದೆ. ಅಂದರೆ, ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಹಣಕಾಸು ವರ್ಷವು ಉತ್ತಮವಾಗಿರಲಿದೆ. ಮುಂಬರುವ ವರ್ಷದಲ್ಲಿ ವೇತನ ಆಯೋಗವನ್ನು ರದ್ದುಪಡಿಸುವ ಮೂಲಕ ಹೊಸ ಸೂತ್ರವನ್ನು ಜಾರಿಗೆ ತರಲು ಕೂಡಾ ಸರ್ಕಾರ ಮುಂದಾಗಿದೆ.
ಫಿಟ್ಮೆಂಟ್ ಅಂಶದಲ್ಲಿ ಬದಲಾವಣೆ ನಿರೀಕ್ಷೆ :
ಈ ಬದಲಾವಣೆಯ ಅಡಿಯಲ್ಲಿ, ಉದ್ಯೋಗಿಗಳ ಫಿಟ್ಮೆಂಟ್ ಅಂಶದಲ್ಲಿ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ. ಈ ಕಾರಣದಿಂದಾಗಿ, ಉದ್ಯೋಗಿಗಳ ಸಂಬಳದಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗುವ ಸಾಧ್ಯತೆ ಇದೆ. ತಮ್ಮ ಫಿಟ್ಮೆಂಟ್ ಅಂಶವನ್ನು ಪರಿಷ್ಕರಿಸಬೇಕು ಎಂದು ಕೇಂದ್ರ ನೌಕರರು ಬಹಳ ದಿನಗಳಿಂದ ಆಗ್ರಹಿಸುತ್ತಿದ್ದಾರೆ. ಹೊಸ ಹಣಕಾಸು ವರ್ಷದಲ್ಲಿ ಸರ್ಕಾರವು ಫಿಟ್ಮೆಂಟ್ ಅಂಶವನ್ನು ಹೆಚ್ಚಿಸಬಹುದು ಎನ್ನುತ್ತವೆ ಮೂಲಗಳು.
ಇದನ್ನೂ ಓದಿ : Gold Price Today: 10 ಗ್ರಾಂ ಚಿನ್ನಕ್ಕೆ 110 ರೂ__!! ಹಿಂದೆಂದೂ ಸಂಭವಿಸಿಲ್ಲ ಬಂಗಾರದ ಬೆಲೆಯಲ್ಲಿ ಇಷ್ಟೊಂದು ಕುಸಿತ!
ವೇತನದಲ್ಲಿ 8000 ರೂಪಾಯಿ ಹೆಚ್ಚಳ!:
ಕೇಂದ್ರ ನೌಕರರ ಫಿಟ್ಮೆಂಟ್ ಅಂಶ ಬದಲಾವಣೆಗೆ ಸಂಬಂಧಿಸಿದಂತೆ ಎರಡು ವಾದಗಳಿವೆ. ಫಿಟ್ಮೆಂಟ್ ಅಂಶವನ್ನು ಈಗಿರುವ 2.57 ಪಟ್ಟಿನಿಂದ 3ಕ್ಕೆ ಏರಿಸಬೇಕು. ಹೀಗೆ ಮಾಡಿದರೆ ನೌಕರರ ಮೂಲ ವೇತನ ಸುಮಾರು 3000 ರೂ. ಹೆಚ್ಚಳವಾಗುತ್ತದೆ. ಮತ್ತೊಂದು ವಾದದ ಪ್ರಕಾರ 7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಫಿಟ್ಮೆಂಟ್ ಅಂಶವು 3.68 ರಷ್ಟು ಏರಿಸುವುದು. ಹೀಗಾದಾಗ ನೌಕರರ ವೇತನದಲ್ಲಿ ಸುಮಾರು 8000 ರೂಪಾಯಿ ಹೆಚ್ಚಳವಾಗಲಿದೆ.
ಎಷ್ಟು ಏರಿಕೆಯಾಗಲಿದೆ ವೇತನ :
ಸದ್ಯ ಕೇಂದ್ರ ನೌಕರರ ಕನಿಷ್ಠ ವೇತನ 18,000 ರೂ. ಫಿಟ್ಎಂದಾದರೆ ಮೆಂಟ್ ಅಂಶದ ನಿರ್ಧಾರದ ನಂತರ ಅದು 26,000 ರೂ.ಗೆ ಏರಿಕೆಯಾಗಲಿದೆ. ಆದರೆ, ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಪ್ರಸ್ತುತ ಇರುವ 2.57 ಪಟ್ಟು ಫಿಟ್ಮೆಂಟ್ ಅಂಶದ ಆಧಾರದ ವೇತನ ಲೆಕ್ಕ ಹಾಕಿದರೆ ಇತರ ಭತ್ಯೆಗಳನ್ನು ಹೊರತುಪಡಿಸಿ, 18,000 X 2.57 = 46260 ರೂ. ಆದರೆ ಅದನ್ನು 3.68ಕ್ಕೆ ಹೆಚ್ಚಿಸಿದರೆ, ಇತರ ಭತ್ಯೆಗಳನ್ನು ಹೊರತುಪಡಿಸಿ, ನೌಕರರ ವೇತನವು 26000 X 3.68 = 95680ರೂ. ಆಗಲಿದೆ.
ಇದನ್ನೂ ಓದಿ : EPFO ಚಂದಾದಾರರಿ ಮತ್ತೊಂದು ಸಂತಸದ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.