ವೇತನ ವರ್ಗಕ್ಕೆ ಸರ್ಕಾರದ ಮತ್ತೊಂದು ಕೊಡುಗೆ !ಆದಾಯ ತೆರಿಗೆ ವಿನಾಯಿತಿಯ ನಂತರ EPFO ಬಗ್ಗೆ ಮಹತ್ವದ ಆದೇಶ

2024-25ನೇ ಸಾಲಿಗೆ ಭವಿಷ್ಯ ನಿಧಿ (PF) ಠೇವಣಿಗಳ ಮೇಲಿನ ಬಡ್ಡಿದರಗಳನ್ನು 8% ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಾಯ್ದುಕೊಳ್ಳಬಹುದು ಎನ್ನಲಾಗಿದೆ. 

Written by - Ranjitha R K | Last Updated : Feb 14, 2025, 09:51 AM IST
  • ಸಿಬಿಟಿ ಸಭೆ ಫೆಬ್ರವರಿ 28 ರಂದು ನಡೆಯಲಿದೆ.
  • ಈ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ
  • ಹಣಕಾಸು ಸಚಿವಾಲಯದ ಅನುಮೋದನೆಯ ನಂತರ ಅಧಿಕೃತ ಅಧಿಸೂಚನೆ
ವೇತನ ವರ್ಗಕ್ಕೆ ಸರ್ಕಾರದ ಮತ್ತೊಂದು ಕೊಡುಗೆ !ಆದಾಯ ತೆರಿಗೆ ವಿನಾಯಿತಿಯ ನಂತರ EPFO ಬಗ್ಗೆ ಮಹತ್ವದ ಆದೇಶ  title=

ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ವಿನಾಯಿತಿ ಮತ್ತು ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಕಡಿತಗೊಳಿಸಿದ ನಂತರ, ವೇತನ ವರ್ಗಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡುವ ಸಿದ್ದತೆಯಲ್ಲಿದೆ ಸರ್ಕಾರ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) 2024-25ನೇ ಸಾಲಿಗೆ ಭವಿಷ್ಯ ನಿಧಿ (PF) ಠೇವಣಿಗಳ ಮೇಲಿನ ಬಡ್ಡಿದರಗಳನ್ನು 8% ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಾಯ್ದುಕೊಳ್ಳಬಹುದು ಎನ್ನಲಾಗಿದೆ. 

ಇಪಿಎಫ್‌ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ (ಸಿಬಿಟಿ) ಸಭೆ ಫೆಬ್ರವರಿ 28 ರಂದು ನಡೆಯಲಿದೆ. ಈ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಆದರೆ ಹಣಕಾಸು ಸಚಿವಾಲಯದ ಅನುಮೋದನೆಯ ನಂತರವೇ ಅದರ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ.

ಇದನ್ನೂ ಓದಿ : ಸರ್ಕಾರಿ ನೌಕರರ ಮೂಲ ವೇತನದಲ್ಲಿಯೇ ಬೃಹತ್ ಹೆಚ್ಚಳ !ಪಿಯೂನ್‌ಗಳಿಂದ ಅಧಿಕಾರಿಗಳವರೆಗೆ ಯಾರಿಗೆ ಎಷ್ಟು ವೇತನ ಹೆಚ್ಚಳ ಇಲ್ಲಿದೆ ಸಂಪೂರ್ಣ ವಿವರ

ಇದಕ್ಕೂ ಮುನ್ನ, ಇಪಿಎಫ್‌ಒದ ಹೂಡಿಕೆ ಸಮಿತಿ ಮತ್ತು ಖಾತೆಗಳ ಪರಿಶೀಲನಾ ಸಮಿತಿಯು ಮುಂದಿನ ವಾರ ಸಭೆ ಸೇರಿ ಆದಾಯ ಮತ್ತು ವೆಚ್ಚವನ್ನು ನಿರ್ಣಯಿಸಲಿದೆ. ಈ ಪರಿಶೀಲನೆಯ ನಂತರ, ಭವಿಷ್ಯದಲ್ಲಿ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಾಕಷ್ಟು ಹಣ ಲಭ್ಯವಾಗುವಂತೆ ಬಡ್ಡಿದರವನ್ನು ನಿಗದಿಪಡಿಸಲಾಗುತ್ತದೆ.

ಕ್ಲೈಮ್‌ಗಳು ಮತ್ತು ಇತ್ಯರ್ಥಗಳಲ್ಲಿಯೂ ಹೆಚ್ಚಳ : 
ಪ್ರಸಕ್ತ ಹಣಕಾಸು ವರ್ಷದಲ್ಲಿ ಇಪಿಎಫ್‌ಒ ಹೂಡಿಕೆಯ ಮೇಲೆ ಉತ್ತಮ ಲಾಭವನ್ನು ಪಡೆದಿದ್ದು, ಚಂದಾದಾರರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಈ ವರ್ಷ ಪಿಎಫ್ ಕ್ಲೈಮ್‌ಗಳ ಇತ್ಯರ್ಥದಲ್ಲಿ ದೊಡ್ಡ ಏರಿಕೆ ಕಂಡುಬಂದಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಇಪಿಎಫ್‌ಒ 2024-25ರಲ್ಲಿ ಇದುವರೆಗೆ 50.8 ಮಿಲಿಯನ್ (5.08 ಕೋಟಿ) ಕ್ಲೈಮ್‌ಗಳನ್ನು ಇತ್ಯರ್ಥಪಡಿಸಿದ್ದು, ಇದರ ಮೊತ್ತ 2.05 ಲಕ್ಷ ಕೋಟಿ ರೂ. 

ಇದನ್ನೂ ಓದಿ : ಹೊಸ ಆದಾಯ ತೆರಿಗೆ ಮಸೂದೆ 'ಕ್ಯಾಪಿಟಲ್ ಅಸೆಟ್ಸ್' ವ್ಯಾಖ್ಯಾನವನ್ನು ಬದಲಿಸುತ್ತದೆಯೇ?

ಬಡ್ಡಿದರದಲ್ಲಿ ನಿರಂತರ ಏರಿಕೆ : 
ಕಳೆದ ವರ್ಷ, ಇಪಿಎಫ್‌ಒ ಭವಿಷ್ಯ ನಿಧಿಯ ಮೇಲೆ 8.25% ಬಡ್ಡಿ ನೀಡುವುದಾಗಿ ಘೋಷಿಸಿತ್ತು. ಇದು 2022-23 ರಲ್ಲಿ 8.15% ರಷ್ಟಿತ್ತು. ಆಗ ಇಪಿಎಫ್‌ಒ ಒಟ್ಟು ಆದಾಯ 1,07,000 ಕೋಟಿ ರೂ.ಗಳಾಗಿದ್ದರೆ, 2022-23ರಲ್ಲಿ ಅದು 91,151.66 ಕೋಟಿ ರೂ.ಗಳಷ್ಟಿತ್ತು.

ಹಣ ಯಾವಾಗ ಸಿಗುತ್ತದೆ?
ಇಪಿಎಫ್‌ಒ ಪ್ರತಿ ವರ್ಷ ತನ್ನ ಶಿಫಾರಸನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸುತ್ತದೆ. ಅಲ್ಲಿ ಅನುಮೋದನೆ ಪಡೆದ ನಂತರ ಔಪಚಾರಿಕವಾಗಿ ಸೂಚಿಸಲಾಗುತ್ತದೆ.ಇದಾದ ಬಳಿಕ ಈ ಬಡ್ಡಿಯನ್ನು ಪಿಎಫ್ ಖಾತೆದಾರರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯೆಯು ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಪೂರ್ಣಗೊಳ್ಳುತ್ತದೆ.

6.5 ಕೋಟಿಗೂ ಹೆಚ್ಚು ಚಂದಾದಾರರು ಇಪಿಎಫ್‌ಒ ಅಡಿಯಲ್ಲಿ ಬರುತ್ತಾರೆ. ಅವರು ಈ ನಿರ್ಧಾರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ವರ್ಷವೂ ಬಡ್ಡಿದರ 8.25% ನಲ್ಲಿಯೇ ಮುಂದುವರಿದರೆ, ಲಕ್ಷಾಂತರ ಉದ್ಯೋಗಿಗಳಿಗೆ ಅದು ಸಮಾಧಾನಕರ ಸುದ್ದಿಯಾಗಲಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News