ʻಮದುವೆಯಾಗಿ.. ಇಲ್ಲವೇ ಕೆಲಸ ಬಿಡಿʼ : ಬ್ಯಾಚುಲರ್‌ಗಳಿಗೆ ಕಂಪನಿಯ ನೋಟಿಸ್ ವೈರಲ್!

ಕಂಪನಿಗಳು ಕಾಲಕ್ಕೆ ತಕ್ಕಂತೆ ವಿವಿಧ ನಿಯಮಗಳನ್ನು ವಿಧಿಸುತ್ತವೆ. ಇದೀಗ ಇಲ್ಲೊಂದು ಕಂಪನಿಯ ಹಿಸ ನಿಯಮವೊಂದು ಬ್ಯಾಚುಲರ್‌ಗಳಿಗೆ ಶಾಕ್‌ ನೀಡಿದೆ.  

Written by - Chetana Devarmani | Last Updated : Feb 26, 2025, 08:01 AM IST
  • ಮದುವೆಯಾಗದವರಿಗೆ ಕಂಪನಿಯ ಬಿಗ್‌ ಶಾಕ್‌
  • ʻಮದುವೆಯಾಗಿ.. ಇಲ್ಲವೇ ಕೆಲಸ ಬಿಡಿʼ
  • ಬ್ಯಾಚುಲರ್‌ಗಳಿಗೆ ಕಂಪನಿಯ ನೋಟಿಸ್ ವೈರಲ್!
ʻಮದುವೆಯಾಗಿ.. ಇಲ್ಲವೇ ಕೆಲಸ ಬಿಡಿʼ : ಬ್ಯಾಚುಲರ್‌ಗಳಿಗೆ ಕಂಪನಿಯ ನೋಟಿಸ್ ವೈರಲ್! title=

ಮದುವೆ ಅನ್ನೋದು ಜೀವನದಲ್ಲಿ ಒಮ್ಮೆ ಮಾತ್ರ ಬರುವ ಸಿಹಿ ಅನುಭವ. ವಿವಾಹ ವ್ಯವಸ್ಥೆಯಲ್ಲಿನ ಬದಲಾವಣೆಗಳಿಂದಾಗಿ ಪರಿಸ್ಥಿತಿಯನ್ನು ಸುಧಾರಿಸಲು ಕಂಪನಿಯು ಹೊಸ ನಿಯಮಗಳನ್ನು ರಚಿಸಿದೆ. ವಿವಾಹ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ಕಂಪನಿಯ ನಿರ್ಧಾರವು ವಿವಾದಕ್ಕೂ ಕಾರಣವಾಗಿದೆ. ಕಂಪನಿಗೆ ಸೇರುವವರು ಅವಿವಾಹಿತರಾಗಿಯೇ ಉಳಿಯುತ್ತಿದ್ದಾರೆ. ಕಂಪನಿಯು ಉದ್ಯೋಗಿಗಳು ಮದುವೆಯಾಗದಿದ್ದರೆ ಅವರನ್ನು ಕೆಲಸದಿಂದ ತೆಗೆದುಹಾಕುವ ಹೊಸ ನಿಯಮವನ್ನು ವಿಧಿಸಿದೆ. ಈ ಹೊಸ ನಿಯಮ ಚೀನಾದಲ್ಲಿ ವಿವಾದಕ್ಕೆ ಕಾರಣವಾಗಿದೆ. ಸರ್ಕಾರಿ ಅಧಿಕಾರಿಗಳ ಎಚ್ಚರಿಕೆಗಳ ಹೊರತಾಗಿಯೂ ಕಂಪನಿಯು ತನ್ನ ನೀತಿಯನ್ನು ಉಳಿಸಿಕೊಂಡಿದೆ. 

ಇದನ್ನೂ ಓದಿ: ಪ್ರೇಯಸಿ ಸೇರಿ ತನ್ನ ಕುಟುಂಬದ ಐವರನ್ನ ಬರ್ಬರವಾಗಿ ಕೊಲೆ ಮಾಡಿದ ಯುವಕ; ಕಾರಣವೇನು ಗೊತ್ತಾ..?

ಚೀನಾದಲ್ಲಿ ಶಾಂಡೊಂಗ್ ಶುಂಟಿಯನ್ ಕೆಮಿಕಲ್ ಗ್ರೂಪ್ ಕಂ., ಲಿಮಿಟೆಡ್ ಎಂಬ ಕಂಪನಿಯಿದೆ. ಕಂಪನಿಯು ಇತ್ತೀಚೆಗೆ ತನ್ನಲ್ಲಿ ಕೆಲಸ ಮಾಡುವವರಿಗೆ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ ಒಳಗೆ ಎಲ್ಲರೂ ಮದುವೆಯಾಗಬೇಕು ಎಂದು ಸ್ಪಷ್ಟಪಡಿಸಿದೆ. ಈ ನೋಟಿಸ್‌ 1,200 ಉದ್ಯೋಗಿಗಳಿಗೆ ತಲುಪಿಸೆ. ನೋಟಿಸ್ ಪಡೆದ ನೌಕರರು ಇದನ್ನು ನೋಡಿ ಶಾಕ್‌ ಆದರು. ಅವಧಿ ಮುಗಿಯುವ ಮೊದಲು ಮದುವೆಯಾಗದವರನ್ನು ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಕಂಪನಿಯು ತೆಗೆದುಕೊಂಡ ಈ ನಿರ್ಧಾರ ಕಾರ್ಪೊರೇಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ವಿಷಯ ಸರ್ಕಾರಿ ಅಧಿಕಾರಿಗಳನ್ನು ತಲುಪಿದಾಗ, ಅವರು ಕಂಪನಿಯಿಂದ ವಿವರಣೆಯನ್ನು ನೀಡಲು ಒತ್ತಾಯಿಸಿದರು. ಆದರೆ ಶಾಂಡೊಂಗ್ ಶುಂಟಿಯನ್ ಕಂಪನಿಯು ತನ್ನ ನೀತಿಯನ್ನು ಸಮರ್ಥಿಸಿಕೊಂಡಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ನೀಡಿದ ಉತ್ತರದಲ್ಲಿ ಒಂದು ಪ್ರಮುಖ ಅಂಶವನ್ನು ಬಹಿರಂಗಪಡಿಸಲಾಗಿದೆ. 'ಚೀನಾದಲ್ಲಿ ವಿವಾಹ ಪ್ರಮಾಣ ತೀವ್ರವಾಗಿ ಕುಸಿಯುತ್ತಿದೆ. ಮದುವೆ ದರವನ್ನು ಹೆಚ್ಚಿಸುವ ಸರ್ಕಾರದ ನೀತಿ ನಿರ್ಧಾರವನ್ನು ಬೆಂಬಲಿಸಲು ಕಂಪನಿಯಲ್ಲಿ ಈ ನಿಬಂಧನೆಯನ್ನು ಪರಿಚಯಿಸಿದ್ದೇವೆ" ಎಂದು ವಿವರಿಸಿದೆ. ಚೀನಾದಲ್ಲಿನ ನಿಯಮಗಳ ಪ್ರಕಾರ, ಇದು ಸಂವಿಧಾನಬಾಹಿರ ನಿರ್ಧಾರವಾಗಿದೆ. ಈ ವಿವಾದ ಇನ್ನೂ ಮುಂದುವರೆದಿದೆ. ಇದು ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ನಿಮ್ಮ ಖಾತೆಗೆ 2000 ರೂ.ಬಂದಿಲ್ಲವೇ.? ಇಲ್ಲಿ ದೂರು ನೀಡಿ, ನಿಮಗೆ ತಕ್ಷಣ ಹಣ ಸಿಗುತ್ತದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News