WATCH VIDEO: ವಿಮಾನ ಲ್ಯಾಂಡಿಂಗ್ ವೇಳೆ ಅಡ್ಡಬಂದ ಖಾಸಗಿ ಜೆಟ್: ಏರ್‌ಪೋರ್ಟ್‌ನಲ್ಲಿ ತಪ್ಪಿದ ಭಾರೀ ದುರಂತ!!

Chicago Midway Airport: ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಪೈಲಟ್‌ಗಳ ಸಮಯಪ್ರಜ್ಞೆಯಿಂದ ಭೀಕರ ಅಪಘಾತವೊಂದು ತಪ್ಪಿದ್ದು, ನೂರಾರು ಜೀವನ ಉಳಿದಂತಾಗಿದೆ. ​

Written by - Puttaraj K Alur | Last Updated : Feb 26, 2025, 01:38 PM IST
  • ಚಿಕಾಗೋ ಏರ್‌ಪೋರ್ಟ್‌ನಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ
  • ವಿಮಾನ ಲ್ಯಾಂಡಿಂಗ್ ವೇಳೆ ಖಾಸಗಿ ಜೆಟ್ ಒಂದು ಅಡ್ಡ ಬಂದಿದೆ
  • ಪೈಲಟ್‌ಗಳ ಸಮಯಪ್ರಜ್ಞೆಯಿಂದ ನೂರಾರು ಜನರ ಜೀವ ಉಳಿದಿದೆ
WATCH VIDEO: ವಿಮಾನ ಲ್ಯಾಂಡಿಂಗ್ ವೇಳೆ ಅಡ್ಡಬಂದ ಖಾಸಗಿ ಜೆಟ್: ಏರ್‌ಪೋರ್ಟ್‌ನಲ್ಲಿ ತಪ್ಪಿದ ಭಾರೀ ದುರಂತ!!  title=
ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ!

Viral Video: ಚಿಕಾಗೋ ಏರ್‌ಪೋರ್ಟ್‌ನಲ್ಲಿ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ವಿಮಾನ ಲ್ಯಾಂಡಿಂಗ್ ವೇಳೆ ಖಾಸಗಿ ಜೆಟ್ ಒಂದು ಅಡ್ಡ ಬಂದಿದೆ. ಈ ವೇಳೆ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.  

ಚಿಕಾಗೋ ಮಿಡ್‌ವೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Chicago Midway Airport)ದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಸೌತ್‌ವೆಸ್ಟ್ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಲ್ಯಾಂಡಿಂಗ್‌ ವೇಳೆ ಖಾಸಗಿ ಜೆಟ್‌ವೊಂದು ರನ್‌ವೇನಲ್ಲಿ ಬಂದಿದೆ. ಈ ವೇಳೆ ಪೈಲಟ್‌ಗಳು ವಿಮಾನವನ್ನ ರನ್‌ವೇ ಇಳಿಸಿ ಮತ್ತೆ ಮೇಲೆ ಹಾರಿಸಿದ್ದಾರೆ. ಇಲ್ಲಿದಿದ್ದರೆ ಜೆಟ್‌ಗೆ ವಿಮಾನ ಡಿಕ್ಕಿ ಹೊಡೆದು ದೊಡ್ಡ ಅನಾಹುತ ಸಂಭವಿಸುತ್ತಿತ್ತು. 

ಇದನ್ನೂ ಓದಿ: ʻಮದುವೆಯಾಗಿ.. ಇಲ್ಲವೇ ಕೆಲಸ ಬಿಡಿʼ : ಬ್ಯಾಚುಲರ್‌ಗಳಿಗೆ ಕಂಪನಿಯ ನೋಟಿಸ್ ವೈರಲ್!

ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಪೈಲಟ್‌ಗಳ ಸಮಯಪ್ರಜ್ಞೆಯಿಂದ ಭೀಕರ ಅಪಘಾತವೊಂದು ತಪ್ಪಿದ್ದು, ನೂರಾರು ಜೀವನ ಉಳಿದಂತಾಗಿದೆ. ಸದ್ಯ ವೈರಲ್‌ ಆಗಿರೋ ಈ ವಿಡಿಯೋದಲ್ಲಿ ಸೌತ್‌ವೆಸ್ಟ್ ಏರ್‌ಲೈನ್ಸ್‌ ವಿಮಾನವು ಲ್ಯಾಂಡಿಂಗ್‌ ಮಾಡಲು ವೇಗವಾಗಿ ರನ್‌ವೇನತ್ತ ಬರುತ್ತಿತ್ತು. ಈ ವೇಳೆ ಖಾಸಗಿ ಜೆಡ್‌ ಅಡ್ಡಬಂದಿದೆ. ಕೂಡಲೇ ಪೈಲಟ್‌ಗಳು ರನ್‌ವೇಗೆ ಇಳಿದ ತಕ್ಷಣವೇ ಮತ್ತೆ ವಿಮಾವನ್ನ ಟೇಕ್‌ಆಫ್‌ ಮಾಡುವ ಮೂಲಕ ಅಪಘಾತವನ್ನ ತಪ್ಪಿಸಿದ್ದಾರೆ. 

ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ನೀಡಿರುವ ಮಾಹಿತಿ ಪ್ರಕಾರ, ಖಾಸಗಿ ಜೆಟ್ ಅನುಮತಿಯಿಲ್ಲದೆ ರನ್‌ವೇಗೆ ಪ್ರವೇಶಿಸಿತ್ತು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ಇದನ್ನೂ ಓದಿ: ಕೋಳಿಯನ್ನು ಬಾಡಿಗೆಗೆ ಪಡೆದು ಸಾಕುತ್ತಿರುವ ಅಮೆರಿಕನ್ನರು!ಇದ್ದಕ್ಕಿದ್ದಂತೆ ಈ ಅನಿವಾರ್ಯತೆ ಎದುರಾದದ್ದು ಯಾಕೆ ಗೊತ್ತಾ ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News