Girl Hanging On Kite: ಗಾಳಿಪಟವನ್ನು ಹಾರಿಸುವುದು ಎಂದರೆ ಪುಟ್ಟ ಮಕ್ಕಳಿಗೆ ಅದೇನೋ ಖಷಿ, ಪಟಕ್ಕೆ ದಾರ ಕಟ್ಟಿ ಹಾರಿ ಬಿಡುವುದು ಎಂದರೆ ಅದೇನೋ ಸಂತೋಷ. ಆದರೆ, ಈ ಗಾಳಿ ಪಟವೇ ನಿಮ್ಮ ಮಕ್ಕಳ ಜೀವನಕ್ಕೆ ಮಾರಕವಾಗಬಹುದು ಉಷಾರ್..!
ಹೌದು, ಗಾಳಿಪಟದ ದಾರ ಕಟ್ ಆಗಿ ಹೋಗಿ ಎಲ್ಲಿಯೋ ಸಿಲುಕಿ, ದಾರಿಯಲ್ಲಿ ಗಾಡಿ ಸವಾರರ ಕತ್ತಿಗೆ ಸಿಲುಕಿ ಅವರು ಪ್ರಾಣ ಕಳೆದುಕೊಳ್ಳುವ ಅದೆಷ್ಟೋ ಉದಾಹರಣೆಗಳನ್ನು ನಾವು ನೋಡಿರುತ್ತೇವೆ. ಆದರೆ, ಇಲ್ಲೊಬ್ಬ ಯುವತಿ ಗಾಳಿಪಟ ಹಾರಿಸುತ್ತಿರುವಾಗಲೇ ಗಾಳಿಪಟದ ಜೊತೆಗೆನೇ ಹಾರಿ ಹೋಗಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ತೈವಾನ್‌ನಲ್ಲಿ ನಡೆದಿರುವ ಘಟನೆ ಇದಾಗಿದ್ದು, ಈ ವಿಡಿಯೋದಲ್ಲಿ ನೋಡಿದಂತೆ, ಪುಟ್ಟ ಬಾಲಕಿ ಒಬ್ಬಳು ತನ್ನ ಪೋಷಕರೊಂದಿಗೆ ಸಮುದ್ರದ ದಡದಲ್ಲಿ ಗಾಳಿಪಟವನ್ನು ಹಾರಿಸುತ್ತಿದ್ದಾಳೆ. ಕೇವಲ ಆ ಒಂದು ಪುಟ್ಟ ಬಾಲಕಿ ಅಷ್ಟೆ ಅಲ್ಲದೆ, ಆಕೆಯ ಜೊತೆ ಹಲವಾರು ಜನರು ಗಾಳಿಪಟವನ್ನು ಹಾರಿಸುತ್ತಿದ್ದಾರೆ. ಆದರೆ, ನೋಡ ನೋಡುತ್ತಿದ್ದಂತೆ ಬಾಲಕಿ ಗಾಳಿಪಟದ ಜೊತೆಗೆ ಗಾಳಿಯಲ್ಲಿ ಹಾರಿ ಹೋಗಿದ್ದಾಳೆ.
ಬಾಲಕಿ ಹ್ಸಿಂಚು ತೈವಾನ್ ನಗರದ ನಾನ್ಲಿಯಾವೊ ಪ್ರದೇಶದ ನಿವಾಸಿಯಾಗಿದ್ದು, ಈಕೆಗೆ ಇನ್ನೂ ಮೂರು ವರ್ಷ ವಯಸ್ಸು. ತನ್ನ ತಂದೆ ತಾಯಿಯ ಜೊತೆ ಸೇರಿ ಈ ಪುಟ ಬಾಲಕಿ ಗಾಳಿಪಟವನ್ನು ಹಾರಿಸಲು ಬಂದಿದ್ದಳು. ಗಾಳಿಪಟ ಹಾರಿಸುವ ವೇಳೆ ಜೋರಾಗಿ ಗಾಳಿ ಬೀಸಿತ್ತು, ವೇಗವಾಗಿ ಬೀಸಿದ ಕಾರಣದಿಂದ ಬಾಲಕಿ ಗಾಳಿಪಟದ ಜೊತೆ ಗಾಳಿಯಲ್ಲಿ ಹಾರಿ ಹೋಗಿದ್ದಳು.
ಇಲ್ಲಿ ಗಾಳಿಪಟ ಹಾರಿಸುವ ಸ್ಪರ್ಧೇಯನ್ನು ಆಯೋಜಿಸಲಾಗಿತ್ತಾದರೂ, ಕಾರ್ಯಕ್ರಮದ ಆಯೋಜಕರು ಅಲ್ಲಿ ಬಲವಾದ ಗಾಳಿ ಬೀಸುತ್ತೆ ಎಂಬುದನ್ನು ನಿರೀಕ್ಷಿಸಿರಲಿಲ್ಲ. ಒಂದೆ ಬಾರಿಗೆ 50ರಿಂದ 60 ಕಿ.ಮಿ ವೇಗದಲ್ಲಿ ಗಾಳಿ ಬೀಸಿದ್ದ ಕಾರಣ ಮಗು ಗಾಳಿಪಟದ ಜೊತೆಗೆ ಹಾರಿ ಹೋಗಿದ್ದಳು. ಇನ್ನೂ, ವೈರಲ್ ಆಗುತ್ತಿರುವ ಈ ವಿಡಿಯೋ 2020ರಲ್ಲಿ ಸೆರೆಹಿಡಿಯಲಾಗಿದ್ದು, 2023ರಲ್ಲಿ ವೈರಲ್ ಆಗಿತ್ತು. ಇದೀಗ ಮತ್ತೊಮ್ಮೆ ಈ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಇದೀಗ ಬೆಚ್ಚಿ ಬಿದ್ದಿದ್ದಾರೆ.
🪁 WATCH: A 3-year-old girl was swept more than 30 feet into the air after being entangled in a kite string during a festival in Taiwan on Sunday, prompting authorities to halt the event.
According to her parents the girls was not injured pic.twitter.com/8kKUWRhMij
— Bloomberg Originals (@bbgoriginals) August 30, 2020
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ