Google Top Trending Search: 2024ರಲ್ಲಿ ಜನ ಗೂಗಲ್‌ನಲ್ಲಿ ಹೆಚ್ಚಾಗಿ ಸರ್ಚ್ ಮಾಡಿದ್ದು ಏನನ್ನ ಗೊತ್ತಾ?

Google Top Trending Search: ಈ ತಂತ್ರಜ್ಞಾನ ಯುಗದಲ್ಲಿ ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕೆಂದರೂ ಗೂಗಲ್‌ನಲ್ಲಿ ಬೆರಳ ತುದಿಯಲ್ಲೇ ಕ್ಷಣಮಾತ್ರದಲ್ಲಿ ಉತ್ತರ ಸಿಗುತ್ತೆ. ಹಾಗಾಗಿಯೇ ಎಲ್ಲಾ ವಿಷಯಗಳಿಗೂ ಗೂಗಲ್ ಅನ್ನು ಗುರು ಇದ್ದಂತೆ. ಈ ವರ್ಷ ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಿದ್ದು ಏನನ್ನ ಗೊತ್ತಾ...! 

Written by - Yashaswini V | Last Updated : Dec 11, 2024, 09:13 AM IST
  • ಗೂಗಲ್ 2024ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಸರ್ಚ್ ಅಗಿದ್ದೇನು ಎಂಬ ಬಗ್ಗೆ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ.
  • ಗೂಗಲ್ ಬಿಡುಗಡೆ ಮಾಡಿರುವ ಈ ಲಿಸ್ಟ್ ನಲ್ಲಿ ಭಾರತೀಯರು 2024ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಿರುವ ವಿಷಯ ಆಶ್ಚರ್ಯವನ್ನು ಉಂಟು ಮಾಡಬಹುದು.
  • 2024ರಲ್ಲಿ ಗೂಗಲ್‌ನಲ್ಲಿ ಭಾರತೀಯರು ಸರ್ಚ್ ಮಾಡಿದ ಟಾಪ್ 10 ವಿಷಯಗಳ ಪಟ್ಟಿ ಇಲ್ಲಿದೆ.
Google Top Trending Search: 2024ರಲ್ಲಿ ಜನ ಗೂಗಲ್‌ನಲ್ಲಿ ಹೆಚ್ಚಾಗಿ ಸರ್ಚ್ ಮಾಡಿದ್ದು ಏನನ್ನ ಗೊತ್ತಾ?  title=

Google Top Trending Search: ಈ ತಂತ್ರಜ್ಞಾನ ಯುಗದಲ್ಲಿ ಯಾವುದನ್ನೂ ಗೊತ್ತಿಲ್ಲ ಎನ್ನುವ ಹಾಗೇ ಇಲ್ಲ. ಏಕೆಂದರೆ ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ಸಾಕು ಕ್ಷಣಾರ್ಧದಲ್ಲಿ ಅದರ ಸಂಪೂರ್ಣ ಮಾಹಿತಿಯೇ ಕಣ್ಣ ಮುಂದಿರುತ್ತದೆ. ಫಿಲ್ಮ್, ಕ್ರಿಕೆಟ್, ದೇಶ-ವಿದೇಶ, ವಿದ್ಯಾಭ್ಯಾಸ, ನೌಕರಿ, ತಂತ್ರಜ್ಞಾನ, ವ್ಯವಹಾರ ಸಂಬಂಧಿತ ಮಾಹಿತಿ ಹೀಗೆ ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕೆಂದರೆ ಗೂಗಲ್ ಗುರು ಇದ್ದಂತೆ. ಪ್ರಸ್ತುತ, ನಾವು 2024ರ ಕೊನೆಯ ತಿಂಗಳಿನಲ್ಲಿದ್ದೇವೆ. ಇಡೀ ವರ್ಷವನ್ನು ಮೆಲುಕು ಹಾಕುವಾಗ ಗೂಗಲ್‌ನಲ್ಲಿ ಹೆಚ್ಚಾಗಿ ಸರ್ಚ್ ಆದ ಮಾಹಿತಿ ಯಾವುದು ಎಂಬ ಕುತೂಹಲವೂ ಹುಟ್ಟಬಹುದು. 

ಗೂಗಲ್ 2024ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಸರ್ಚ್ ಅಗಿದ್ದೇನು ಎಂಬ ಬಗ್ಗೆ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಗೂಗಲ್ ಬಿಡುಗಡೆ ಮಾಡಿರುವ ಈ ಲಿಸ್ಟ್ ನಲ್ಲಿ 2024ರಲ್ಲಿ ಗೂಗಲ್‌ನಲ್ಲಿ ಭಾರತೀಯರು ಎಂಟರ್ಟೈನ್ಮೆಂಟ್, ಕ್ರಿಕೆಟ್, ಐ‌ಪಿ‌ಎಲ್, ಬಾಲಿವುಡ್ ಚಿತ್ರಗಳು, ಹಾಡುಗಳು, ಪ್ರಚಲಿತ ವಿದ್ಯಮಾನಗಳು ಹೀಗಿ ಹಲವು ರೀತಿಯ ವಿಷಯಗಳನ್ನು ಹುಡುಕಿದ್ದಾರೆ. 

ಇದನ್ನೂ ಓದಿ- Jio ಪರಿಚಯಿಸಿದೆ ಧಮಾಕ ಆಫರ್: ಈಗ ದಿನಕ್ಕೆ 2 ಅಲ್ಲ 3ಜಿ‌ಬಿ ಡೇಟಾ ಉಚಿತ..!

ಆಶ್ಚರ್ಯಕರವಾಗಿ, 2024ರಲ್ಲಿ ಗೂಗಲ್‌ನಲ್ಲಿ ಭಾರತೀಯರು ಸರ್ಚ್ ಮಾಡಿದ ಟಾಪ್ 10 ವಿಷಯಗಳಲ್ಲಿ 5 ವಿಷಯಗಳು ಕ್ರೀಡೆಗೆ ಸಂಬಂಧಿಸಿದ ವಿಷಯಗಳಾಗಿದ್ದರೆ, ಮೂರು ವಿಷಯಗಳು ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳಾಗಿವೆ. 

ಗೂಗಲ್‌ನಲ್ಲಿ ಭಾರತೀಯರು ಇಂಡಿಯನ್ ಪ್ರೀಮಿಯರ್ ಲೀಗ್ (ಐ‌ಪಿ‌ಎಲ್) ಬಗ್ಗೆ ಹೆಚ್ಚು ಸರ್ಚ್ ಮಾಡಿದ್ದಾರೆ. ಗೂಗಲ್ ಸರ್ಚ್ ನಲ್ಲಿ ಐ‌ಪಿ‌ಎಲ್ ಪ್ರಥಮ ಸ್ಥಾನದಲ್ಲಿದ್ದರೆ, ಎರಡನೇ ಟಾಪ್ ಸರ್ಚಿಂಗ್ ವಿಷಯವೂ ಕೂಡ ಕ್ರಿಕೆಟ್ ಗೆ ಸಂಬಂಧಿಸಿದ್ದೇ ಆಗಿದೆ. ಇದು ಕ್ರಿಕೆಟ್ ಬಗ್ಗೆ ಭಾರತೀಯರ ಒಲವು, ಉತ್ಸಾಹ ಎಷ್ಟಿದೆ ಎಂಬುದಕ್ಕೆ ಹಿಡಿದ ಕನ್ನಡಿಯಂತಿದೆ. 

ಇದನ್ನೂ ಓದಿ- ಬಿಎಸ್‌ಎನ್‌ಎಲ್‌ನ ಬೊಂಬಾಟ್ ಪ್ಲಾನ್: ಅಗ್ಗದ ರೀಚಾರ್ಜ್ ಯೋಜನೆಯಲ್ಲಿ 200 ದಿನಗಳವರೆಗೆ ಫ್ರೀ ಕಾಲ್

ಭಾರತದಲ್ಲಿ 2024ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ಟಾಪ್ 10 ವಿಷಯಗಳು ಈ ಕೆಳಕಂಡಂತಿವೆ: 
1. ಇಂಡಿಯನ್ ಪ್ರೀಮಿಯರ್ ಲೀಗ್ (ಐ‌ಪಿ‌ಎಲ್) 
2. ಟಿ-20 ವಿಶ್ವಕಪ್ 
3. ಭಾರತೀಯ ಜನತಾ ಪಕ್ಷ (ಬಿ‌ಜೆ‌ಪಿ) 
4. ಚುನಾವಣೆ ಫಲಿತಾಂಶ 2024
5. ಒಲಿಂಪಿಕ್ಸ್ 2024 
6. ತೀವ್ರ ಶಾಖ 
7. ರತನ್ ಟಾಟಾ 
8. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐ‌ಎನ್‌ಸಿ) 
9. ಪ್ರೊ ಕಬ್ಬಡ್ಡಿ ಲೀಗ್ 
10.  ಇಂಡಿಯನ್ ಸೂಪರ್ ಲೀಗ್ 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News