GPay: ತಂತ್ರಜ್ಞಾನ ಯುಗದಲ್ಲಿ ಆನ್ಲೈನ್ ವಹಿವಾಟು ಹೆಚ್ಚು ಜನಪ್ರಿಯವಾಗಿರುವುದರ ಜೊತೆಗೆ ನಗದು ವಹಿವಾಟನ್ನು ಕೂಡ ಕಡಿಮೆ ಮಾಡಿದೆ. ಅದರಲ್ಲೂ, ಡಿಜಿಟಲ್ ಪೇಮೆಂಟ್ ಆವಿಷ್ಕಾರದೊಂದಿಗೆ ದೈನಂದಿನ ವ್ಯವಹಾರ ತುಂಬಾ ಸುಲಭವಾಗಿದೆ. ಹೆಚ್ಚಿನ ಜನರು ಯುಪಿಐ ಬಳಸಿ GPay (ಗೂಗಲ್ ಪೇ), ಫೋನ್ ಪೇಗಳ ಮೂಲಕ ಹೆಚ್ಚಿನ ವಹಿವಾಟು ನಡೆಸುತ್ತಾರೆ. ನೀವು GPAY ಬಳಕೆದಾರರರಾಗಿದ್ದರೆ ಈ ಸುದ್ದಿ ನಿಮಗೆ ತುಂಬಾ ಮುಖ್ಯ.
ಕಳೆದ ಹಲವು ವರ್ಷಗಳಿಂದ ಅದರಲ್ಲೂ ಕರೋನಾವೈರಸ್ ಮಹಾಮಾರಿ ಆರಂಭವಾದಾಗಿನಿಂದ ಭಾರತದಲ್ಲಿ ಆನ್ಲೈನ್ ಪಾವತಿಗಳ ಮೂಲಕ ಹಣಕಾಸು ವ್ಯವಹಾರ ಹೆಚ್ಚಾಗಿದ್ದು ಇಲ್ಲಿಯವರೆಗೂ ಎಲ್ಲ ಯುಪಿಐ ಪಾವತಿಗಳು ಮತ್ತು ಹಣದ ಟ್ರಾನ್ಸಾಕ್ಷನ್ ಶುಲ್ಕರಹಿತವಾಗಿದ್ದವು. ಆದರೆ ಈಗ ಗೂಗಲ್ ಪೇ ಕೆಲವು ನಿಯಮಗಳಲ್ಲಿ ಬದಲಾವಣೆಗೆ ಮುಂದಾಗಿದ್ದು ಇನ್ಮುಂದೆ GPay ವಹಿವಾಟು ಸಂಪೂರ್ಣವಾಗಿ ಉಚಿತವಾಗಿರುವುದಿಲ್ಲ. ಗೂಗಲ್ ಪೇ ಮೂಲಕ ನಡೆಸುವ ಕೆಲವು ವಹಿವಾಟುಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ವರದಿಯಾಗಿದೆ. ಹಾಗಿದ್ದರೆ, ಯಾವ ರೀತಿಯ ವಹಿವಾತುಗಳಿಗೆ GPay ಶುಲ್ಕ ವಿಧಿಸುತ್ತದೆ ಎಂದು ನೋಡುವುದಾದರೆ...
ಇದನ್ನೂ ಓದಿ- Jio ಧಮಾಕಾ ಆಫರ್: ಈ ರಿಚಾರ್ಜ್ ಯೋಜನೆಗಳಲ್ಲಿ ನಿತ್ಯ 3GB ಡೇಟಾ, ಫ್ರೀ ನೆಟ್ಫ್ಲಿಕ್ಸ್ ಎಲ್ಲವೂ ಲಭ್ಯ
ಪ್ರಸ್ತುತ, ಡಿಜಿಟಲೀಕರಣದಿಂದಾಗಿ ಬಹುತೇಕ ಜನರು ದೈನಂದಿನ ಹಣದ ವಹಿವಾಟಿಗಾಗಿ ಯುಪಿಐ ಪಾವತಿಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಸಣ್ಣ ಪುಟ್ಟ ಪೆಟ್ಟಿಗೆ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಮಾಲ್ ಗಳವರೆಗೂ ಎಲ್ಲೆಡೆ ಆನ್ಲೈನ್ ಪಾವತಿ ಹೆಚ್ಚಾಗಿದೆ. ಇಡೀ ಪ್ರಪಂಚದಲ್ಲೇ ಡಿಜಿಟಲ್ ವಹಿವಾಟು ನಡೆಸುವುದರಲ್ಲಿ ಭಾರತ ದೇಶ ಮುಂಚೂಣಿಯಲ್ಲಿದೆ. ಡಿಜಿಟಲ್ ಆ್ಯಪ್ ಗಳ ಮೂಲಕ ಹಣದ ವಹಿವಾಟು ನಡೆಯುತ್ತಿದ್ದು ಇದರಲ್ಲಿ ಗೂಗಲ್ ಪೇ ಅತೀ ಹೆಚ್ಚು ಬಳಕೆಯಲ್ಲಿದೆ. ಇಲ್ಲಿಯವರೆಗೂ ಗೂಗಲ್ ಪೇಯಿಂದ ಯಾವುದೇ ಯುಪಿಐ ಮೂಲಕ ಹಣ ವಹಿವಾಟು ಮತ್ತು ಟ್ರಾನ್ಸಾಕ್ಷನ್ ಎಷ್ಟು ಬಾರಿ ಮಾಡಿದರು ಸಂಪೂರ್ಣ ಉಚಿತವಾಗಿತ್ತು. ಆದರೆ ಇನ್ನು ಮುಂದೆ ಗೂಗಲ್ ಪೇ ಬಳಕೆದಾರರು ಕೆಲವು ಪಾವತಿಗಳಿಗೆ ಶುಲ್ಕ ಭರಿಸಬೇಕಾಗುತ್ತದೆ.
ಯಾವ ಗೂಗಲ್ ಪೇ ವಹಿವಾಟುಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆ?
ದಿನನಿತ್ಯದ ಮಾಮೂಲಿ ವ್ಯವಹಾರಗಳಿಗೆ ಅಂದರೆ ನೀವು ಗ್ಯಾಸ್ ಬುಕಿಂಗ್, ವಿದ್ಯುತ್ ಬಿಲ್ ಪಾವತಿಗಳಿಗೆ ಗೂಗಲ್ ಪೇ ಮಾಡಿದರೆ ಟ್ರಾನ್ಸಾಕ್ಷನ್ ಶುಲ್ಕ ರೂಪದಲ್ಲಿ ಹಣ ಕಟ್ ಆಗುತ್ತದೆ. ಇದರೊಂದಿಗೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಪೇಮೆಂಟ್ಗಳಿಗೆ ಶೇಕಡಾ 0.5 ರಿಂದ ಶೇಕಡಾ 1 ರಷ್ಟು ಜಿಎಸ್ಟಿ ರೂಪದಲ್ಲಿ ಶುಲ್ಕ ನೀಡಬೇಕು. ಇನ್ನು ಎಲೆಕ್ಟ್ರಿಕ್ ಬಿಲ್ನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವವರಿಗೆ 15 ರೂಪಾಯಿ ಕನ್ವಿನ್ಸಿಂಗ್ ಫೀ ಕೂಡ ಇದೆ. ಇದರಿಂದ ಗೂಗಲ್ಪೇ ಪಾವತಿ ಅಥವಾ ಟ್ರಾನ್ಸಾಕ್ಷನ್ಗೂ ಮುನ್ನ ಶುಲ್ಕದ ಬಗ್ಗೆ ಗಮನವಹಿಸಿ.
ಸುರಕ್ಷತಾ ಕ್ರಮ:
ಈ ರೀತಿ ಶುಲ್ಕ ಭರಿಸುವುದರೊಂದಿಗೆ ಗೂಗಲ್ ಪೇ ಟ್ರಾನ್ಸಾಕ್ಷನ್ಗಳಿಗೆ ಎಚ್ಚರಿಕೆ ಸಂದೇಶ ನೀಡುವ ಮೂಲಕ ಸುರಕ್ಷತಾ ಕ್ರಮವನ್ನು ಮುಂಚಿತವಾಗಿ ನೀಡುತ್ತದೆ. ಒಂದು ವೇಳೆ ನೀವು ಮಾಡುತ್ತಿರುವ ಪಾವತಿಯು ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದ್ದರೆ ಗೂಗಲ್ ಪೇ ನಿಮಗೆ ಮೊದಲೇ ಸೂಚನೆ ಕೊಡುವುದರ ಮೂಲಕ ಎಚ್ಚರಿಕೆ ನೀಡುತ್ತದೆ. ಈ ಹೊಸ ಬದಲಾವಣೆಯಿಂದ ಅಪಾಯಕಾರಿ ವಹಿವಾಟುಗಳನ್ನು ನಿರ್ಬಂಧಿಸುವ ಮೂಲಕ ಗೂಗಲ್ ಪೇ ನಾಲ್ಕು ಕೋಟಿ ಎಚ್ಚರಿಕೆ ಸಂದೇಶಗಳನ್ನ ನೀಡಿದೆ. ಇದರ ಪರಿಣಾಮ ಸುಮಾರು 13,000 ಕೋಟಿ ಹಣವನ್ನು ಗೂಗಲ್ ಪೇ ಸಹಾಯದೊಂದಿಗೆ ವಂಚನೆಯಗುವುದನ್ನು ತಪ್ಪಿಸಿದೆ ಎಂದು ವರದಿಯಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.