ವಿಶ್ವದಲ್ಲೇ ಅತ್ಯಂತ ಬಲಿಷ್ಠ ಕ್ರಿಕೆಟ್‌ ತಂಡ ಪಾಕಿಸ್ತಾನ..! ಹೇ.. ಯಾರೂ ನಗ್ಬೇಡಿ.. ಇಲ್ಲಿ ನೋಡಿ.

PAK vs Bangla live score : ತವರು ನೆಲದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನ ಪಾತ್ರವಾಗಿದೆ. ಪಾಕಿಸ್ತಾನದ ಪ್ರದರ್ಶನ ಬಹಳ ಹೀನಾಯವಾಗಿತ್ತು. ಮೊದಲ ಪಂದ್ಯದಲ್ಲಿ ಅವರು ನ್ಯೂಜಿಲೆಂಡ್ ವಿರುದ್ಧ ಸೋತರು. ಎರಡನೆಯದರಲ್ಲಿ ಭಾರತಕ್ಕೆ ಶರಣಾದರು... 

Written by - Krishna N K | Last Updated : Feb 27, 2025, 08:28 PM IST
    • ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಮೊದಲ ತಂಡ ಪಾಕ್‌
    • ಮೊದಲ ಪಂದ್ಯದಲ್ಲಿ ಅವರು ನ್ಯೂಜಿಲೆಂಡ್ ವಿರುದ್ಧ ಸೋತರು. ಎರಡನೆಯದರಲ್ಲಿ ಭಾರತಕ್ಕೆ ಶರಣಾದರು...
    • ಅಂತಿಮವಾಗಿ ಬಾಂಗ್ಲಾದೇಶ ವಿರುದ್ದದ ಪಾಕ್‌ ಪಂದ್ಯ ಮಳೆಯಿಂದ ರದ್ದಾಗಿದೆ..
ವಿಶ್ವದಲ್ಲೇ ಅತ್ಯಂತ ಬಲಿಷ್ಠ ಕ್ರಿಕೆಟ್‌ ತಂಡ ಪಾಕಿಸ್ತಾನ..! ಹೇ.. ಯಾರೂ ನಗ್ಬೇಡಿ.. ಇಲ್ಲಿ ನೋಡಿ. title=

ICC Champions Trophy 2025 : ಅಂತಿಮವಾಗಿ ಬಾಂಗ್ಲಾದೇಶ ವಿರುದ್ದದ ಪಾಕ್‌ ಪಂದ್ಯ ಮಳೆಯಿಂದ ರದ್ದಾಗಿದೆ.. ಈ ಪಂದ್ಯ ಟೂರ್ನಿಯಿಂದ ಹೊರಬಿದ್ದಿರುವ ಎರಡೂ ತಂಡಗಳಿಗೆ ಎದುರಾಗಿರುವ ಮುಜುಗರವನ್ನು ಮುಚ್ಚಿಕೊಳ್ಳಲು ಒಂದು ಅವಕಾಶವಾಗಿತ್ತು. ಈ ಘಟನೆಯ ಹೊರತಾಗಿಯೂ, ಪಾಕಿಸ್ತಾನದ ಪಠ್ಯಪುಸ್ತಕ ಒಂದರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದೆಂದು ವಿವರಿಸಲಾಗಿದೆ. 

ಪಾಕಿಸ್ತಾನದ ಯುವಕನೊಬ್ಬ 12ನೇ ತರಗತಿಯ ಪಠ್ಯಪುಸ್ತಕದಲ್ಲಿ ಬರೆದಿರುವ ಮಾಹಿತಿ ಅಂತ ವಿಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಪಾಕಿಸ್ತಾನ ಎದುರಿಸಿದ ಸತತ ಸೋಲುಗಳ ನಂತರ ಈ ಪಠ್ಯಪುಸ್ತಕವೂ ವೈರಲ್ ಆಗಿದೆ.. ಅಲ್ಲದೆ, ನಗೆಪಾಟಲಿಗೀಡಾಗಿದೆ.

ಇದನ್ನೂ ಓದಿ:IPL ನಿಂದಲೂ MSD ನಿವೃತ್ತಿ..! ಪಂದ್ಯ ಪ್ರಾರಂಭಕ್ಕೂ ಮುನ್ನವೇ ಧೋನಿ ಸಂದೇಶ...

ವೀಡಿಯೊದಲ್ಲಿ ತೋರಿಸಿರುವ ಪುಸ್ತಕದಲ್ಲಿ ಮಂಡಳಿಯ ರಚನೆಯ ಬಗ್ಗೆ ಮಾಹಿತಿಯ ಜೊತೆಗೆ, ಪಾಕಿಸ್ತಾನ ಕ್ರಿಕೆಟ್ ತಂಡವು ಪ್ರಸ್ತುತ ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದನ್ನು ನೋಡಿ ಹಲವರು ಕಾಮೆಂಟ್ ಮಾಡುತ್ತಿದ್ದಾರೆ, ಅಣಕಿಸುತ್ತಿದ್ದಾರೆ ಮತ್ತು ಟೀಕಿಸುತ್ತಿದ್ದಾರೆ.  

ಪಾಕಿಸ್ತಾನ ತಂಡವು ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳಿಂದ ಸೋತಿತ್ತು. ಭಾರತದ ವಿರುದ್ಧ 6 ವಿಕೆಟ್‌ಗಳಿಂದ ಸೋಲು ಅನುಭವಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ಆಲೌಟ್ ಆಯಿತು. ಭಾರತ 42.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 244 ರನ್‌ಗಳಿಗೆ ಆಲೌಟ್ ಆಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News