ಬಿಗ್‌ ಬಾಸ್‌ನಲ್ಲಿ ಮಧ್ಯರಾತ್ರಿ ಎಲಿಮಿನೇಷನ್‌!? ದೊಡ್ಮನೆ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದು ಹೊರನಡೆದ ಟಾಪ್‌ ಕಂಟೆಸ್ಟೆಂಟ್‌.. ನಡೆದೇಬಿಡ್ತು ಯಾರೂ ಊಹಿಸಿರದ ಘಟನೆ

Bigg Boss Midnight Eviction: ಬಿಗ್ ಬಾಸ್ ಅಂದ್ರೇನೇ ಟಿಸ್ಟ್‌. ಇಲ್ಲಿ ಪ್ರತಿ ಘಳಿಗೆಯೂ ಏನು ನಡೆಯುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇದೀಗ ತೆಲುಗು ಸೀಸನ್ 8 ರಲ್ಲೂ ಅದೇ ರೀತಿ ನಡೆದಿದೆ. ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರು ಬಿಗ್ ಬಾಸ್ ಮನೆಯಿಂದ ಬೇಗನೆ ಹೊರಬರಲಿದ್ದಾರೆ ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /6

ಬಿಗ್ ಬಾಸ್ ಅಂದ್ರೇನೇ ಟಿಸ್ಟ್‌. ಇಲ್ಲಿ ಪ್ರತಿ ಘಳಿಗೆಯೂ ಏನು ನಡೆಯುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇದೀಗ ತೆಲುಗು ಸೀಸನ್ 8 ರಲ್ಲೂ ಅದೇ ರೀತಿ ನಡೆದಿದೆ. ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರು ಬಿಗ್ ಬಾಸ್ ಮನೆಯಿಂದ ಬೇಗನೆ ಹೊರಬರಲಿದ್ದಾರೆ ಎಂದು ವರದಿಯಾಗಿದೆ.

2 /6

ಇದು ಫಿನಾಲೆ ವೀಕ್‌. ಈ ಕಾರಣದಿಂದ ಹೆಚ್ಚಿನ ಟಾಸ್ಕ್‌ಗಳೇನು ಇರೋದಿಲ್ಲ. ಆದರೆ ಟ್ವಿಸ್ಟ್‌ ನೀಡಿ ಮನರಂಜನೆ ನೀಡಲು ಬಿಗ್‌ ಬಾಸ್‌ ಪ್ಲಾನ್‌ ಮಾಡಿದ್ದಾರೆ ಎನ್ನಲಾಗಿದೆ. ಟಾಪ್‌ 5ರಲ್ಲಿ ಮೊದಲ ಫೈನಲಿಸ್ಟ್ ಆಗಿರುವ ಅವಿನಾಶ್ ಎಲ್ಲರಿಗಿಂತ ಮೊದಲು ಹೊರಬರುತ್ತಿದ್ದಾರೆ ಎಂದು ವರದಿಯಾಗಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?  

3 /6

ಪ್ರತಿ ಸೀಸನ್‌ನಲ್ಲೂ ಬಿಗ್ ಬಾಸ್ ಟಾಪ್ 5 ಸ್ಪರ್ಧಿಗಳಿಗೆ ಆಫರ್ ನೀಡುತ್ತದೆ. 10 ಅಥವಾ 20 ಅಥವಾ 30 ಲಕ್ಷ ಸೂಟ್ಕೇಸ್ ನೀಡಿ, ಸ್ಪರ್ಧೆಯಿಂದ ಹಿಂದೆ ಸರಿಯಲು ಒಂದು ಅವಕಾಶ ನೀಡುತ್ತದೆ. ಈ ಬಾರಿಯೂ ಅದೇ ನಡೆದಿರುವುದು. ಬಿಗ್ ಬಾಸ್ ತೆಲುಗು ಸೀಸನ್ 8 ರ ಟಾಪ್ 5 ಸ್ಪರ್ಧಿಗಳಲ್ಲಿ ಮೊದಲ ಫೈನಲಿಸ್ಟ್ ಅವಿನಾಶ್ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ.  

4 /6

ಮೆಗಾ ಫಿನಾಲೆಯ ಹಿಂದಿನ ದಿನವಾದ ಡಿಸೆಂಬರ್ 14 ರ ಶನಿವಾರದಂದು ಬಿಗ್ ಬಾಸ್ ಮನೆಯಲ್ಲಿ ನಿರ್ಣಾಯಕ ಟ್ವಿಸ್ಟ್ ಕಾಣಿಸಲಿದೆಯಂತೆ. ಎಂದಿನಂತೆ ಈ ಬಾರಿಯೂ ಬಿಗ್ ಬಾಸ್ ಅವಿನಾಶ್ ಗೆ 10 ಲಕ್ಷ ಮೌಲ್ಯದ ಸೂಟ್ ಕೇಸ್ ನೀಡಲಿದ್ದಾರೆ. 10 ಲಕ್ಷ ಸೂಟ್ಕೇಸ್ ಮತ್ತು 15 ವಾರಗಳ ಸಂಭಾವನೆಯೊಂದಿಗೆ ಹೊರಬರುವ ಅವಕಾಶವನ್ನು ನೀಡಲಿದ್ದಾರೆ ಬಿಗ್‌ ಬಾಸ್‌. ಇದೀಗ ಅವಿನಾಶ್ ಈ ಆಫರ್ ಸ್ವೀಕರಿಸುತ್ತಾರೋ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.  

5 /6

ಹಾಸ್ಯ ಹೊರತಾಗಿ ಬಿಗ್‌ ಬಾಸ್‌ ಗೆಲ್ಲುವಷ್ಟು ಪ್ರಬಲ ಕಂಟೆಸ್ಟೆಂಟ್‌ ಅವಿನಾಶ್‌ ಅಲ್ಲ ಎಂಬುದು ಜನರ ಮಾತು. ಇನ್ನು ಈ ವಿಚಾರ ಅವಿನಾಶ್‌ಗೆ ಅರಿವಿದ್ದು, 10 ಲಕ್ಷ ಸೂಟ್ ಕೇಸ್ ಆಫರ್ ತೆಗೆದುಕೊಂಡು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎಂದೂ ಸಹ ಕೆಲವೊಂದು ಮೂಲಗಳು ಹೇಳುತ್ತಿವೆ. ಈ ಸಂಚಿಕೆ ಶನಿವಾರ ಅಂದರೆ ಡಿಸೆಂಬರ್ 14 ರಂದು ಪ್ರಸಾರವಾಗಬಹುದು.  

6 /6

ಇನ್ನೊಂದೆಡೆ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಕೆಲವು ಕ್ರೇಜಿ ಶೋಗಳ ನಿರ್ವಹಣೆಯನ್ನು ಅವಿನಾಶ್ ಅವರಿಗೆ ವಹಿಸಲಾಗಿದೆಯಂತೆ. ಇವರ ಹೊರತಾಗಿ ಉಳಿದ ಟಾಪ್ 4 ಸ್ಪರ್ಧಿಗಳೊಂದಿಗೆ ಮೆಗಾ ಫಿನಾಲೆ ನಡೆಯಬಹುದು. ಗೌತಮ್ ವರ್ಸಸ್ ನಿಖಿಲ್ ಈಗಾಗಲೇ ಓಟಿಂಗ್‌ನಲ್ಲಿ ಪೈಪೋಟಿ ನಡೆಸುತ್ತಿರುವಂತಿದೆ. ಮೂರನೇ ಸ್ಥಾನದಲ್ಲಿ ನಬಿಲ್ ಹಾಗೂ ನಾಲ್ಕನೇ ಸ್ಥಾನದಲ್ಲಿ ಪ್ರೇರಣಾ ಇದ್ದಾರೆ ಎಂದು ವರದಿಯಾಗಿದೆ. ಹಾಗಾಗಿಯೇ ಅವಿನಾಶ್ ಆಫರ್ ಒಪ್ಪಿಕೊಂಡು ಹೊರ ಬಂದಿರುವುದು ಸರಿಯಾದ ನಿರ್ಧಾರ ಎಂಬುದು ಹಲವರ ಅಭಿಪ್ರಾಯ.