First condom ad in india : ತೊಂಬತ್ತರ ದಶಕದಲ್ಲಿ ನಟಿಯೊಬ್ಬರು ಕಾಮ ಸೂತ್ರ ಕಾಂಡೋಮ್‌ಗಳ ಮೊದಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಭಾರತದಲ್ಲಿ ನಿರೋಧಗಳ ಬಗೆಗಿನ ಮನಸ್ಥಿತಿಯನ್ನು ಬದಲಾಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಆ ಸಮಯದಲ್ಲಿ, ಕಾಂಡೋಮ್‌ಗಳ ಜಾಹೀರಾತು ಹೆಚ್ಚು ವಿವಾದಾತ್ಮಕವೆಂದು ಪರಿಗಣಿಸಲ್ಪಟ್ಟಿತ್ತು. ಆದರೂ, ಈ ನಟಿ ಈ ಜಾಹೀರಾತನ್ನು ಮಾಡಿ, ಕಾಂಡೋಮ್ ಮಾರಾಟ ಗಮನಾರ್ಹವಾದ ಹೆಚ್ಚಳಕ್ಕೆ ಕಾರಣವಾದರು..
ಕಾಂಡೋಮ್ ಜಾಹೀರಾತುಗಳನ್ನು ದೂರದರ್ಶನದಲ್ಲಿ ವ್ಯಾಪಕವಾಗಿ ತೋರಿಸಲಾಗುತ್ತಿದೆ. ಇಂದಿನ ಜನರು ಈ ಜಾಹೀರಾತುಗಳನ್ನು ಇತರ ಜಾಹೀರಾತುಗಳಂತೆಯೇ ನೋಡುತ್ತಾರೆ. ಅಲ್ಲದೆ, ಜನರ ಆಲೋಚನೆ ಸಹ ಸುಧಾರಿಸಿದೆ.
ಆದರೆ ಮೊದಲು ಹಾಗೆ ಇರಲಿಲ್ಲ. ಜನರು ಕಾಂಡೋಮ್ ಎಂಬ ಪದವನ್ನು ಹೇಳಲು ಸಹ ಮುಜುಗರಪಡುತ್ತಿದ್ದರು. ಕಾಂಡೋಮ್‌ಗಳು ಬಹಳ ಹಿಂದಿನಿಂದಲೂ ಇವೆ, ಆದರೆ ಆಗ ಅವುಗಳನ್ನು ವ್ಯಾಪಕವಾಗಿ ಖರೀದಿಸುತ್ತಿರಲಿಲ್ಲ. ಆದರೆ ಒಬ್ಬ ನಟಿ ಅದನ್ನೆಲ್ಲಾ ಬದಲಾಯಿಸಿ ಬಿಟ್ಟಳು..
ಲೈಂಗಿಕವಾಗಿ ಹರಡುವ ರೋಗಗಳಂತಹ ರೋಗಗಳನ್ನು ತಡೆಗಟ್ಟಲು ಮತ್ತು ಗರ್ಭದಾರಣೆ ನಿಯಂತ್ರಣಕ್ಕೆ ಕಾಂಡೋಮ್‌ಗಳು ಇಂದು ಸುಲಭವಾಗಿ ಲಭ್ಯವಿವೆ.. ಆದರೆ ಈ ಹಿಂದೆ ಹಾಗಿರಲಿಲ್ಲ. ಭಾರತದಲ್ಲಿ ಮೊದಲ ಬಾರಿಗೆ ಯಾರಾದರೂ ಕಾಂಡೋಮ್‌ಗಳನ್ನು ಪರಿಚಯಿಸಿದ್ದರೆ, ಅದು ಒಬ್ಬ ನಟಿಯ ಜಾಹೀರಾತಿನಿಂದಾಗಿ.
ಹೌದು, ಈ ನಟಿ ಕಾಂಡೋಮ್‌ಗಳ ಜಾಹೀರಾತು ನೀಡಿದ ಮೊದಲಿಗರು. ಆ ಜಾಹೀರಾತನ್ನು ನೋಡಿದ ನಂತರ ದೇಶದಲ್ಲಿ ಕಾಂಡೋಮ್ ಮಾರಾಟವು ವೇಗವಾಗಿ ಹೆಚ್ಚಾಯಿತು. ಈ ನಟಿಯ ಜಾಹೀರಾತು ಕಾಂಡೋಮ್‌ಗಳ ಬಗ್ಗೆ ಜನರ ಮನಸ್ಥಿತಿಯಲ್ಲಿ ಪ್ರಮುಖ ಬದಲಾವಣೆಯನ್ನು ತಂದಿತು.
ಈ ಜಾಹೀರಾತಿನಲ್ಲಿ ನಟಿಸಿದ ಮೊದಲ ನಟಿ ಪೂಜಾ ಬೇಡಿ.. ಪೂಜಾ ಕಬೀರ್ ಬೇಡಿ ಮತ್ತು ಪ್ರಸಿದ್ಧ ನರ್ತಕಿ ಮತ್ತು ರೂಪದರ್ಶಿ ಪ್ರೊತಿಮಾ ಅವರ ಪುತ್ರಿ. ಅವರು ತಮ್ಮ ಸಿನಿಮಾ ವೃತ್ತಿಜೀವನಕ್ಕಿಂತ ವೈಯಕ್ತಿಕ ಕಾರಣಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದರು.
ಪೂಜಾ ಬೇಡಿ 47 ನೇ ವಯಸ್ಸಿನಲ್ಲಿ ವಿವಾಹವಾದರು. 2003 ರಲ್ಲಿ, ಪೂಜಾ ತನ್ನ ಮೊದಲ ಪತಿ ಫರ್ಹಾನ್ ಫರ್ನಿಚರ್‌ವಾಲಾ ಅವರಿಂದ ವಿಚ್ಛೇದನ ಪಡೆದು ಬೇರ್ಪಟ್ಟರು. 'ಜೋ ಜೀತಾ ವಹಾನಿ ಸಿಕಂದರ್' ಚಿತ್ರ ಪೂಜಾಳಿಗೆ ಕ್ರೇಜ್ ತಂದು ಕೊಟ್ಟಿತು..
ಪೂಜಾ ಅವರ ಕಾಮಸೂತ್ರ ಜಾಹೀರಾತು ಬಹಳ ವಿವಾದಾತ್ಮಕವಾಗಿತ್ತು. ಮಾಡೆಲ್ ಮಾರ್ಕ್ ರಾಬಿನ್ಸನ್ ಕಾಮ ಸೂತ್ರ ಕಾಂಡೋಮ್‌ಗಳ ಜಾಹೀರಾತಿನಲ್ಲಿ ಅವರೊಂದಿಗೆ ಕಾಣಿಸಿಕೊಂಡರು. ದೂರದರ್ಶನದಲ್ಲಿ ಈ ಜಾಹೀರಾತನ್ನು ನಿಷೇಧಿಸಲಾಯಿತು. ಅಲ್ಲದೆ, ಹಲವು ವಾಹಿನಿಗಳು ಸಹ ಈ ಜಾಹೀರಾತನ್ನು ಪ್ರಸಾರ ಮಾಡಲು ನಿರಾಕರಿಸಿದವು.
ಆ ಸಮಯದಲ್ಲಿ ಪೂಜಾ ಅವರನ್ನು ತೀವ್ರವಾಗಿ ಟೀಕಿಸಲಾಯಿತು. ಇಂತಹ ಜಾಹೀರಾತು ಮಾಡಲು ಸಿದ್ಧರಿಲ್ಲದ ಸಮಯದಲ್ಲಿ, ಪೂಜಾ ಈ ಜಾಹೀರಾತು ಮಾಡಲು ಧೈರ್ಯ ಮಾಡಿದರು. 90 ರ ದಶಕದ ಆರಂಭದಲ್ಲಿ ಕಾಂಡೋಮ್‌ಗಳನ್ನು ಬೇರೆ ಬೇರೆ ರೀತಿಯಲ್ಲಿ ಮಾರಾಟ ಮಾಡಲಾಗುತ್ತಿರಲಿಲ್ಲ, ಸರ್ಕಾರಿ ಬ್ರ್ಯಾಂಡ್ 'ನಿರೋಧ್' ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಿತ್ತು.
ಪ್ರಸಿದ್ಧ ಜಾಹೀರಾತು ತಜ್ಞ ಅಲಿಕ್ ಪದಮ್ಸೀ ನೇತೃತ್ವದಲ್ಲಿ ಮೊದಲ ಕಾಂಡೋಮ್ ಜಾಹೀರಾತನ್ನು ರಚಿಸಲಾಯಿತು. ಈ ಜಾಹೀರಾತು 'ಕಾಮಸೂತ್ರ' ಕಾಂಡೋಮ್‌ಗಳಿಗಾಗಿತ್ತು, ಇದರಲ್ಲಿ ಮೊದಲ ಬಾರಿಗೆ ಕಾಂಡೋಮ್‌ಗಳನ್ನು ಕುಟುಂಬ ಯೋಜನೆಗಾಗಿ ಮಾತ್ರವಲ್ಲದೆ, ಆನಂದದ ದೃಷ್ಟಿಕೋನದಿಂದಲೂ ಪ್ರಸ್ತುತಪಡಿಸಲಾಯಿತು.
ರೇಮಂಡ್ ಕಂಪನಿಯ ಗೌತಮ್ ಸಿಂಘಾನಿಯಾ ಕೊರಿಯನ್ ಕಂಪನಿಯ ಸಹಯೋಗದೊಂದಿಗೆ 'ಕಾಮಸೂತ್ರ' ಕಾಂಡೋಮ್‌ಗಳನ್ನು ಅಭಿವೃದ್ಧಿಪಡಿಸಿದ್ದರು. ಅಲಿಕ್ ಪದಮ್ಸೀ ಪ್ರಕಾರ, ಆ ಸಮಯದಲ್ಲಿ ಪುರುಷರು ಕಾಂಡೋಮ್‌ಗಳನ್ನು ಗರ್ಭನಿರೋಧಕ ಸಾಧನವಾಗಿ ಮಾತ್ರ ನೋಡುತ್ತಿದ್ದರು, ಆದ್ದರಿಂದ ಅವುಗಳನ್ನು ಬಳಸುವುದನ್ನು ತಪ್ಪಿಸುವ ಪ್ರವೃತ್ತಿ ಇತ್ತು.
ಈ ಹೊಸ ವಿಧಾನವು ಕಾಂಡೋಮ್‌ಗಳನ್ನು ಸುರಕ್ಷತೆಗಾಗಿ ಬಳಸುವ ಉತ್ಪನ್ನಕ್ಕಿಂತ ಹೆಚ್ಚಾಗಿ ಜೀವನಶೈಲಿಯ ಒಂದು ಭಾಗವನ್ನಾಗಿ ಮಾಡಿತು ಮತ್ತು ಈ ಜಾಹೀರಾತಿನ ನಂತರ, ಕಾಂಡೋಮ್ ಮಾರಾಟದಲ್ಲಿ ಭಾರಿ ಏರಿಕೆ ಕಂಡುಬಂದಿತು ಮತ್ತು ಜನರು ಅವುಗಳನ್ನು ಹೆಚ್ಚು ಸ್ವೀಕರಿಸಲು ಪ್ರಾರಂಭಿಸಿದರು.