MS Dhoni IPL retirement : ಚೆನ್ನೈ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರಸ್ತುತ IPL 2025 ನಂತರ ನಿವೃತ್ತಿ ಹೊಂದಲಿದ್ದಾರೆ ಎಂಬ ವದಂತಿ ವ್ಯಾಪಕವಾಗಿ ಹರಡುತ್ತಿದೆ. ಇದರ ಬೆನ್ನಲ್ಲೆ ಮಾಹಿ ತೊಟ್ಟಿದ್ದ ಶರ್ಟ್ ಮೇಲಿದ್ದ ಸಂದೇಶ ಇದು ನಿಜ ಎನ್ನುವಂತಿದೆ.. ಪ್ರಸ್ತುತ ಧೋನಿ ಧರಿಸಿರುವ ಟಿ-ಶರ್ಟ್ ವೈರಲ್ ಆಗಿದೆ. ಅಷ್ಟಕ್ಕೂ ಆ ಟಿಶರ್ಟ್ ಮೇಲೆ ಇದ್ದ ಬರಹವೇನು..? ಬನ್ನಿ ನೋಡೋಣ..
43 ವರ್ಷದ ಧೋನಿ ಚೆನ್ನೈ ತಂಡದ ನಾಯಕರಾಗಿ ಅದ್ಭುತ ಆಟವಾಡಿದರು.. ಟೀಂ 5 ಬಾರಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಐಪಿಎಲ್ ಹರಾಜಿನಲ್ಲಿ ಧೋನಿ ನೇರವಾಗಿ ಭಾಗಿಯಾಗಿಲ್ಲದಿದ್ದರೂ, ತಂಡಕ್ಕೆ ಅಗತ್ಯವಿರುವ ಸರಿಯಾದ ಆಟಗಾರರ ಬಗ್ಗೆ ಪರೋಕ್ಷವಾಗಿ ಸಲಹೆ ನೀಡುತ್ತಿದ್ದಾರೆ.
CSK ತಂಡದ ಬೆಳವಣಿಗೆಯಲ್ಲಿ ಧೋನಿ ಪಾತ್ರ ಮಹತ್ವದ್ದಾಗಿದೆ ಎಂದರೆ ತಪ್ಪಿಲ್ಲ. ಐಪಿಎಲ್ ಕ್ರಿಕೆಟ್ ಟೂರ್ನಿ ಆರಂಭವಾದಾಗಿನಿಂದ ಧೋನಿ ನಿರಂತರವಾಗಿ ಆಡುತ್ತಿದ್ದಾರೆ.
IPL 2025 ಮಾರ್ಚ್ 21 ರಿಂದ ಪ್ರಾರಂಭವಾಗಿ ಮೇ 25 ರವರೆಗೆ ನಡೆಯಲಿದೆ. ಮಾರ್ಚ್ 23 ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ವಿಶೇಷ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಧೋನಿ, ಚೆನ್ನೈ ನಾಯಕ ರುದ್ರರಾಜ್ ಗಾಯಕ್ವಾಡ್ ಮತ್ತು ಕೆಲವು ಸ್ಟಾರ್ ಆಟಗಾರರು ಚೆನ್ನೈಗೆ ಆಗಮಿಸಿದ್ದಾರೆ. ಈ ವೇಳೆ ವಿಮಾನ ನಿಲ್ದಾಣಕ್ಕೆ ಬಂದ ಧೋನಿ, ತಾವು ಧರಿಸಿರುವ ಟಿ-ಶರ್ಟ್ ನಿಂದ ಗಮನ ಸೆಳೆಯುತ್ತಿದ್ದಾರೆ.
ಧೋನಿ ಅವರ ಟಿ-ಶರ್ಟ್ ಮೇಲೆ "ಒನ್ ಲಾಸ್ಟ್ ಟೈಮ್" ಎಂಬ ಮೋರ್ಸ್ ಕೋಡ್ ಇದೇ.. ಇದರ ಅರ್ಥ ಈ ಸೀಸನ್ ನಂತರ MSD ಐಪಿಎಲ್‌ಗೂ ವಿದಾಯ ಹೇಳುತ್ತಿರುವ ಸುಳಿವು ನೀಡಿದ್ದಾರೆ ಎನ್ನಲಾಗಿದೆ.
ಐಪಿಎಲ್ ಕ್ರಿಕೆಟ್ ಸರಣಿಯಿಂದ ಅವರು ಹಿಂದೆ ಸರಿದರೂ, ಚೆನ್ನೈ ತಂಡದ ಸಲಹೆಗಾರ ಅಥವಾ ಕೋಚ್ ಆಗಿ ಅವರು ಮುಂದುವರಿಯುತ್ತಾರೆ ಎಂದು ನಿರೀಕ್ಷೆಯೂ ಸಹ ಇದೆ.. ಮುಂದೆನಾಗುತ್ತೆ ಅಂತ ಕಾಯ್ದು ನೋಡಬೇಕಿದೆ..