Grey hair tips: ಒಂದು ಕಾಲದಲ್ಲಿ ಬಿಳಿ ಕೂದಲು 50 ಅಥವಾ 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಮಾತ್ರ ಕಾಣುತ್ತಿತ್ತು. ಆದರೆ ಈಗ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ.
Grey hair tips: ಒಂದು ಕಾಲದಲ್ಲಿ ಬಿಳಿ ಕೂದಲು 50 ಅಥವಾ 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಮಾತ್ರ ಕಾಣುತ್ತಿತ್ತು. ಆದರೆ ಈಗ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ.
ಕೂದಲನ್ನು ಕಪ್ಪಾಗಿಸಲು ಜನರು ಹಲವಾರು ರಾಸಾಯನಿಕಗಳ ಮೊರೆ ಹೋಗುತ್ತಾರೆ. ಆದರೆ, ಮನೆಯಲ್ಲಿಯೇ ನೀವು ಕೂದಲನ್ನು ಒಂದು ರೂಪಾಯಿ ಸಹ ಖರ್ಚು ಮಾಡದೆ ಕಪ್ಪಾಗಿಸಬಹುದು.
ಕೂದಲು ಬಿಳಿಯಾಗಲು ಹಲವು ಕಾರಣಗಳಿವೆ. ವಿಶೇಷವಾಗಿ ತಲೆಯಲ್ಲಿ, ಮೆಲನಿನ್ ಎಂಬ ಸಂಯುಕ್ತವು ಅದಕ್ಕೆ ಕಪ್ಪು ಬಣ್ಣವನ್ನು ನೀಡುತ್ತದೆ. ಇದು ಕಡಿಮೆಯಾದರೆ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತದೆ.
ಈ ಪೀಳಿಗೆಯ ಯುವಕರಿಗೆ ಹೊಂಗೆಯ ಮರ ಬಗ್ಗೆ ತಿಳಿಯದೆ ಇದ್ದರೂ, ನಿಮ್ಮ ಮನೆಯಲ್ಲಿರುವ ಹಿರಿಯರಿಗೆ ಬಹುಶಃ ತಿಳಿದಿರುತ್ತದೆ. ಈ ಮರವು ತುಂಬಾ ದೊಡ್ಡ ಮರ.
ಈ ಹೊಂಗೆಯ ಮರದಲ್ಲಿ ಬಿಡುವ ಕಾಯಿಗಳನ್ನು ಕಿತ್ತು ಒಣಗಿಸಿಕೊಳ್ಳಬೇಕು, ನಂತರ ಅವುಗಳನ್ನು ಒಡೆದು ಬೀಜಗಳನ್ನು ಹೊರಗೆ ತೆಗೆದುಕೊಳ್ಳಬೇಕು. ಇವುಗಳನ್ನು ಚೆನ್ನಾಗಿ ರುಬ್ಬಿ ಎಣ್ಣೆಯನ್ನು ಸೋಸಿಕೊಳ್ಳಬೇಕು.
ಈ ಎಣ್ಣೆ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿಯೂ ಸಹ ದೊರೆಯುತ್ತದೆ, ಆದರೆ ಅದು ಕಲಬೆರಿಕೆಯೂ ಆಗಿರಬಹುದು, ಆದ್ದರಿಂದ ನೀವು ನೈಸರ್ಗಿಕವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳುವುದು ಉತ್ತಮ.
ಈ ಎಣ್ಣೆಯನ್ನು ಕುದಿಸಿ ಅದಕ್ಕೆ ತೆಂಗಿನ ಎಣ್ಣೆಯನ್ನು ಬೆರೆಸಿ, ಕೂದಲಿಗೆ ಚೆನ್ನಾಗಿ ಹಚ್ಚಿ. ನಂತರ ನೆತ್ತಿಯನ್ನು ನಿಧಾನವಾಗಿ ಮಸಾಜ್ ಮಾಡಿ. ಒಂದು ಗಂಟೆ ಹಾಗೆಯೇ ಬಿಟ್ಟು ಸ್ನಾನ ಮಾಡಿ.
ವಾರಕ್ಕೆ ಎರಡು ಬಾರಿ ಈ ಎಣ್ಣೆಯನ್ನು ಹಚ್ಚುವುದರಿಂದ ನಿಮ್ಮ ಬಿಳಿ ಕೂದಲು ನೈಸರ್ಗಿಕವಾಗಿ ಕಾಣೆಯಾಗುತ್ತದೆ, ಮತ್ತೆಂದೂ ಬಿಳಿ ಕೂದಲು ಬರದಂತೆ ತಡೆಯುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಸಿದೆ, ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ.