Govinda Sunitha Divorce: ಬಾಲಿವುಡ್‌ನ 'ಹೀರೋ ನಂಬರ್ ಒನ್' ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ವಿಚ್ಛೇದನ ವದಂತಿಗಳ ನಡುವೆ ನಟ ಗೋವಿಂದ ಮೌನ ಮುರಿದಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬಾಲಿವುಡ್‌ನಲ್ಲಿ ಅಮೋಘ ಜೋಡಿ ಎಂತಲೇ ಹೆಸರುವಾಸಿಯಾಗಿದ್ದ ಬೇರೆಯವರಿಗೆ ಪ್ರೇರಣೆಯಂತಿದ್ದ ಜೋಡಿ ತಮ್ಮ ನಾಲ್ಕು ದಶಕದ ದಾಂಪತ್ಯಕ್ಕೆ ಕೊನೆಹಾಡಲಿದೆ ಎಂಬ ವದಂತಿ ಸದ್ಯ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಬಾಲಿವುಡ್ ನಟ ಗೋವಿಂದ ಮತ್ತವರ ಪತ್ನಿ ಸುನೀತಾ ಅಹುಜಾ ತಮ್ಮ 37 ವರ್ಷಗಳ ದಾಂಪತ್ಯ ಕೊನೆಗೊಳಿಸಲಿದ್ದಾರೆ ಎಂಬ ವದಂತಿಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಟ ಗೋವಿಂದ ಹಾಗೂ ಪತ್ನಿ ಸುನೀತಾ ಅವರದ್ದು ಪ್ರೇಮ ವಿವಾಹ. ಬೇರೆಯವರಿಗೆ ಆದರ್ಶವಾಗಿದ್ದ ಈ ದಂಪತಿಗಳು ಬೇರೆಯಾಗಲು ಸಾಧ್ಯವೇ ಇಲ್ಲ. ಬೇರೆಯವರ ದಾಂಪತ್ಯದಲ್ಲಿ ಇರುವಂತೆ ಇವರ ದಾಂಪತ್ಯದಲ್ಲೂ ಸಣ್ಣ-ಪುಟ್ಟ ಕೌಟುಂಬಿಕ ಕಲಹಗಳಿರಬಹುದು. ಈ ಬಿರುಕು ಖಂಡಿತವಾಗಿಯೂ ಶೀಘ್ರದಲ್ಲೇ ಪರಿಹಾರಗೊಳ್ಳಲಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮದು ಪ್ರೇಮ ವಿವಾಹ. ತುಂಬು ಕುಟುಂಬದಲ್ಲಿ ತಮ್ಮ ಜೀವನ ಬಹಳ ಸುಂದರವಾಗಿತ್ತು ಎಂಬ ಬಗ್ಗೆ ಗೋವಿಂದ ಪತ್ನಿ ಸುನೀತಾ ಅಹುಜಾ ಸ್ವತಃ ಹಲವಾರು ಕಾರ್ಯಕ್ರಮಗಳಲ್ಲಿ ಬಹಿರಂಗಪಡಿಸಿದ್ದಾರೆ. ಹೀಗಿದ್ದಾಗ, ಈ ದಾಂಪತ್ಯದಲ್ಲಿ ಬಿರುಕು ಮೂಡಲು ಸಾಧ್ಯವೇ? ಇದೊಂದು ಆಘಾತಕಾರಿ ವಿಷಯ ಎಂದು ಕೆಲವರು ಹೇಳಿದ್ದಾರೆ.
ನಟ ಗೋವಿಂದ ಮತ್ತು ಸುನೀತಾ ಅಹುಜಾ ಅವರ ವಿಚ್ಛೇದನ ವದಂತಿಗಳ ಕುರಿತು ಮಾತನಾಡಿರುವ ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ, "ಕುಟುಂಬದ ಕೆಲವು ಸದಸ್ಯರು ನೀಡಿರುವ ಹೇಳಿಕೆಗಳಿಂದಾಗಿ ಇಬ್ಬರ ನಡುವೆ ಬಿರುಕು ಉಂಟಾಗಿದೆ". ಅದನ್ನ ಬಿಟ್ಟು ಬೇರೇನೂ ಇಲ್ಲ. ಗೋವಿಂದ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ನಟ ಗೋವಿಂದ ಮತ್ತು ಪತ್ನಿ ಸುನೀತಾ ಅಹುಜಾ ಅವರ ನಡುವಿನ ವಿಚ್ಛೇದನದ ಬಗ್ಗೆ ಪ್ರತಿಕ್ರಿಯಿಸಿರುವ 'ಹೀರೋ ನಂಬರ್ ಒನ್' "ಇವು ಕೇವಲ ವ್ಯವಹಾರ ಮಾತುಕತೆಗಳು... ನಾನು ಸದ್ಯ ನನ್ನ ಮುಂಬರುವ ಚಿತ್ರದ ತಯಾರಿಯಲ್ಲಿದ್ದೇನೆ. ನಾನು ಆ ಪ್ರಕ್ರಿಯೆಯಲ್ಲಿ ನಿರತನಾಗಿದ್ದೇನೆ... " ಎಂದು ಹೇಳಿದ್ದಾರೆ.