ವಿಶ್ವ NGO ದಿನವನ್ನು ಪ್ರತಿವರ್ಷ ಫೆಬ್ರವರಿ-27 ರಂದು ಜಗತ್ತಿನೆಲ್ಲಡೆ ಆಚರಿಸಲಾಗುತ್ತದೆ. 2014 ರಲ್ಲಿ ವಿಶ್ವಸಂಸ್ಥೆಯು ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳು ಈ ದಿನವನ್ನು ಅಧಿಕೃತವಾಗಿ ಗುರ್ತಿಸಿದೆ.
ಹಿನ್ನಲೆ.
ವಿಶ್ವ NGO ದಿನದ ಪರಿಕಲ್ಪನೆಯನ್ನು ಮೊದಲಿಗೆ ಸೃಷ್ಟಿಸಿದವರು ಮಾರ್ಸಿಸ್ ಲಿಯರ್ಸ್ ಸ್ಕಡ್ಯಾನಿಸ್ ಬ್ರಿಟನ್ನ ಖ್ಯಾತ ವಕೀಲರು ಮತ್ತು ಸಮಾಜ ಸುಧಾರಕರು ಇವರು 2009-10 ರ ಸಾಲಿನಲ್ಲಿ NGO ವೇದಿಕೆಯನ್ನು ಅಂಗೀಕರಿಸಿದರು.
ಉದ್ದೇಶ:
NGO ಗಳಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಜನರನ್ನು ಪ್ರೇರೆಪಿಸುವುದು ಮತ್ತು ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನಡುವೆ ಹೆಚ್ಚಿನ ಸಹಬಾಗಿತ್ವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಜಗತ್ತಿನ ವಿವಿದೆಡೆ ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಸುತ್ತಿರುವ NGO ಗಳ ಕಾರ್ಯವನ್ನು ಶ್ಲಾಘಿಸುವುದು, ಸ್ಮರಿಸುವುದು ಮತ್ತು ಇನ್ನೂ ಉತ್ತಮವಾಗಿ ಅವುಗಳು ಕಾರ್ಯನಿರ್ವಹಿಸಲು ಜನತೆ ಹೇಗೆ ಸಹಕರಿಸಬೇಕು ಎಂದು ತಿಳಿಸುವುದು ವಿಶ್ವ NGO ದಿನದ ಸಾರ್ವತ್ರಿಕ ಪರಿಕಲ್ಪನೆಯಾಗಿದೆ. ವಿಶ್ವ NGO ದಿನವು ಜಗತ್ತಿನಾದ್ಯಂತ ಜ್ಞಾನ ಮತ್ತು ಅನುಭವಗಳನ್ನು ಪರಸ್ಪರ NGO ಗಳು ಹಂಚಿಕೊಳ್ಳುವ ದಿನವಾಗಿದೆ. ಈ ದಿನವು NGO ಸಂಸ್ಥಾಪಕರು ನೌಕರರು, ಸ್ವಯಂಸೇವಕರು, ಸದಸ್ಯರು ಮತ್ತು ಬೆಂಬಲಿಗರನ್ನು ಗೌರವಿಸಲು ಮತ್ತು ನೆನಪಿಟ್ಟುಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.
ಇದನ್ನೂ ಓದಿ: ಈ ರಕ್ತದ ಗುಂಪನವರಿಗ ಮೆದುಳಿನ ಪಾರ್ಶ್ವವಾಯು ಬರುವ ಅಪಾಯ ಹೆಚ್ಚು!
ರಾಷ್ಟ್ರ ನಿರ್ಮಾಣದಲ್ಲಿ NGO ಪಾತ್ರ:
ಸರ್ಕಾರ ನಿರ್ವಹಿಸುವಂತಹ ಎಷ್ಟೊಂದು ಕೆಲಸ-ಕಾರ್ಯಗಳಿಗೆ ಸಹಕಾರಿಯಾಗಿ ಸರ್ಕಾರೇತರ ಸಂಸ್ಥೆಗಳು ಕೆಲಸ ನಿರ್ವಹಿಸುತ್ತವೆ. ಸಮಾಜ ಮತ್ತು ಪ್ರಜೆಗಳ ಯೋಗಕ್ಷೇಮ ಪೂರೈಸುವ ವಿವಿದ ಸ್ಥಳಗಳಲ್ಲಿ ವೈಶಿಷ್ಟ್ಯ ಕಾರ್ಯವನ್ನು ಸರ್ಕಾರೇತರ ಸಂಸ್ಥೆಗಳು ನಿರ್ವಸುತ್ತವೆ.ಬಹುಮುಖ್ಯವಾಗಿ ಸರ್ಕಾರೇತರ ಸಂಸ್ಥೆಗಳ ನೀತಿಗಳು ಅಭಿವೃದ್ಧಿ ನಿಯಂತ್ರಣ ಸವಲತ್ತುಗಳನ್ನು ಪೂರೈಸುವಂತದ್ದು ಕಾರ್ಯಗಳ ನಿರ್ವಹಣೆ ಮಾಡುವಂತದ್ದು ಬಹುಮುಖ್ಯವಾಗಿ ಸುಸ್ಥಿರ ಅಭಿವೃದ್ಧಿ ಸಾದಿಸುವಂತಹ ಕೆಲಸ ಕಾರ್ಯಗಳನ್ನು ನಿರ್ವಹಿಸುವಂತದ್ದು ಸರ್ಕಾರೇತರ ಸಂಸ್ಥೆಗಳ ಕಾರ್ಯವಾಗಿರುತ್ತದೆ.
ಸಮಾಜದಲ್ಲಿ ರಾಷ್ಟ್ರದ ಪ್ರಜೆಗಳ ಕಲ್ಯಾಣಕ್ಕಾಗಿ ಸರ್ಕಾರ ನಿರ್ವಹಿಸುವ ಕಾರ್ಯಗಳಿಗೆ ಬೆಂಬಲವಾಗಿ ಆರ್ಥಿಕಾವಾಗಿ ಕಾರ್ಯವನ್ನು ನಿರ್ವಹಿಸುತ್ತವೆ, ಇಂತಹ ಉತ್ತಮ ಕೆಲಸ ಕಾರ್ಯಗಳ ಹೊರತಾಗಿಯೂ ನಿರ್ವಹಣೆ ವಿಷಯದಲ್ಲಿ ಕೆಲವೊಂದು ದೋಷಗಳು ಮತ್ತು ದುರ್ಬಲತೆಗಳು ಉಳಿದುಕೊಳ್ಳುತ್ತವೆ.ಈ ಪ್ರಕ್ರಿಯೆಯು ಕೇವಲ ಆರ್ಥಿಕ ಅಭಿವೃದ್ಧಿಗೆ ಜನರ ಯೋಗಕ್ಷೇಮಕ್ಕೆ ಸೀಮಿತವಲ್ಲದೆ ಇದು ಇನ್ನು ಕೆಲವು ಮಹತ್ವಪೂರ್ಣ ಅಂಶಗಳ ಬೆಳವಣಿಗೆಯನ್ನು ಸೂಚಿಸುತ್ತದೆ.
ಲೇಖಕರು: ಡಾ.ಡಿ.ಸಿ.ರಾಮಚಂದ್ರ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಮೂಲಗಳ ಮಾಹಿತಿ ಹಾಗೂ ಸಾಮಾನ್ಯ ಜ್ಞಾನವನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ.