Cyber Crime: ಅಭಿವೃಧ್ಧಿ ಹೊಂದುತ್ತಿರುವ ಪ್ರಪಂಚದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸ ಆವಿಷ್ಕಾರಗಳಾಗುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಇದರೊಂದಿಗೆ ಮೋಸ ಮಾಡುವ ಸೈಬರ್ ವಂಚನೆಗಳು ಸಹ ಗಣನೀಯವಾಗಿ ಹೆಚ್ಚಾಗುತ್ತಿವೆ. ಈ ರೀತಿಯ ಅಪರಾಧಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಸಹ ಹೆಚ್ಚಾಗಿ ನಡೆಯುತ್ತಿವೆ. ಸಾರ್ವಜನಿಕರಿಗೆ ಮೋಸ ಮಾಡಲು ಸೈಬರ್ ವಂಚಕರು ಒಂದಲ್ಲ ಒಂದು ಹೊಸ ಮಾರ್ಗಗಳನ್ನು ಕಂಡು ಹಿಡಿಯುತ್ತಲೇ ಇರುತ್ತಾರೆ.
ವಂಚನೆಗೆ ಹೊಸ ಹೊಸ ದಾರಿ ಹುಡುಕುತ್ತಿರುವ ಸೈಬರ್ ಕಳ್ಳರು, ಜನಸಾಮಾನ್ಯರಿಗೆ ಹಣದಾಸೆ ತೋರಿಸಿ ಅವರ ಬ್ಯಾಂಕ್ ಖಾತೆಗೆ ಖನ್ನ ಹಾಕುತ್ತಿದ್ದಾರೆ. ಗಮನಾರ್ಹವಾಗಿ, ಕಳೆದ ಮೂರು ವರ್ಷದಲ್ಲಿ (2021ರ ಏಪ್ರಿಲ್ 01 ರಿಂದ ಈಚೆಗೆ) ಈ ರೀತಿಯ ಸೈಬರ್ ವಂಚನೆಯಲ್ಲಿ ವಿವಿಧ ಖಾತೆಗಳಿಂದ ಸುಮಾರು 10,300 ಕೋಟಿ ರೂಪಾಯಿಗಳನ್ನು ದೋಚಲಾಗಿದ್ದು ಈ ಬಗ್ಗೆ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದಲ್ಲಿ ವರದಿಯಾಗಿದೆ.
ಇದನ್ನೂ ಓದಿ- ವಾಟ್ಸಾಪ್ ಓಪನ್ ಇದ್ಯಾ? ಆದ್ರೆ ಮೆಸೇಜ್ ಓದಕ್ಕೆ ಆಗಲ್ಲ! ಈ ಸೆಟ್ಟಿಂಗ್ ಚೇಂಜ್ ಮಾಡಿ....
ಬ್ಯಾಂಕ್ ಹೆಸರಿನಲ್ಲಿ ಯಾವ ರೀತಿ ವಂಚನೆ ಮಾಡುತ್ತಾರೆ?
ಬ್ಯಾಂಕ್ ಕೆವೈಸಿ ಅಪ್ಡೇಟ್ ಮಾಡುತ್ತೇವೆಂದು, ಇಲ್ಲವೇ ಪ್ರತಿಷ್ಠಿತ ಬ್ಯಾಂಕ್ಗಳ ಹೆಸರಲ್ಲಿ ನಕಲಿ ಅಪ್ಲಿಕೇಶನ್ ಡೆವಲಪ್ ಮಾಡಿದ್ದೇವೆ ಎಂದು ಸುಳ್ಳು ಹೇಳಿ ನಕಲಿ ಲಿಂಕ್ ಅನ್ನು ಮೆಸೇಜ್ ರೂಪದಲ್ಲಿ ಕಳುಹಿಸಿ, ಅದನ್ನು ಖಾತೆದಾರರಿಗೆ ಡೌನ್ಲೋಡ್ ಮಾಡುವಂತೆ ಹೇಳುವ ಮೂಲಕ ಮೋಸ ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದಲ್ಲದೆ ಈ ಲಿಂಕ್ ಕ್ಲಿಕ್ ಮಾಡಿದ್ರೆ ಇಷ್ಟು ಮೊತ್ತದ ಉಡುಗೊರೆ ಗಳಿಸುತ್ತೀರಿ ಎಂಬ ಆಸೆ ತೋರಿಸಿ ಜನರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಸೈಬರ್ ವಂಚನೆ ಬಗ್ಗೆ ಪೊಲೀಸರ ಎಚ್ಚರಿಕೆ:
ಇಂತಹ ಸೈಬರ್ ಅಪರಾಧಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಸೈಬರ್ ಪೊಲೀಸರು ಈ ರೀತಿಯ ಅನುಮಾನಾಸ್ಪದ ಬ್ಯಾಂಕಿಂಗ್ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡುವುದಾಗಲಿ ಅಥವಾ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದಾಗಲೀ ಮಾಡಬಾರದೆಂದು ಎಚ್ಚರಿಕೆಯ ಸಲಹೆ ನೀಡಿದ್ದಾರೆ.
ಇದನ್ನೂ ಓದಿ- ಫೋನ್ ಚಾರ್ಜ್ ನಿಧಾನವಾಗಿ ಕಡಿಮೆಯಾಗುತ್ತಿದೆಯೇ? ಹೀಗೆ ಮಾಡಿ ।
ದೇಶದಲ್ಲಿರುವ ದೊಡ್ಡ ದೊಡ್ಡ ಬ್ಯಾಂಕ್ಗಳ ಲೋಗೋ ಬಳಸಿ ಬ್ಯಾಂಕಿಂಗ್ ಅಪ್ಲಿಕೇಶನ್ ತಯಾರಿಸುವುದು. ಕಸ್ಟಮರ್ ಸರ್ವೀಸ್ ಹೆಸರಿನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕಿಸುವ ಮೂಲಕ ವಂಚನೆಗೆ ಮುಂದಾಗುವುದು ಇತ್ಯಾದಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಿಮ್ಮ ಮೊಬೈಲ್ ನಲ್ಲಿ ಮೊದಲು ನಕಲಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಸಿ ನಂತರ ಆಧಾರ್ ಕೆವೈಸಿ, ಪಾನ್ಕಾರ್ಡ್ಗಳಂತಹ ವೈಯಕ್ತಿಕ ದಾಖಲಾತಿಗಳ ವಿವರ ಪಡೆಯುತ್ತಾರೆ. ನಂತರ ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುವುದರ ಮೂಲಕ ಜನರು ಸಲೀಸಾಗಿ ಮೋಸಹೋಗುವಂತೆ ಮಾಡುತ್ತಾರೆ. ಇದನ್ನು ತಪ್ಪಿಸಲು ಲಿಂಕ್ ಮೂಲಕ ಬರುವ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡದಂತೆ ಪೊಲೀಸರು ಸಲಹೆ ನೀಡಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.