ಹೊರಗಡೆ ‘ಇಡ್ಲಿ’ತಿನ್ನೋ ಮುನ್ನ ಹುಷಾರ್..! ಕ್ಯಾನ್ಸರ್ ರೋಗಕ್ಕೆ ಆಹ್ವಾನ ನೀಡುತ್ತಂತೆ ʻಇಡ್ಲಿʼ..?

Idli: ಹೊರಗಡೆ ರಸ್ತೆ ಬದಿಯಲ್ಲಿ, ಹೊಟೇಲ್ ಗಳಲ್ಲಿ ಇಡ್ಲಿಗಳನ್ನು ಖರೀದಿಸುವ ಮುನ್ನ ಒಂದಲ್ಲ ಎರಡು ಬಾರಿ ಯೋಚಿಸಿ. 

Written by - Yashaswini V | Last Updated : Feb 27, 2025, 03:05 PM IST
  • ತಿಂಡಿ ಪ್ರಿಯರೇ ‘ಇಡ್ಲಿ’ ತಿನ್ನೋ ಮುನ್ನ ಜೋಪಾನ
  • ಕ್ಯಾನ್ಸರ್ ರೋಗಕ್ಕೆ ಆಹ್ವಾನ ನೀಡುತ್ತಂತೆ ʻಇಡ್ಲಿʼ..?
  • ಪ್ಲಾಸ್ಟಿಕ್ ಹಾಳೆ, ಕವರ್‌ಗಳ ಬಳಕೆ ಕ್ಯಾನ್ಸರ್‌ಗೆ ಕಾರಣ
ಹೊರಗಡೆ ‘ಇಡ್ಲಿ’ತಿನ್ನೋ ಮುನ್ನ ಹುಷಾರ್..! ಕ್ಯಾನ್ಸರ್ ರೋಗಕ್ಕೆ ಆಹ್ವಾನ ನೀಡುತ್ತಂತೆ ʻಇಡ್ಲಿʼ..? title=

Shocking Report On Idli: ಕೆಲವು ದಿನದ ಹಿಂದೆಯಷ್ಟೆಯೇ  ಬೀದಿಬದಿ ತಿನಿಸುಗಳಾದ ಗೋಬಿ ಮಂಚೂರಿ ಮತ್ತು ಕಬಾಬ್‌ ತಯಾರಿಕೆಯಲ್ಲಿ ಬಳಸುವ ಫುಡ್‌ ಕಲರ್‌ ಮನುಷ್ಯನ ದೇಹಕ್ಕೆ ಕ್ಯಾನ್ಸರ್‌ಕಾರಕವಾಗಿದೆ ಎಂದು ವರದಿಯಾಗಿತ್ತು. ಆರೋಗ್ಯಕ್ಕೆ ಹಾನಿಕಾರಕವಾದ ಇಂತಹ ಆಹಾರಗಳಿಗೆ ಕಡಿವಾಣ ಹಾಕಲು ಬ್ಯಾನ್ ಅಸ್ತ್ರವನ್ನೂ ಪ್ರಯೋಗಿಸಲಾಗಿತ್ತು. ಇದರ ಪರಿಣಾಮ ಕ್ರಮೇಣ ಅಡುಗೆಯಲ್ಲಿ ಕೃತಕ ಬಣ್ಣಗಳ ಬಳಗೆ ಕಡಿಮೆಯಾಯಿತು. ಇದೀಗ ಅನೇಕ ಜನರ ನೆಚ್ಚಿನ ಉಪಹಾರವಾದ ಇಡ್ಲಿಯ ಬಗ್ಗೆಯೂ ಅಂಥದ್ದೇ ಶಾಕಿಂಗ್ ಸುದ್ದಿಯೊಂದು ಕೇಳಿಬರುತ್ತಿದೆ.
 
ಹೊರಗಡೆ ರಸ್ತೆ ಬದಿಯಲ್ಲಿ, ಹೊಟೇಲ್ ಗಳಲ್ಲಿ ಇಡ್ಲಿಗಳನ್ನು ಖರೀದಿಸುವ ಮುನ್ನ ಒಂದಲ್ಲ ಎರಡು ಬಾರಿ ಯೋಚಿಸಿ. ಏಕೆಂದರೆ ಈ ಅಪಾಯಕಾರಿ ಅಂಶಗಳು ಇಡ್ಲಿ ತಯಾರಿಕೆಯಲ್ಲಿ ಬಳಸುವ ಯಾವುದೇ ಪದಾರ್ಥಗಳಲ್ಲಿ ಕಂಡುಬಂದಿಲ್ಲ; ಬದಲಾಗಿ ಇಡ್ಲಿ ಮಾಡುವ ವಿಧಾನದಲ್ಲಿ ಇದೆ. ಆಹಾರ ಹಾಗೂ ಗುಣಮಟ್ಟ ಇಲಾಖೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ 500 ಇಡ್ಲಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿದಾಗ ತಿಳಿದುಬಂದಿದ್ದೇನೆಂದರೆ ಇದರಲ್ಲಿ 35 ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್ಸ್ ಅನ್ ಸೇಪ್ ಆಗಿವೆ, ಈ ರೀತಿ ತಯಾರಾದ ಇಡ್ಲಿಗಳ ಸೇವನೆಯು ಕ್ಯಾನ್ಸರ್‌ ತರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ- Traffic Rules ಫಾಲೋ ಮಾಡು ಅಂದಿದ್ದಕೆ ಅ*ಶ್ಲೀಲ ಸನ್ನೆ ಮಾಡಿ ಕಾರು ಚಾಲಕ ಕಿರಿಕ್..! ವಿಡಿಯೋ ವೈರಲ್... ದೂರು ದಾಖಲು 
    
ಇಡ್ಲಿಯಿಂದ ಕ್ಯಾನ್ಸರ್‌ ಬರಲು ಏನು ಕಾರಣ? 

ಬೆಂಗಳೂರಿನ ಹಲವಡೆ ಇತ್ತೀಚೆಗೆ ಇಡ್ಲಿ ತಯಾರಿಕೆಯಲ್ಲಿ ಹತ್ತಿ ಬಟ್ಟೆಯ ಬದಲು ಪ್ಲಾಸ್ಟಿಕ್ ಕವರ್‌ ಬಳಕೆ ಮಾಡಲಾಗುತ್ತಿದೆ. ತಯಾರಿಕೆಯಲ್ಲಿ ಮಾತ್ರವಲ್ಲದೇ ಊಟ ಬಡಿಸುವಾಗ ಮತ್ತು ಪ್ಯಾಕ್ ಮಾಡುವಾಗಲೂ ಪ್ಲಾಸ್ಟಿಕ್ ಬಳಕೆ ಬಹುತೇಕ ಹೋಟೆಲ್‌ಗಳಲ್ಲಿ ಇದೆ. ಪ್ಲಾಸ್ಟಿಕ್ ಹಾಳೆ ಶಾಖಕ್ಕೆ ಒಡ್ಡಿಕೊಂಡು ಅಥವಾ ಕರಗಿ ಹಾನಿಕಾರಕ ಕೆಮಿಕಲ್‌ ವಸ್ತುವನ್ನು ಹೊರಸೂಸುತ್ತದೆ. ಇದು ಆಹಾರವನ್ನು ವಿಷಕಾರಿಯಾಗಿಸುವುದರೊಂದಿಗೆ ಕ್ಯಾನ್ಸರ್ ಕಾರಕವಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ- ಭೂ ಹಗರಣ ಪ್ರಕರಣ: ಸಂಕಷ್ಟದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ?!
    
ಈಗಾಗಲೇ ಸುಮಾರು 35 ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್ಸ್  ಹಾನಿಕಾರಕ ಎಂದು ತಿಳಿದು ಬಂದಿದ್ದು ಉಳಿದ ನೂರಾರು ಇಡ್ಲಿ ಸ್ಯಾಂಪಲ್ಸ್ ನ ವರದಿಗಾಗಿ ಆಹಾರ ಇಲಾಖೆ ಕಾಯುತ್ತಿದೆ. ಪೂರ್ಣ ವರದಿ ಬಳಿಕ ಪ್ಲಾಸ್ಟಿಕ್ ಪೇಪರ್ ಗಳನ್ನು ಬ್ಯಾನ್  ಮಾಡಲು ಮುಂದಾಗಲಿದೆ ಎನ್ನಲಾಗುತ್ತಿದೆ.

ಇಡ್ಲಿ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂಬ ವರದಿಯ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಹೋಟೆಲ್ ಸಂಘದ ಅಧ್ಯಕ್ಷ ಪಿಸಿ.ರಾವ್, ಪ್ರತಿಷ್ಠಿತ ಹೋಟೆಲ್ಗಳಲ್ಲಿ ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಬಳಕೆ ಮಾಡಲ್ಲ. ನಾನ್ ಸ್ಟಿಕ್ ಪ್ಲೇಟ್, ಹಾಗೆ ಇಡ್ಲಿ ಮಾಡುವಾಗ ಬಟ್ಟೆ ಬಳಕೆ ಮಾಡಲಾಗುತ್ತದೆ. ಸದ್ಯ ಎಲ್ಲಾ ಹೋಟೆಲ್ಗಳಲ್ಲಿ ಈ ರೂಲ್ಸ್ ಪಾಲನೆ ಮಾಡಲಾಗುತ್ತಿದೆ. ಈಗಾಗಲೇ ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News