SBI ಬ್ಯಾಂಕಿನಲ್ಲಿ ಖಾತೆ ಇದ್ಯಾ? ದಾಖಲೆಗಳಿಲ್ಲದೆಯೂ ಸಿಗುತ್ತೆ 35 ಲಕ್ಷ ರೂ.ವರೆಗೆ ಸಾಲ...

State Bank Of India: ದೇಶದ ಅತಿದೊಡ್ಡ ಸರ್ಕಾರಿ ವಲಯ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವವರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್. 

Written by - Yashaswini V | Last Updated : Feb 27, 2025, 12:43 PM IST
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದೀರಾ...
  • ಎಸ್‌ಬಿ‌ಐ ಗ್ರಾಹಕರಿಗೆ ಗುಡ್ ನ್ಯೂಸ್
  • ಮೂರರಿಂದ 35 ಲಕ್ಷ ರೂ.ವರೆಗೆ ಸಿಗುತ್ತೆ ಸುಲಭ ಸಾಲ ಸೌಲಭ್ಯ
SBI ಬ್ಯಾಂಕಿನಲ್ಲಿ ಖಾತೆ ಇದ್ಯಾ? ದಾಖಲೆಗಳಿಲ್ಲದೆಯೂ ಸಿಗುತ್ತೆ 35 ಲಕ್ಷ ರೂ.ವರೆಗೆ ಸಾಲ...  title=

SBI: ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಒಂದಿದೆ. ನೀವು ಎಸ್‌ಬಿ‌ಐ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ ಹೆಚ್ಚಿನ ದಾಖಲೆಗಲಿಲ್ಲದೆಯೂ 35 ಲಕ್ಷ ರೂ.ವರೆಗೂ ಸಾಲ ಪಡೆಯುವ ಅವಕಾಶ ನಿಮ್ಮದಾಗಲಿದೆ. 

ಬ್ಯಾಂಕಿನಲ್ಲಿ ಸಾಲ ಪಡೆಯಬೇಕೆಂದರೆ ಅದಕ್ಕಾಗಿ ದಾಖಲೆಗಳನ್ನು ಹೊಂದಿಸುವುದೇ ದೊಡ್ಡ ತಲೆ ಬಿಸಿ. ಯಾವುದಾದರೂ ಒಂದು ದಾಖಲೆ ಸರಿಯಿಲ್ಲವೆಂದರೂ ಸಾಲ ಸಿಗುವುದೇ ಇಲ್ಲ. ಏತನ್ಮಧ್ಯೆ ತನ್ನ ಗ್ರಾಹಕರಿಗೆ ಅನುಕೂಲವಾಗಲೆಂದು ಎಸ್‌ಬಿ‌ಐ ಬ್ಯಾಂಕ್ "ಎಸ್‌ಬಿ‌ಐ ಎಕ್ಸ್ಪ್ರೆಸ್ ಇಲೈಟ್" (SBI Xpress Elite) ಎಂಬ ಹೊಸ ಸಾಲ ಯೋಜನೆಯನ್ನು ಪರಿಚಯಿಸಿದೆ. 

"ಎಸ್‌ಬಿ‌ಐ ಎಕ್ಸ್ಪ್ರೆಸ್ ಇಲೈಟ್" ಎಂಬುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪರಿಚಯಿಸಲ್ಪಟ್ಟಿರುವ ವೈಯಕ್ತಿಕ ಸಾಲ/ ಪರ್ಸನಲ್ ಸಾಲ ಯೋಜನೆಯಾಗಿದ್ದು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಲಭ್ಯವಿರುವ ಈ ಸಾಲ ಯೋಜನೆಯ ಪ್ರಯೋಜನವನ್ನು ಪಡೆಯಲು ಕನಿಷ್ಠ ದಾಖಲೆಗಳಷ್ಟೇ ಸಾಕು ಎಂಬುದು ವಿಶೇಷವಾಗಿದೆ. 

ಇದನ್ನೂ ಓದಿ- UAN ಅಗತ್ಯವಿಲ್ಲ, ಎಸ್ಎಂಎಸ್, ಮಿಸ್ಡ್ ಕಾಲ್ ಮೂಲವೇ 'ಪಿ‌ಎಫ್' ಬ್ಯಾಲೆನ್ಸ್ ಚೆಕ್ ಮಾಡಬಹುದು..!

"ಎಸ್‌ಬಿ‌ಐ ಎಕ್ಸ್ಪ್ರೆಸ್ ಇಲೈಟ್" ಸಾಲ ಯೋಜನೆಯಡಿಯಲ್ಲಿ 3 ಲಕ್ಷ ರೂ.ಗಳಿಂಡ್ 35 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ ಲಭ್ಯವಾಗಲಿದೆ. ಇದರ ಬಡ್ಡಿದರ 11.45%ನಿಂದ ಆರಂಭವಾಗುತ್ತದೆ. ಸಾಲದ ಮೊತ್ತದ ಮೇಲೆ ಸಂಸ್ಕರಣ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಶುಲ್ಕವು ಕನಿಸ್ತ 1000 ರೂ. ಗಳಿಂದ ಗರಿಷ್ಠ 15,000 ರೂ.ವರೆಗೆ ಇರಲಿದೆ. 

ಇದನ್ನೂ ಓದಿ- 8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್! ಸಿಗುತ್ತೆ ಕನಿಷ್ಠ 5 ಪ್ರಮೋಷನ್..!

"ಎಸ್‌ಬಿ‌ಐ ಎಕ್ಸ್ಪ್ರೆಸ್ ಇಲೈಟ್" ಸಾಲ ಸೌಲಭ್ಯ ಪಡೆಯಲು ಯಾರು ಅರ್ಹರು: 
ಎಸ್‌ಬಿ‌ಐ ಪರಿಚಯಿಸಿರುವ "ಎಸ್‌ಬಿ‌ಐ ಎಕ್ಸ್ಪ್ರೆಸ್ ಇಲೈಟ್" ಯೋಜನೆಯು ವೇತನ ವರ್ಗದವರಿಗಾಗಿ ಆಗಿದ್ದು, ಎಸ್‌ಬಿ‌ಐ ಬ್ಯಾಂಕಿನಲ್ಲಿ ವೇತನ ಖಾತೆ ಹೊಂದಿರುವವರಿಗೆ ಈ ಯೋಜನೆ ಲಾಭದಾಯಕವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಮಾತ್ರವಲ್ಲದೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗಸ್ಥರಾರಿಗುಯವರು ಕನಿಷ್ಠ 1 ಲಕ್ಷ ರೂ.ವರೆಗೆ ವೇತನ ಹೊಂದಿರುವವರು ಈ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News