ಈ ರಕ್ತದ ಗುಂಪಿನವರಿಗ ಮೆದುಳಿನ ಪಾರ್ಶ್ವವಾಯು ಬರುವ ಅಪಾಯ ಹೆಚ್ಚು!

Brain Stroke: ಮೆದುಳಿಗೆ ರಕ್ತ ಪೂರೈಸುವ ರಕ್ತನಾಳಗಳಲ್ಲಿ ಅಡಚಣೆ ಉಂಟಾದಾಗ ಸೆರೆಬ್ರಲ್ ಹೆಮರೇಜ್ ಎಂದೂ ಕರೆಯಲ್ಪಡುವ ಬ್ರೈನ್ ಸ್ಟ್ರೋಕ್ ಸಂಭವಿಸುತ್ತದೆ. ಇದು ಸಾವು ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿದೆ.  

Written by - Zee Kannada News Desk | Last Updated : Feb 27, 2025, 04:06 PM IST
  • ರಕ್ತನಾಳಗಳಲ್ಲಿ ಅಡಚಣೆ ಉಂಟಾದಾಗ ಸೆರೆಬ್ರಲ್ ಹೆಮರೇಜ್ ಎಂದೂ ಕರೆಯಲ್ಪಡುವ ಬ್ರೈನ್ ಸ್ಟ್ರೋಕ್ ಸಂಭವಿಸುತ್ತದೆ.
  • ರಕ್ತದ ಗುಂಪು ಕೂಡ ಪಾರ್ಶ್ವವಾಯು ಅಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನ ಕಂಡು ಹಿಡಿದಿದೆ.
  • ನಿಖರವಾದ ಕಾರಣ ಏನ ಎಂಬುದು ಇನ್ನೂ ಸಹ ಸಂಪೂರ್ಣವಾಗಿ ತಿಳಿದು ಬಂದಿಲ್ಲ.
ಈ ರಕ್ತದ ಗುಂಪಿನವರಿಗ ಮೆದುಳಿನ ಪಾರ್ಶ್ವವಾಯು ಬರುವ ಅಪಾಯ ಹೆಚ್ಚು! title=

Brain Stroke: ಮೆದುಳಿಗೆ ರಕ್ತ ಪೂರೈಸುವ ರಕ್ತನಾಳಗಳಲ್ಲಿ ಅಡಚಣೆ ಉಂಟಾದಾಗ ಸೆರೆಬ್ರಲ್ ಹೆಮರೇಜ್ ಎಂದೂ ಕರೆಯಲ್ಪಡುವ ಬ್ರೈನ್ ಸ್ಟ್ರೋಕ್ ಸಂಭವಿಸುತ್ತದೆ. ಇದು ಸಾವು ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿದೆ.

ಮೆದುಳಿನ ಪಾರ್ಶ್ವವಾಯುವಿಗೆ ಹಲವು ಕಾರಣಗಳಿವೆ, ಅವುಗಳಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಧೂಮಪಾನ ಮತ್ತು ಬೊಜ್ಜು ಕೂಡ ಮುಖ್ಯ ಕಾರಣಗಳಾಗಿರಬಹುದು. ಇತ್ತೀಚಿನ ಸಂಶೋಧನೆಯು ವ್ಯಕ್ತಿಯ ರಕ್ತದ ಗುಂಪು ಕೂಡ ಪಾರ್ಶ್ವವಾಯು ಅಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನ ಕಂಡು ಹಿಡಿದಿದೆ.

ಅಮೇರಿಕನ್ ಅಕಾಡೆಮಿ ಆಫ್ ನ್ಯೂರಾಲಜಿಯ ಜರ್ನಲ್ 'ನ್ಯೂರಾಲಜಿ'ಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 'ಎ' ರಕ್ತದ ಗುಂಪು ಹೊಂದಿರುವ ಜನ 60 ವರ್ಷಕ್ಕಿಂತ ಮೊದಲು ಪಾರ್ಶ್ವವಾಯುವಿಗೆ ಒಳಗಾಗುವ ಅಪಾಯ ಹೆಚ್ಚು ಎಂದು ತೋರಿಸಿಕೊಟ್ಟಿದೆ. ಈ ಅಧ್ಯಯನದಲ್ಲಿ, ವಿಶ್ವಾದ್ಯಂತ 17,000 ಪಾರ್ಶ್ವವಾಯು ರೋಗಿಗಳು ಮತ್ತು 600,000 ಆರೋಗ್ಯವಂತ ಜನರ ಡೇಟಾವನ್ನು ವಿಶ್ಲೇಷಿಸಲಾಗಿದ್ದು,  ಈ ವಿಶ್ಲೇಷಣೆಯಲ್ಲಿ, 'A' ರಕ್ತದ ಗುಂಪು ಹೊಂದಿರುವ ಜನರು ಇತರರಿಗೆ ಹೋಲಿಸಿದರೆ 16% ಪಾರ್ಶ್ವವಾಯುವಿನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ತಿಳಿದು ಬಂದಿದೆ. 'O' ರಕ್ತದ ಗುಂಪು ಹೊಂದಿರುವ ಜನರು ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯ ತುಂಬಾ ಕಡಿಮೆ ಎಂದು ಅಧ್ಯಯನದ ಮೂಲಕ ಕಂಡು ಹಿಡಿಯಲಾಗಿದೆ.

'ಎ' ರಕ್ತದ ಗುಂಪು ಹೊಂದಿರುವವರಿಗೆ ರಕ್ತ ಹೆಪ್ಪುಗಟ್ಟುವಿಕೆ ಆಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಕಂಡು ಹಿಡಿದಿದ್ದು. ರಕ್ತ ಹೆಪ್ಪುಗಟ್ಟುವಿಕೆ ಪಾರ್ಶ್ವವಾಯುವಿಗೆ ಪ್ರಮುಖ 47 ಕಾರಣಗಳಲ್ಲಿ ಒಂದಾಗಿದ್ದು, ಇದಕ್ಕೆ ನಿಖರವಾದ ಕಾರಣ ಏನ ಎಂಬುದು ಇನ್ನೂ ಸಹ ಸಂಪೂರ್ಣವಾಗಿ ತಿಳಿದು ಬಂದಿಲ್ಲ. ಇತರ ಅಂಶಗಳನ್ನು ಸಹ ಗಣನೆಗೆ ತೆಗೆದುಕೊಂಡಾಗ, ಈ ಪರಿಣಾಮವು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಈ ಪರಿಣಾಮ ಸ್ವಲ್ಪ ಹೆಚ್ಚಾಗಿ ಕಂಡುಬಂದಿದ್ದು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಇತರ ಅಪಾಯಕಾರಿ ಅಂಶಗಳನ್ನು ಹೊಂದಿರುವ ಜನರಲ್ಲಿ ರಕ್ತದ ಗುಂಪಿನ ಮೇಲಿನ ಪ್ರಭಾವ ಇನ್ನೂ ಹೆಚ್ಚಾಗಿರುತ್ತದೆ.

'A' ರಕ್ತದ ಗುಂಪು ಹೊಂದಿರುವ ಜನರಿಗೆ ಪಾರ್ಶ್ವವಾಯು ಬರುವ ಅಪಾಯ ಸ್ವಲ್ಪ ಹೆಚ್ಚಿದ್ದರೂ, ಇದು ಕೇವಲ ಒಂದು ಸಣ್ಣ ಅಪಾಯಕಾರಿ ಅಂಶ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ನಿಮ್ಮ ರಕ್ತದ ಪ್ರಕಾರ ಏನೇ ಇರಲಿ, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು, ನಿಮ್ಮ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಧೂಮಪಾನವನ್ನು ತ್ಯಜಿಸುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ನೀವು ಪಾರ್ಶ್ವವಾಯು ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗ ಮೂಲಗಳ ಮಾಹಿತಯನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತಪಡಿಸುವುದಿಲ್ಲ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News