61ನೇ ವಯಸ್ಸಿಗೆ ಡಿವೋರ್ಸ್... 37ವರ್ಷಗಳ ದಾಂಪತ್ಯ ಅಂತ್ಯ! ನಟ ಗೋವಿಂದ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ..!

Govinda Net Worth: ಬಾಲಿವುಡ್‌ನಲ್ಲಿ ಡಾನ್ಸ್ ಐಕಾನ್ ಅಂತಲೇ ಗುರುತಿಸಲ್ಪಟ್ಟಿರುವ ಸೂಪರ್ ಸ್ಟಾರ್ ಗೋವಿಂದ ಸದ್ಯ ತಮ್ಮ ವಿಚ್ಛೇದನದ ಸುದ್ದಿಯಿಂದಾಗಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. 

Govinda Net Worth: 61ರ ಹರೆಯದ ನಟ ಗೋವಿಂದ ತಮ್ಮ ಪತ್ನಿ ಸುನೀತಾ ಅಹುಜಾ ಅವರಿಂದ ಡಿವೋರ್ಸ್ ಪಡೆಯಲಿದ್ದಾರೆ. ಈ ಮೂಲಕ ತಮ್ಮ 37 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಬಾಲಿವುಡ್‌ನಲ್ಲಿ ಡಾನ್ಸ್ ಐಕಾನ್ ಎಂದೇ ಖ್ಯಾತಿ ಪಡೆದಿರುವ ತಮ್ಮ ಅಮೋಘ ನೃತ್ಯದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟ ಗೋವಿಂದ 1986ರಲ್ಲಿ ಲವ್ 86 ಸಿನಿಮಾದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದರು. 

2 /8

ಕೂಲಿ ನಂ 1,  ಬಡೇ ಮಿಯಾನ್ ಚೋಟೆ ಮಿಯಾನ್, ಪಾರ್ಟ್‌ನರ್, ದುಲ್ಹೆ ರಾಜ, ಆಂಖೇನ್, ರಾಜ ಬಾಬು, ದೀವಾನಾ ಮಸ್ತಾನಾ, ಹಸೀನಾ ಮಾನ್ ಜಾಯೇಗಿ ಸೇರಿದಂತೆ ಸುಮಾರು 130ಕ್ಕೂ ಹೆಚ್ಚು ಸೂಪರ್‌ಹಿಟ್‌ ಸಿನಿಮಾಗಳಲ್ಲಿ ನಟಿಸಿರುವ ನಟ ಗೋವಿಂದ ಸುಮಾರು ನಾಲ್ಕು ದಶಕಗಳಿಂದ ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 

3 /8

1990ರ ದಶಕದಲ್ಲಿ ವಿಶೇಷ ಶೈಲಿಯ ನೃತ್ಯದ ಮೂಲಕ ಮನೆ ಮಾತಾಗಿದ್ದ ನಟ ಗೋವಿಂದ ಹಿಂದಿ ಚಿತ್ರರಂಗದಲ್ಲಿ ಅತಿದೊಡ್ಡ ಸೂಪರ್‌ಸ್ಟಾರ್. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಬ್ರಾಂಡ್ ಅನುಮೋದನೆಗಳು, ರಿಯಲ್ ಎಸ್ಟೇಟ್ ಉದ್ಯಮದ ಮೂಲಕವೂ ಕೋಟ್ಯಾಂತರ ರೂಪಾಯಿ ಆಸ್ತಿ ಗಳಿಸಿದ್ದಾರೆ. 

4 /8

ನಟ ಗೋವಿಂದ ವಾಣಿಜ್ಯ ನಗರಿ ಮುಂಬೈನಲ್ಲಿ ಮೂರು ಭವ್ಯ ಬಂಗಂಲೆಗಳನ್ನು ಹೊಂದಿದ್ದಾರೆ. ಜುಹುವಿನಲ್ಲಿರುವ ಅವರ್ ಬಂಗಲೆ ಮೌಲ್ಯ ಸುಮಾರು 16 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 

5 /8

ರೂಯಾ ಪಾರ್ಕ್ ಮತ್ತು ಮಾಧ್ ದ್ವೀಪದಲ್ಲಿಯೂ ಆಸ್ತಿ ಹೊಂದಿದ್ದಾರೆ. ಮಾಧ್ ದ್ವೀಪದಲ್ಲಿರುವ ಮನೆಯನ್ನು ಸಿನಿಮಾ ಚಿತ್ರೀಕರಣಕ್ಕೆ ಬಳಸಿದರೆ, ರೂಯಾ ಪಾರ್ಕ್‌ನಲ್ಲಿರುವ ಆಸ್ತಿಯನ್ನು ಬಾಡಿಗೆಗೆ ನೀಡಲಾಗಿದೆ.  ಇದಲ್ಲದೆ, ಹೀರೋ ನಂ.1 ಲಕ್ನೋದಲ್ಲಿ 90,000 ಚ. ಅಡಿ ವಿಸ್ತೀರಣದ ತೋಟದ ಮನೆಯನ್ನು ಹೊಂದಿದ್ದಾರೆ. 

6 /8

ನಟ ಗೋವಿಂದ ದುಬಾರಿ ಕಾರುಗಳ ಸಂಗ್ರಹವನ್ನು ಸಹ ಹೊಂದಿದ್ದಾರೆ. ಇದರಲ್ಲಿ 43ಲಕ್ಷ ರೂ ಮೌಲ್ಯದ  ಮರ್ಸಿಡಿಸ್ C220D, 64 ಲಕ್ಷ ರೂ. ಮೊಲ್ಯದ ಮರ್ಸಿಡಿಸ್ ಬೆಂಜ್ GLC ಯಂತಹ ಹಲವು ಐಷಾರಾಮಿ ಕಾರುಗಳು ಕೂಡ ಸೇರಿವೆ. 

7 /8

ಮಾಧ್ಯಮ ವರದಿಗಳ ಪ್ರಕಾರ, ನಟ ಗೋವಿಂದ ಅವರ ನಿವ್ವಳ ಮೌಲ್ಯ ಸುಮಾರು 150 ರಿಂದ 170 ಕೋಟಿ ರೂ.ಗಳಷ್ಟಿದೆ.   

8 /8

61ವರ್ಷದ ನಟ ಗೋವಿಂದ ತಮ್ಮ ಪತ್ನಿ ಸುನೀತಾ ಅಹುಜಾ ಅವರೊಂದಿಗಿನ 37 ವರ್ಷಗಳ ಸುಂದರ ದಾಂಪತ್ಯವನ್ನು ಕೊನೆಗೊಳಿಸಲಿದ್ದಾರೆ. ಶೀಘ್ರದಲ್ಲೇ ಈ ದಂಪತಿ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದ್ರೆ, ಗೋವಿಂದ ಕುಟುಂಬದ ಆಪ್ತ ಮೂಲಗಳು ಈ ವದಂತಿಯನ್ನು ನಿರಾಕರಿಸಿವೆ.